ಬಾಕಿ ಬಿಲ್​ ಬಿಡುಗಡೆ ಆಗ್ರಹಿಸಿ ಮಾ. 6 ರಂದು ಬೆಂಗಳೂರಿನಲ್ಲಿ ಬೃಹತ್​ ಪ್ರತಿಭಟನೆ

 ಬಾಕಿ ಮೊತ್ತ ಬಿಡುಗಡೆ ಆಗ್ರಹಿಸಿ ಪ್ರತಿಭಟನೆ ನಡೆಸುವ ಕುರಿತು ಸಂದ ರಾಜ್ಯಾಧ್ಯಕ್ಷ  ಆರ್​. ಮಂಜುನಾಥ ಸುದ್ದಿಗೋಷ್ಠಿ ನಡೆಸಿದರು. ಸಿದ್ದು ಪಾಟೀಲ, ಆರ್​. ವಿ. ಮುಲ್ಕಿಪಾಟೀಲ, ಆಂಜನೇಯ ಕಟಗಿ, ರಮೇಶ ರಂಗಪ್ಪನ್ನವರ, ಆನಂದಗೌಡ ಪಾಟೀಲ, ಬಸವರಾಜ ಶಿರಗುಂಪಿ, ಸುರೇಶ ತಿರ್ಲಾಪುರ, ಬಸವರಾಜ ಮೇಟಿ, ಸಿ. ಎಸ್​. ನಾಗಾವಿ, ಬಿ.ಆರ್​. ಹೊಸಮನಿ, ಮಾದನ್ನವರ ಇತರರು ಇದ್ದರು
ಬಾಕಿ ಮೊತ್ತ ಬಿಡುಗಡೆ ಆಗ್ರಹಿಸಿ ಪ್ರತಿಭಟನೆ ನಡೆಸುವ ಕುರಿತು ಸಂದ ರಾಜ್ಯಾಧ್ಯಕ್ಷ ಆರ್​. ಮಂಜುನಾಥ ಸುದ್ದಿಗೋಷ್ಠಿ ನಡೆಸಿದರು. ಸಿದ್ದು ಪಾಟೀಲ, ಆರ್​. ವಿ. ಮುಲ್ಕಿಪಾಟೀಲ, ಆಂಜನೇಯ ಕಟಗಿ, ರಮೇಶ ರಂಗಪ್ಪನ್ನವರ, ಆನಂದಗೌಡ ಪಾಟೀಲ, ಬಸವರಾಜ ಶಿರಗುಂಪಿ, ಸುರೇಶ ತಿರ್ಲಾಪುರ, ಬಸವರಾಜ ಮೇಟಿ, ಸಿ. ಎಸ್​. ನಾಗಾವಿ, ಬಿ.ಆರ್​. ಹೊಸಮನಿ, ಮಾದನ್ನವರ ಇತರರು ಇದ್ದರು
Published on
ವಿಜಯವಾಣಿ ಸುದ್ದಿಜಾಲ ಗದಗ
ಕಳೆದ ಎರಡುವರೆ ವರ್ಷಗಳಿಂದ ವಿವಿಧ ಇಲಾಖೆಗಳಿಂದ ಗುತ್ತಿಗೆದಾರರಿಗೆ ಅಂದಾಜು 38000 ಕೋಟಿ ಬಾಕಿ ಮೊತ್ತವನ್ನು ಸರ್ಕಾರ ತಡೆಹಿಡಿದಿದೆ. ಸರ್ಕಾರಕ್ಕೆ ಹಲವು ಬಾರಿ ಮನವಿ ಮಾಡಿಕೊಂಡರೂ ಸಹ ಗುತ್ತಿಗೆದಾರರ ನೋವು ಅರ್ಥ ಮಾಡಿಕೊಳ್ಳುತ್ತಿಲ್ಲ. ಹಾಗಾಗಿ ಬಾಕಿ ಮೊತ್ತ ಬಿಡುಗಡೆಗೆ ಆಗ್ರಹಿಸಿ ಬೆಂಗಳೂರಿನ ಫ್ರೀಡಂ ಪಾಕಿರ್ನಲ್ಲಿ ಮಾ.6 ರಂದು ಬೃಹತ್​ ಪ್ರತಿಭಟನೆ ನಡೆಸಲಾಗುವುದು ಎಂದು ಗುತ್ತಿಗೆದಾರರ ಸಂದ ರಾಜ್ಯಾಧ್ಯಕ್ಷ ಆರ್​. ಮಂಜುನಾಥ ಹೇಳಿದರು
ನಗರದ ಪತ್ರಿಕಾ ಭವನದಲ್ಲಿ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ನಡೆಸಿ ಮಾತನಾಡಿದ ಅವರು, ಲೋಕೋಪಯೋಗಿ ಮತ್ತು ಬಿಬಿಎಂಪಿ ಹೊರತುಪಡಿಸಿ, ಉಳಿದ ಇಲಾಖೆಗಳಲ್ಲಿ ಹಣ ಬಿಡುಗಡೆಯ ಪ್ರಕ್ರಿಯೆ ಸಂರ್ಪೂಣ ಸ್ಥಗಿತಗೊಂಡಿದೆ. ಸಿಎಂ ಸಿದ್ದರಾಮಯ್ಯ ಅವರು ವಿರೋಧ ಪಕ್ಷದ ನಾಯಕರಿದ್ದಾಗ ಗುತ್ತಿಗೆದಾರರ ನೋವಿಗೆ ಸ್ಪಂದಿಸಿದ್ದರು. ಈ ಸಿಎಂ ಆದ ನಂತರ ಸೂಕ್ತವಾಗಿ ಸ್ಪಂದಿಸುತ್ತಿಲ್ಲ. ಗುತ್ತಿಗೆದಾರರ ಜತೆ ಸಭೆ ನಡೆಸಲು ಸಿಎಂ ಅವರಿಗೆ ಮನವಿ ಮಾಡಿದ್ದೇವು. ಸಭೆಯ ದಿನಾಂಕವು ನಿಗದಿಯಾಗಿತ್ತು. ಆದರೆ ಕಾರಣವಿಲ್ಲದೇ ಮೂರು ಬಾರಿ ಸಭೆ ಮುಂದೂಡಲಾಗಿದೆ ಎಂದರು.
ಗುತ್ತಿಗೆದಾರರ ಸಮಸ್ಯೆಗಳ ಬಗ್ಗೆ ಚಚಿರ್ಸಲು ಸರ್ಕಾರ ಹಿಂದೇಟು ಹಾಕುತ್ತಿರುವುದು ವಿಷಾದನೀಯ. ವ್ಯಾಟ್​ (ಶೇ.4) ನಿಂದ ಜಿಎಸ್ಟಿ (ಶೇ.12) ಗೆ ಬದಲಾದ ಸಂದರ್ಭದ ವ್ಯತ್ಯಾಸದ ಮೊತ್ತವನ್ನು ಸರ್ಕಾರವೇ ಭರಿಸುವುದಾಗಿ ಹೇಳಿತ್ತು. ಆಥಿರ್ಕ ಇಲಾಖೆಯಿಂದ ಇನ್ನೂ ಅಧಿಕೃತ ಆದೇಶ ಹೊರಬಂದಿಲ್ಲ. ನೆರೆಯ ರಾಜ್ಯಗಳಲ್ಲಿ ಐದು ವರ್ಷಗಳ ಹಿಂದೆಯೇ ಜಾರಿಯಾಗಿ, ಪಾವತಿಯೂ ಆಗಿದೆ. ಆದರೆ ರಾಜ್ಯದಲ್ಲಿ ಜಾರಿಆಘಿಲ್ಲ ಎಂದು ಆರೋಪಿಸಿದ ಅವರು, ನಗರಾಭಿವೃದ್ಧಿ ಇಲಾಖೆಯ ಚಟುವಟಿಕೆಗಳು ಖಾಸಗಿ ಕಚೇರಿಗಳಿಂದ, ಮಧ್ಯವತಿರ್ಗಳ ಮೂಲಕ ನಡೆಯುತ್ತಿವೆ. ಟೆಂಡರ್​ ಅನುಮೋದನೆ ಮತ್ತು ಹಣ ಬಿಡುಗಡೆ ವ್ಯವಸ್ಥೆಯು ಹಿಂದಿನ ಸರ್ಕಾರಗಳಿಗಿಂತಲೂ ಹೆಚ್ಚು ಅಸ್ತವ್ಯಸ್ತಗೊಂಡಿದೆ. ಸಣ್ಣ ಗುತ್ತಿಗೆದಾರರಿಗೆ ಅನ್ಯಾಯ ಆಗುತ್ತಿದೆ. ರಾಜ್ಯದ 10 ಮಹಾನಗರ ಪಾಲಿಕೆಗಳಲ್ಲಿ "ಪ್ಯಾಕೇಜ್​ ಟೆಂಡರ್​' ಪದ್ಧತಿ ಜಾರಿಗೆ ತಂದಿರುವುದರಿಂದ ಸಣ್ಣ ಮತ್ತು ಮಧ್ಯಮ ವರ್ಗದ ಗುತ್ತಿಗೆದಾರರು ಜೀವನೋಪಾಯ ಕಳೆದುಕೊಳ್ಳುತ್ತಿದ್ದಾರೆ. ಫೆಬ್ರವರಿ ತಿಂಗಳ ಅಂತ್ಯದೊಳಗೆ ಮುಖ್ಯಮಂತ್ರಿಗಳು ಅಧಿಕೃತ ಸಭೆ ಕರೆದು ಸಮಸ್ಯೆ ಬಗೆಹರಿಸಬೇಕು. ಇಲ್ಲದಿದ್ದರೆ ರಾಜ್ಯಾದ್ಯಂತ ಎಲ್ಲಾ ಇಲಾಖೆಗಳ ಕಾಮಗಾರಿಗಳನ್ನು ಸ್ಥಗಿತಗೊಳಿಸಿ ಅನಿದಿರ್ಷ್ಠಾವಧಿ ಮುಷ್ಕರ ನಡೆಸಲು ನಿರ್ಧರಿಸಲಾಗಿದೆ ಎಂದರು.
ಕೆಂಪಣ್ಣ ಆರೋಪ:
ಹಿಂದಿನ ಸರ್ಕಾರದ ಅವಧಿಯಲ್ಲಿ ಹಿಂದಿನ ರಾಜ್ಯಾಧ್ಯಕ್ಷ ಕೆಂಪಣ್ಣ ಅವರು ಶೇ. 40 ರಷ್ಟು ಭ್ರಷ್ಟಾಚಾರ ಆರೋಪ ಮಾಡಿದ್ದರಿಂದ ಕಾಂಗ್ರೆಸ್​ ಸರ್ಕಾರ ಅಧಿಕಾರಕ್ಕೆ ಬಂದಿತ್ತು. ಈಗಿನ ಸರ್ಕಾರದಲ್ಲೂ ಭ್ರಷ್ಟಾಚಾರ ಇದೆ. ಆದರೆ, ಗುತ್ತಿಗೆದಾರ ನೋವು ಮನಗಂಡು ಸರ್ಕಾರ ಬೇಗನೇ ಹಣ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದರು.
ಜಿಎಸ್​ ಟಿ ಸಮಸ್ಯೆ:
ಮೊದಲು ಗುತ್ತಿಗೆದಾರರು ಶೆ. 4 ರಷ್ಟು ವ್ಯಾಟ್​ ಪಾವತಿಸುತ್ತಿದ್ದರು. ಜಿ.ಎಸ್​.ಟಿ ಜಾರಿ ನಂತರ ಶೇ.12 ರಷ್ಟು ಜಿಎಸ್​ ಟಿಗೆ ಬದಲಾಯಿತು. ಹೆಚ್ಚುವರಿ ಶೇ.8 ರಷ್ಟು ಹಣವನ್ನು ದಸ್ತಾವೇಜುನಲ್ಲಿ ಹೊಂದಾಣಿಕೆ ಮಾಡಿಕೊಂಡು ಸರ್ಕಾರ ನಮಗೆ ಪಾವತಿಸಬೇಕು. ಆದರೆ ಕಳೆದ ಮೂರ್ನಾಲ್ಕು ವರ್ಷದಿಂದ ಜಿಎಸ್​ಟಿ ಹಣ ಪಾವತಿ ಮಾಡದಿರುವ ಕಾರಣ ಜಿಎಸ್​ ಟಿ ವಿಭಾಗದಿಂದ ಬಡ್ಡಿ, ಚಕ್ರ ಬಡ್ಡಿ ಸೇರಿದಂತೆ ಕೋಟ್ಯಂತರ ರೂ. ಬಡ್ಡಿ ಪಾವತಿಸುವಂತೆ ಗುತ್ತಿಗೆದಾರರಿಗೆ ನೋಟೀಸ್​ ಬರುತ್ತಿವೆ ಎಂದು ತಿಳಿಸಿದರು.
ಅನುಮೋದನೆ ಇಲ್ಲದೇ ಟೆಂಡರ್​:
ಈ ಹಿಂದಿನ ಸರ್ಕಾರದಲ್ಲಿ ಹಣಕಾಸು ವಿಭಾಗದ ಅನುಮೋದನೆ ಇಲ್ಲದೇ ಲಕ್ಷಾಂತರ ಕೋಟಿ ಮೊತ್ತದ ಕಾಮಗಾರಿ ಗುತ್ತಿಗೆ ನೀಡಲಾಗಿತ್ತು. ಹಾಗಾಗಿ ಬಾಕಿ ಮೊತ್ತ ಬಿಡುಗಡೆ ಮಾಡುತ್ತಿಲ್ಲವೇ ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಮಂಜುನಾಥ, ಕಾಮಗಾರಿ ಮಾಡಲಾಗಿದೆ. ಹಣವನ್ನು ವ್ಯಯಿಸಲಾಗಿದೆ. ಹಣವನ್ನು ಬಿಡುಗಡೆ ಮಾಡಬೇಕಾದ ಕರ್ತವ್ಯ ಸರ್ಕಾರದ್ದಾಗಿದೆ. ಅನುಮೋದನೆ ಇಲ್ಲ ಎಂದ ಮಾತ್ರಕ್ಕೆ ಕೆಲಸ ಮಾಡಿಲ್ಲ ಎಂಬ ಅರ್ಥವಲ್ಲ ಎಂದು ತಿಳಿಸಿದರು.
ಜಿಲ್ಲಾಧ್ಯಕ್ಷ ಸಿದ್ದು ಪಾಟೀಲ, ಆರ್​. ವಿ. ಮುಲ್ಕಿಪಾಟೀಲ, ಆಂಜನೇಯ ಕಟಗಿ, ರಮೇಶ ರಂಗಪ್ಪನ್ನವರ, ಆನಂದಗೌಡ ಪಾಟೀಲ, ಬಸವರಾಜ ಶಿರಗುಂಪಿ, ಸುರೇಶ ತಿರ್ಲಾಪುರ, ಬಸವರಾಜ ಮೇಟಿ, ಸಿ. ಎಸ್​. ನಾಗಾವಿ, ಬಿ.ಆರ್​. ಹೊಸಮನಿ, ಮಾದನ್ನವರ ಇತರರು ಇದ್ದರು
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net