ಗದಗ: ತಹಸೀಲ್ದಾರ ಕಚೇರಿಗೆ ನೂತನ ಕಟ್ಟಡ ಭಾಗ್ಯ

ಗದಗ
ಗದಗ
Published on
ಶಿವಾನಂದ ಹಿರೇಮಠ ಗದಗ
ಜಿಲ್ಲೆಯ ಕೇಂದ್ರ ಸ್ಥಾನ ಗದಗ ತಾಲೂಕು ಆಡಳಿತದ ಕೇಂದ್ರ ಬಿಂದು ಆಗಿರುವ ತಹಸೀಲ್ದಾರ ಕಚೇರಿಗೆ ನೂತನ ಕಟ್ಟಡ ನಿರ್ಮಾಣದ ಭಾಗ್ಯ ಕೂಡಿ ಬಂದಿದೆ. ಈ ಹಿಂದೆ ಎರಡೂ ಬಾರಿ ಪ್ರಸ್ತಾವನೆ ಸಲ್ಲಿಸಿದ್ದರೂ ಹಲವು ವಿಗ್ನಗಳು ಎದುರಾಗಿ ಪ್ರಸ್ತಾವನೆ ತಿರಸತಗೊಂಡಿತ್ತು. ಈಗ ಯೋಜನೆ ಅನುಮೋದನೆಗೊಂಡು, ಟೆಂಡರ್​ ಪ್ರಕ್ರಿಯೆಯೂ ಮುಗಿದು ಕಟ್ಟಡ ಕಾಮಗಾರಿ ಆರಂಭಗೊಳ್ಳಲಿದೆ.
ಕಟ್ಟಡದ ಅವಶ್ಯಕತೆ ಏಕೆ?
ನಗರದ ಹೃದಯ ಭಾಗದಲ್ಲಿ 1902ರಲ್ಲಿ ನಿರ್ಮಾಣದ ಕಟ್ಟಡದಲ್ಲೇ ತಹಸೀಲ್ದಾರ ಕಚೇರಿ ಪ್ರಸ್ತು ಕಾರ್ಯ ನಿರ್ವಹಿಸುತ್ತಿದೆ. ಜತೆಗೆ ನೋಂದಣಿ ಕಚೇರಿ, ಆಹಾರ ಇಲಾಖೆಯ ವಿಭಾಗ, ಜನನ ಮರಣ ವಿಭಾಗ, ಭೂಮಾಪನೆ, ನೋಂದಣಿ ಇಲಾಖೆಗಳು ಒಂದೇ ಆವರಣದಲ್ಲಿ ಕಾರ್ಯ ನಿರ್ವಹಿಸುತ್ತಿವೆ. ಭೂಮಿ ವಿಭಾಗಕ್ಕೆ ಸಂಬಂಧಿಸಿದಂತೆ ಜಮೀನು ಖಾತೆ, ಪಹಣಿ, ಹೊಲಗದ್ದೆಗಳ ರಸ್ತೆ, ಸಕಾಲದಲ್ಲಿ ವೃದ್ಧಾಪ್ಯ, ವಿಕಲಚೇಚತ, ವಿಧವಾ, ಮನಸ್ವಿನಿ, ಮೈತ್ರಿ ಸೇರಿದಂತೆ ಹಲವು ಮಾಸಾಶನಕ್ಕೆ ಅಜಿರ್ ಸಲ್ಲಿಸುವುದು, ಜಾತಿ, ಆದಾಯ ಪ್ರಮಾಣ ಪತ್ರ, ಪಡಿತರ ಚೀಟಿ, ನ್ಯಾಯ ಬೆಲೆ ಅಂಗಡಿಗಳಿಗೆ ಪ್ರಸ್ತಾವನೆ, ಅಜಿರ್ ಪರಿಶೀಲನೆ, ಪರೀಷ್ಕರಣೆ ಹಾಗೂ ನಾನಾ ತರಹದ ನೋಂದಣಿಗಾಗಿ ನೋಂದಣಿ ಕಚೇರಿಗೆ ಬರುವರ ಸಂಖ್ಯೆಯಲ್ಲಿ ಗಣನೀಯ ಹೆಚ್ಚಳವಾಗಿದೆ. ಹಲವು ಯೋಜನೆಗಳಿಗೆ ಕೇಂದ್ರ ಸರ್ಕಾರ ಡಿಜಿಟಲ್​ ವೇದಿಕೆ ಕಲ್ಪಿಸಿದ ನಂತರ ಕಚೇರಿ ಪ್ರಾಂಗಣದಲ್ಲಿ ಜನದಟ್ಟಣಿ ಹೆಚ್ಚಾಗುತ್ತಿದೆ. ಅದಲ್ಲದೇ ಪಾಕಿರ್ಂಗ್​ ವ್ಯವಸ್ಥೆಯೂ ಇಲ್ಲ. ಸಾಮಾನ್ಯರಿಗೆ ಆಸನದ ವ್ಯವಸ್ಥೆಯೂ ಇಲ್ಲ. ಮುಖ್ಯ ರಸ್ತೆಯಿಂದ ಅಂದಾಜು 3 ಅಡಿಗಳಷ್ಟು ಕೆಳಮಟ್ಟದಲ್ಲಿರುವ ತಹಸೀಲ್ದಾರ ಕಚೇರಿಯು ಮಳೆ ಬಂದ ಸಂದರ್ಭದಲ್ಲಿ ನೀರಿನಿಂದ ಜಲಾವೃತ ಆಗುವುದು ಸಾಮಾನ್ಯ. ಕಟ್ಟಡದೊಳಗಿನ ವಿದ್ಯುತ್​ ಸಂಪರ್ಕ ವ್ಯವಸ್ಥೆ, ಪಿಠೋಪಕರಣಗಳ ವ್ಯವಸ್ಥೆಯು ಗುಜರಿ ಅಂಗಡಿಗಳಿಗಿಂತಲೂ ಕಟ್ಟದಾಗಿದೆ. ಹೀಗಾಗಿ ಪ್ರತಿನಿತ್ಯ ಸರಾಸರಿ 2000 ರಿಂದ 2500 ರ ವರೆಗೆ ಜನಸಂಧಣಿ ಏರ್ಪಡುತ್ತಿದ್ದು, ಹೊಸ ಕಚೇರಿ ನಿರ್ಮಾಣದ ತುರ್ತು ಅಗತ್ಯತೆ ಇತ್ತು.
ಈ ಹಿಂದೆ ಪ್ರಸ್ತಾವನೆ ಸಲ್ಲಿಸಲಾಗಿತ್ತು:
ದಿನೇ ದಿನೆ ಸಾರ್ವಜನಿಕರು ಭೇಟಿ ನೀಡುವ ಸಂಖ್ಯೆ ದ್ವಿಗುಣವಾಗುತ್ತಿದ್ದು, ಸುಸಜ್ಜಿತ ಕಟ್ಟಡ ನಿರ್ಮಾಣಕ್ಕೆ ಸಾರ್ವಜನಿಕ ವಲಯದಲ್ಲಿ ಕೂಗು ಕೇಳಿ ಬರುತ್ತಿತ್ತು. ಇದಕ್ಕೆ ಪೂರಕವಾಗಿ ತಹಸೀಲ್ದಾರ ಕಚೇರಿಯಿಂದಲೂ ಜಿಲ್ಲಾಡಳಿತ ಭವನಕ್ಕೆ ಎರಡೂ ಬಾರಿ ಮನವಿ ಸಲ್ಲಿಸಲಾಗಿತ್ತು. ಮೂಲ ಸೌಕರ್ಯಗಳಿಲ್ಲದ ಈಗಿರುವ ಕಟ್ಟಡ ಸಾಮಾನ್ಯರಿಗೆ ಕಿರಿ ಕಿರಿ ಉಂಟು ಮಾಡುತ್ತಿರುವ ಹಿನ್ನೆಲೆ ಸುಸಜ್ಜಿತ ಕಚೇರಿ/ಮಿನಿ ವಿಧಾನಸೌಧ ನಿರ್ಮಾಣಕ್ಕೆ 2021 ಹಾಗೂ 2022 ರಲ್ಲಿ ಎರಡೂ ಬಾರಿ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಮೊದಲ ಬಾರಿ ಹೌಸಿಂಗ್​ ಬೋರ್ಡ್​ ವತಿಯಿಂದ ಅಂದಾಜು 10 ಕೋಟಿ ವೆಚ್ಚದ ಮಿನಿ ವಿಧಾನಸೌಧ ನಿರ್ಮಾಣಕ್ಕಾಗಿ ನೀಲನೆ ಸಿದ್ಧಗೊಂಡು ಅನೇಕ ಕಾರಣಗಳಿಂದ ಪ್ರಸ್ತಾವನೆ ತೀರಸತಗೊಂಡಿದೆ. 2022ರಲ್ಲಿ ಸಲ್ಲಿಸದ ಪ್ರಸ್ತಾವನೆಗೆ ಹಿಂಬರಹ ಬರೆದ ಜಿಲ್ಲಾಡಳಿತ ಕಚೇರಿಯನ್ನು ತಾತ್ಕಾಲಿಕವಾಗಿ ಸ್ಥಳಾಂತರ ಮಾಡುವ ಕುರಿತು ವರದಿ ಕೇಳಲಾಗಿತ್ತು. ಅಂತಿಮವಾಗಿ 2026ರಲ್ಲಿ 16 ಕೋಟಿ ವೆಚ್ಚದ ಮಿನಿ ವಿಧಾನ ಸೌಧಕ್ಕೆ ಕಳೆದ ತಿಂಗಳು ಗುದ್ದಲಿ ಪೂಜೆ ನೆರವೇರಿದೆ.
ನೂತನ ಕಟ್ಟಡ ಅಥವಾ ಮಿನಿ ವಿಧಾನಸೌಧ ನಿಮಿರ್ಸಲು ಈಗಿರುವ ಕಚೇರಿ ಕೆಲ ವರ್ಷಗಳ ಕಾಲ ಸ್ಥಳಾಂತರ ಮಾಡಬೇಕು. ಕಚೇರಿ ಸ್ಥಳಾಂತರಕ್ಕೆ ಬಾಡಿಗೆ ಕಟ್ಟಡ ಹುಡುಕಾಟದಲ್ಲಿರುವ ತಹಸೀಲ್ದಾರ ಕಚೇರಿ ಸಿಬ್ಬಂದಿಗೆ ನಗರದ ಹೃದಯ ಭಾಗದಲ್ಲಿ ಸಮಪರ್ಕವಾದ ಬಾಡಿಗೆ ಕಟ್ಟಡ ದೊರೆಯುತ್ತಿಲ್ಲ. ಅದರಲ್ಲೂ 1902ರಿಂದಲೂ ಸಂರಸಿ ಇಡಲಾದ ದಾಖಲೆಗಳ ಸ್ಥಳಾಂತರ ಕಷ್ಟಸಾಧ್ಯವಾಗಿದೆ ಎಂದು ತಿಳಿದು ಬಂದಿದೆ. ನಗರದ ಹಳೆಯ ಡಿಸಿ ಆಫೀಸ್​ ಕಚೇರಿಯಲ್ಲಿ ಸ್ಥಳಾಂತರಕ್ಕೆ ತಹಸೀಲ್ದಾರ ಕಚೇರಿ ಸ್ಥಳಾಂತರಿಸುವುದಕ್ಕೆ ಯೋಚಿಸಲಾಗಿದ್ದರೂ ಸಹ ಇನ್ನೂ ಅಂತಿಮ ನಿರ್ಣಯಕ್ಕೆ ಬಂದಿಲ್ಲ. ಇನ್ನೂ ನೋಂದಣಿ ಕಚೇರಿ ಅಧಿಕಾರಿಗಳು ಬಾಡಿಗೆ ಕಟ್ಟಡ ಹುಡುಕಾಟದಲ್ಲಿ ಇದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net