ಸ್ವತಂತ್ರ ಭಾರತ ನಿರೀಕ್ಷಿತ ಅಭಿವೃದ್ದಿ ಹೊಂದಿಲ್ಲ: ನಿರ್ಭಯಾನಂದ ಶ್ರೀ

ನಗರದ ಗದಗ ರಾಮಕೃಷ್ಣ ವಿವೇಕಾನಂದ ಆಶ್ರಮದಲ್ಲಿ ಜರುಗಿದ ರಾಮಕೃಷ್ಣರ ಜಯಂತಿ ಕಾರ್ಯಕ್ರಮದಲ್ಲಿ ನಿರ್ಭಯಾನಂದ ಶ್ರೀಗಳು ಮಾತನಾಡಿದರು. ಜಗನ್ನಾಥನಂದಜೀ, ಮೋಾಪ್ರಾಣಾನಂದಜೀ ಉಪಸ್ಥಿತರಿದ್ದರು.
ನಗರದ ಗದಗ ರಾಮಕೃಷ್ಣ ವಿವೇಕಾನಂದ ಆಶ್ರಮದಲ್ಲಿ ಜರುಗಿದ ರಾಮಕೃಷ್ಣರ ಜಯಂತಿ ಕಾರ್ಯಕ್ರಮದಲ್ಲಿ ನಿರ್ಭಯಾನಂದ ಶ್ರೀಗಳು ಮಾತನಾಡಿದರು. ಜಗನ್ನಾಥನಂದಜೀ, ಮೋಾಪ್ರಾಣಾನಂದಜೀ ಉಪಸ್ಥಿತರಿದ್ದರು.
Published on
ವಿಜಯವಾಣಿ ಸುದ್ದಿಜಾಲ ಗದಗ
ಭಾರತ ಸ್ವತಂತ್ರಗೊಂಡು 80 ವರ್ಷ ಕಳೆದರೂ ನಿರೀಕ್ಷಿತ ಅಭಿವೃದ್ಧಿ ಆಗಿಲ್ಲ. ಭವಿಷ್ಯದ ಮುಂದಾಲೋಚನೆ ಇಲ್ಲದ ರಾಜನೀತಿ, ಆಡಳಿತ ವರ್ಗವು ಜನತೆಯ ನಿರೀೆಗಳನ್ನು ಸಾಕಾರಗೊಳಿಸದೇ ಟೋಪಿ ಹಾಕುತ್ತಲೇ ಬಂದಿವೆ ಎಂದು ಗದಗ&ವಿಜಯಪುರ ರಾಮಕೃಷ್ಣ ಆಶ್ರಮದ ನಿರ್ಭಯಾನಂದ ಸರಸ್ವತಿ ಸ್ವಾಮೀಜಿ ಹೇಳಿದರು.
ಗುರುವಾರ ಗದುಗಿನ ರಾಮಕೃಷ್ಣ ವಿವೇಕಾನಂದ ಆಶ್ರಮದಲ್ಲಿ ಭಗವಾನ ರಾಮಕೃಷ್ಣರ 191ನೇ ಜಯಂತಿ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು ದೇಶದಲ್ಲಿ ಆಯುಧಗಳಿಗೆ ಕೊರತೆ ಇಲ್ಲ. ಆದರೆ ಜನತೆಗೆ ಜ್ಞಾನದ ಕೊರತೆ ಇದೆ. ಪ್ರಜ್ಞೆ, ವೈಚಾರಿಕತೆಯ ಕೊರತೆ ಇದೆ. ಶಿಕ್ಷಣ ಎಂದರೆ ಅಂಕಗಳನ್ನು ಗಳಿಸುವುದೇ ಮಾನದಂಡ ಎಂದು ಅರಿತಿದ್ದೇವೆ. ಭಾರತೀಯರಲ್ಲಿ ಆತ್ಮಾಭಿಮಾನ ಣಿಸುತ್ತಿದೆ. ಆತ್ಮಾಭಿಮಾನ, ಸ್ವಾಭಿಮಾನ ಇಲ್ಲದ ಬದುಕು ಬದುಕೇ ಅಲ್ಲ. ಭಾರತೀಯ ಯುವಕರು ಮನಸ್ಸು ಮಾಡಿದರೇ ಏನೆಲ್ಲಾ ಆಗಲು ಸಾಧ್ಯವಿದೆ. ಸಾಧಿಸಬೇಕೆಂಬ ಛಲ ಬೇಕು. ನಮ್ಮ ಯುವಕರು ಪುಟಿದೆದ್ದರೆ ಅಸಾಧ್ಯವಾದದ್ದನ್ನು ಸಾಧ್ಯಗೊಳಿಸುವ ಛಲಗಾರರು, ಭಾರತೀಯರ ರಕ್ತದಲ್ಲಿನ ಕೆಚ್ಚು ಪ್ರಪಂಚದ ಯಾವ ದೇಶಬಾಂಧವರ ರಕ್ತದಲ್ಲಿ ಇಲ್ಲ. ಆದರೆ ನಮ್ಮವರು ಗಾಢ ನಿದ್ರೆಯಲ್ಲಿದ್ದು, ಅವರನ್ನು ಜಾಗೃತಿಗೊಳಿಸಬೇಕಿದೆ ಎಂದರು.
ಭಗವಾನ ರಾಮಕೃಷ್ಣರ 191ನೇ ಜಯಂತಿಯನ್ನು ಕೇವಲ ಭಾರತೀಯರಷ್ಟೇ ಅಲ್ಲದೇ ವಿಶ್ವದ ವಿವಿದೆಡೆ ಆಚರಿಸಲಾಗುತ್ತಿದೆ. ರಾಮಕೃಷ್ಣರು ಮಾನವ ಕುಲಕ್ಕೆ, ಆಧ್ಯಾತ್ಮ ೇತ್ರಕ್ಕೆ ನೀಡಿದ ಕೊಡುಗೆ ಅನುಪಮವಾದದ್ದು. ರಾಮಕೃಷ್ಣರಲ್ಲಿ ಇದ್ದ ಜ್ಞಾನ ಸಂಪತ್ತಿನಲ್ಲಿ ಶೇ. 1 ರಷ್ಟು ಸದ್ಭಳಕೆ ಮಾಡಿಕೊಂಡಿದ್ದರೆ ವಿಶ್ವವಿಖ್ಯಾತಿ ಆಗಲು ಸಾಧ್ಯವಿದೆ ಎಂದರು.
ರಾಷ್ಟ್ರಕವಿ ಕುವೆಂಪು ಅವರು ಜ್ಞಾನಪೀಠ ಪ್ರಶಸ್ತಿ ಸ್ವೀಕರಿಸುವ ಸಂದರ್ಭದಲ್ಲಿ ಭಗವಾನ ರಾಮಕೃಷ್ಣರನ್ನು ಸ್ಮರಿಸಿಕೊಂಡ ಸಂಗತಿ ಇತಿಹಾಸದ ಪುಟ ಸೇರಿದೆ. ರಾಮಕೃಷ್ಣರ ಬಗ್ಗೆ ಕುವೆಂಪು ಅಪಾರ ಶೃದ್ಧಾಭಕ್ತಿ ಹೊಂದಿದ್ದರು. ರಾಮಕೃಷ್ಣರ ತತ್ವ ಸಿದ್ಧಾಂತಗಳಲ್ಲಿ ಕೆಲವನ್ನು ಮಾತ್ರ ಪಾಲಿಸಿದವರೂ ಉನ್ನತ ಮೇಧಾವಿಗಳಾಗಿ ಹೊರಹೊಮ್ಮಿದ್ದಾರೆ. ಇಂದಿನ ಯುವ ಜನಾಂಗ ರಾಮಕೃಷ್ಣರ ಮತ್ತು ವಿವೇಕಾನಂದ ಜೀವನ ಚರಿತ್ರೆ, ತತ್ವ ಸಿದ್ಧಾಂತಗಳನ್ನು ಅಧ್ಯಯನ ಮಾಡಬೇಕು. ಅವುಗಳಲ್ಲಿ ಒಂದಿಷ್ಟು ಜೀವನದಲ್ಲಿ ಅಳವಡಿಸಿಕೊಂಡು ಉನ್ನತ ವ್ಯಕ್ತಿತ್ವ, ಅತ್ಯುನ್ನತ ಸ್ಥಾನಕ್ಕೇರಲು ಸಾಧ್ಯವಿದೆ ಎಂದರು.
ಭಗವಾನ ರಾಮಕೃಷ್ಣರ 191ನೇ ಜಯಂತಿಯ ಅಂಗವಾಗಿ ಆಶ್ರಮದಲ್ಲಿ ಬೆಳಗ್ಗೆ ಮಂಗಳಾರತಿ, ಕೀರ್ತನೆ, ಹೋಮ ಹಾಗೂ ವಿಷ್ಣುಸಹಸ್ರನಾಮ ಪಾರಾಯಣ, ಭಜನೆ ಮಹಾಪ್ರಸಾದ ಜರುಗಿತು. ಸಂಜೆ ಭಜನೆ, ಹರಿಕಥೆ, ಆಶೀರ್ವಚನ, ಪ್ರಸಾದ ಜರುಗಿತು. ಸಮಾರಂಭದಲ್ಲಿ ಸಾಧಕ ಮಹನೀಯರನ್ನು ಸನ್ಮಾನಿಸಿ ಗೌರವಿಸಲಾಯಿತು. ವೇದಿಕೆಯ ಮೇಲೆ ಜಗನ್ನಾಥನಂದಜೀ, ಬೆಂಗಳೂರಿನ ರಾಮಕೃಷ್ಣ ಆಶ್ರಮದ ಮಾತಾಜೀ ಮೋಾಪ್ರಾಣಾನಂದಜೀ ಉಪಸ್ಥಿತರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net