ಮಾರಾಟ ಕುಸಿತ, ಆದಾಯ ಜಿಗಿತ! ಅಬಕಾರಿ ಇಲಾಖೆ ಆದಾಯ ವೃದ್ಧಿ

Gadag
Gadag
Published on
35 ಕೋಟಿ ಮೊತ್ತದ ಲಿಕ್ಕರ ಅಧಿಕ ಮಾರಾಟ. 3 ಕೋಟಿ ಮೊತ್ತದ ಬಿಯರ್​ ಕಡಿಮೆ ಮಾರಾಟ
2025-26ನೇ ಸಾಲಿನಲ್ಲಿ 340 ಕೋಟಿ ಮೊತ್ತದ ಲಿಕ್ಕರ್​, 47 ಕೋಟಿ ಮೊತ್ತದ ಬಿಯರ್​ ಮಾರಾಟ.
ರೋಣದಲ್ಲಿ ಅಧಿಕ! ಮುಂಡರಗಿಯಲ್ಲಿ ಕಡಿಮೆ ಮಾರಾಟ.
ಶಿವಾನಂದ ಹಿರೇಮಠ ಗದಗ
ಅತೀವೃಷ್ಟಿ, ಅನಾವೃಷ್ಟಿ, ಬೆಳೆ ಹಾನಿ, ಬೇಸಿಗೆ, ಮಳೆಗಾಲ, ಯುದ್ಧೋನ್ಮಾದ, ರೂಪಾಯಿ ಕುಸಿತ, ಪೆಟ್ರೋಲ್​ ಬೆಲೆ ಏರಿಕೆ ಇಂತಹ ಯಾವುದೇ ಕಾರಣಗಳು ಅಬಕಾರಿ ಇಲಾಖೆಯ ವ್ಯವಹಾರಕ್ಕೆ ಬಿಸಿ ತಟ್ಟುವುದುದಿಲ್ಲ. ಬೆಲೆ ಏರಿಕೆ ಆದರೂ ಬ್ರ್ಯಾಂಡ್​ ಬದಲಾಯಿಸುತ್ತಾರೆ ವಿನಹ ಕುಡಿತ ನಿಲ್ಲಿಸುವುದಿಲ್ಲ. ಹೀಗಾಗಿ ಅಬಕಾರಿ ಎಂದಿಗೂ ಲಾಭದ ಉದ್ದಿಮೆಯೇ ಎಂಬ ಸತ್ಯ 2025&26 ನೇ ಸಾಲಿ ಆಥಿರ್ಕ ವರ್ಷದ ಅಂಕಿ ಅಂಶಗಳು ಹೇಳುತ್ತಿವೆ. ಕಳೆದ 2025ರ ಏಪ್ರಿಲ್​ ನಿಂದ ಅನೇಕ್​ ಲಿಕ್ಕರ್​ ಬ್ರ್ಯಾಂಡ್​ ಹಾಗೂ ಬಿಯರ್​ಗಳ ಬೆಲೆ ಏರಿಕೆ ನಡುವೆಯೂ ಗದಗ ಜಿಲ್ಲೆಯ ಅಬಕಾರಿ ಇಲಾಖೆ ರಾಜ್ಯಕ್ಕೆ ಉತ್ತಮ ಆದಾಯವನ್ನೇ ನೀಡಿದೆ. 2024-25 ನೇ ಸಾಲಿಗಿಂತ 2025&26ನೇ ಸಾಲಿನಲ್ಲಿ ಲಿಕ್ಕರ್​ ಮತ್ತು ಬಿಯರ್​ ಬಾಕ್ಸ್​ಗಳ ಮಾರಾಟದಲ್ಲಿ ಸ್ವಲ್ಪ ಕುಸಿತ ಕಂಡರೂ ಸಹ ಬೆಲೆಗಳ ಏರಿಕೆ ಹಿನ್ನೆಲೆ ಲಿಕ್ಕರ್​ ಆದಾಯ ಅಧಿಕವಾಗಿದೆ.
ಐಎಂಎಲ್​ ಮಾರಾಟ:
ಜಿಲ್ಲೆಯಲ್ಲಿ 2024 -25ನೇ ಸಾಲಿನಲ್ಲಿ ಐಎಂಎಲ್​(ಇಂಡಿಯನ್​ ಮೇಡ್​ ಲಿಕ್ಕರ್​) 8.40 ಲಕ್ಷ ಬಾಕ್ಸ್​ ಮಾರಾಟದಿಂದ ಜಿಲ್ಲೆಗೆ 306.34 ಕೋಟಿ ಮೊತ್ತದ ವ್ಯವಹಾರ ನಡೆದಿತ್ತು. 2025&26 ನೇ ಸಾಲಿನಲ್ಲಿ ಬೆಲೆ ಏರಿಕೆ ಹಾಗೂ ನಾನಾ ಕಾರಣದಿಂದ 8.35 ಲಕ್ಷ ಬಾಕ್ಸ್​ (ಕಳೆದ ಬಾರಿಗಿಂತ 5 ಲಕ್ಷ ಕಡಿಮೆ) ಮಾರಾಟವಾಗಿದೆ. ಆದರೆ, 340.54 ಕೋಟಿ ಮೊತ್ತದ ವ್ಯವಹಾರ ನಡೆದಿದ್ದು, ಕಳೆದ ಬಾರಿಗಿಂತ ಲಿಕ್ಕರ್​ ಮಾರಾಟದಲ್ಲಿ 35 ಕೋಟಿ ಮೊತ್ತದ ವ್ಯವಹಾರ ಅಧಿಕವಾಗಿದೆ. ತಾಲೂಕು ವಾರು ನೋಡುವುದಾದರೆ, ರೋಣ ತಾಲೂಕಿನಲ್ಲಿ 2024&25ನೇ ಸಾಲಿಗಿಂತ 2025&26ನೇ ಸಾಲಿನಲ್ಲಿ 2164 ಲಿಕ್ಕರ್​ ಬಾಕ್ಸ್​ಗಳು ಅಧಿಕ ಮಾರಾಟವಾಗಿದ್ದು, ಇನ್ನೂಳಿದ ತಾಲೂಕಿನಲ್ಲಿ ಕಳೆದ ಬಾರಿಗಿಂತ ಕಡಿಮೆ ಲಿಕ್ಕರ್​ ಬಾಕ್ಸ್​ಗಳು ಮಾರಾಟ ಆಗಿವೆ.
ಬಿಯರ್​ ಮಾರಾಟ ಕುಸಿತ:
ಬಿಯರ್​ ಮಾರಾಟದಲ್ಲಿ ಅಬಕಾರಿ ಇಲಾಖೆ ಕಳೆದ ಬಾರಿಗಿಂತ ಪ್ರಸಕ್ತ ಸಾಲಿನಲ್ಲಿ 3 ಕೋಟಿ ಮೊತ್ತದ ಕಡಿಮೆ ಪ್ರಗತಿ ಸಾಧಿಸಿದೆ. 2024&25ನೇ ಸಾಲಿನಲ್ಲಿ 4.09 ಲಕ್ಷ ಬಾಕ್ಸ್​ಗಳು ಮಾರಾಟವಾಗಿ, 50.05 ಕೋಟಿ ಆಥಿರ್ಕ ಸಂಪನ್ಮೂಲ ಹರಿದು ಬಂದಿತ್ತು. 2025&26ನೇ ಸಾಲಿನಲ್ಲಿ 3.38 ಲಕ್ಷ ಬಾಕ್ಸ್​ (ಕಳೆದ ಬಾರಿಗಿಂತ 71 ಸಾವಿರ ಬಾಕ್ಸ್​ ಕಡಿಮೆ) ಮಾರಾಟವಾಗಿ 47.05 ಕೋಟಿ ಮೊತ್ತದ ಆಥಿರ್ಕ ಸಂಪನ್ಮೂಲ ಜಿಲ್ಲೆಗೆ ಹರಿದು ಬಂದಿದೆ. ರೋಣ ತಾಲೂಕಿನ ಬಿಯರ್​ ಬಾಕ್ಸ್​ಗಳು ಅತೀ ಕಡಿಮೆ ಮಾರಾಟ ಆಗಿದ್ದು ಅಂಕಿ ಅಂಶಗಳಿಂದ ತಿಳಿದು ಬಂದಿದೆ.
2025ರಲ್ಲಿ ಜೂನ್​ ಮತ್ತು ಜುಲೈ ತಿಂಗಳ ಅತೀವೃಷ್ಠಿ, ಅನಾವೃಷ್ಟಿ ಪರಿಣಾಮ ಲಿಕ್ಕರ ಮತ್ತು ಬಿಯರ್​ ಬಾಕ್ಸ್​ಗಳ ಮಾರಾಟದಲ್ಲಿ ತೀವ್ರ ಕುಸಿತ ಕಂಡಿತ್ತು. ಈ ಎರಡೂ ತಿಂಗಳು ನಿಗದಿತ ಮಾರಾಟದಲ್ಲಿ ಇಲಾಖೆ ಪ್ರಗತಿ ಸಾಧಿಸರಲಿಲ್ಲ. ಡಿಸೆಂಬರ ತಿಂಗಳ ಚಳಿಗಾಲ ಸಂದರ್ಭದಲ್ಲಿ ಶೇ. 1.75ಗೂ ಅಧಿಕ ಲಿಕ್ಕರ ಮಾರಾಟ ಕಡುಂಬದಿದೆ.
ಮುಖ್ಯಾಂಶ:
* 35 ಕೋಟಿ ಮೊತ್ತದ ಲಿಕ್ಕರ ಅಧಿಕ ಮಾರಾಟ. 3 ಕೋಟಿ ಮೊತ್ತದ ಬಿಯರ್​ ಕಡಿಮೆ ಮಾರಾಟ
* 2025&26ನೇ ಸಾಲಿನಲ್ಲಿ 340 ಕೋಟಿ ಮೊತ್ತದ ಲಿಕ್ಕರ್​, 47 ಕೋಟಿ ಮೊತ್ತದ ಬಿಯರ್​ ಮಾರಾಟ.
* ರೋಣದಲ್ಲಿ ಅಧಿಕ! ಮುಂಡರಗಿಯಲ್ಲಿ ಕಡಿಮೆ ಮಾರಾಟ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net