ಶೇ.7ರಷ್ಟು ದರದಲ್ಲಿ ಆಥಿರ್ಕತೆ ಬೆಳವಣಿಗೆ: ಸಿ.ಸಿ. ಪಾಟೀಲ

ಗದಗ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಸಿ.ಸಿ. ಪಾಟೀಲ ಸುದ್ದಿಗೋಷ್ಟಿ ನಡೆಸಿದರು. ರಾಜು ಕುರಡಗಿ, ಎಂ.ಎಸ್​. ಕರಿಗೌಡ್ರ, ಎಂ. ಎಂ. ಹಿರೇಮಠ, ಲಿಂಗರಾಜ ಪಾಟೀಲ, ಉಷಾ ದಾಸರ ಇತರರು ಇದ್ದರು.
ಗದಗ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಸಿ.ಸಿ. ಪಾಟೀಲ ಸುದ್ದಿಗೋಷ್ಟಿ ನಡೆಸಿದರು. ರಾಜು ಕುರಡಗಿ, ಎಂ.ಎಸ್​. ಕರಿಗೌಡ್ರ, ಎಂ. ಎಂ. ಹಿರೇಮಠ, ಲಿಂಗರಾಜ ಪಾಟೀಲ, ಉಷಾ ದಾಸರ ಇತರರು ಇದ್ದರು.
Published on
ವಿಜಯವಾಣಿ ಸುದ್ದಿಜಾಲ ಗದಗ
ಭಾರತದ ಆಥಿರ್ಕತೆ ಶೇ.7ರಷ್ಟು ಪ್ರಗತಿ ದರದಲ್ಲಿ ಬೆಳವಣಿಗೆಯಲ್ಲಿದ್ದು, ವಿಕಸಿತ ಭಾರತದತ್ತ ದೇಶ ಮುನ್ನಡೆಯುತ್ತಿದೆ ಎಂದು ಶಾಸಕ ಸಿ. ಸಿ. ಪಾಟೀಲ ಹೇಳಿದರು.
ಬಜೆಟ್​ ಕುರಿತು ರವಿವಾರ ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಸಣ್ಣ ಕೈಗಾರಿಕೆಗಳಿಗೆ ಉತ್ತೇಜನ ನೀಡುವ ಉದ್ದೇಶದಿಂದ 10 ಸಾವಿರ ಕೋಟಿ ರೂ. ಅನುದಾನ ಮೀಸಲಿಡಲಾಗಿದೆ. ದೇಶಾದ್ಯಂತ 200 ಕೈಗಾರಿಕಾ ವಲಯಗಳನ್ನು ಸ್ಥಾಪಿಸಲಾಗಿದೆ. ಇದರಿಂದ ಸಾವಿರಾರು ಜನರಿಗೆ ಉದ್ಯೋಗಾವಕಾಶ ಸಿಗಲಿದೆ ಎಂದು ತಿಳಿಸಿದರು.
ಆಯುರ್ವೇದ ಮತ್ತು ಆರೋಗ್ಯ ಕ್ಷೇತ್ರದತ್ತ ಜನರ ಆಸಕ್ತಿ ಹೆಚ್ಚುತ್ತಿದ್ದು, ಬಯೋಫಾರ್ಮಾ ವಲಯ ಸ್ಥಾಪನೆಗೆ 10 ಸಾವಿರ ಕೋಟಿ ರೂ. ಮೀಸಲಿಡಲಾಗಿದೆ. 350ಕ್ಕೂ ಹೆಚ್ಚು ಸುಧಾರಣಾ ಕ್ರಮಗಳ ಮೂಲಕ ಭಾರತವನ್ನು ಔಷಧಿ ತಯಾರಿಕಾ ವಲಯವಾಗಿ ರೂಪಿಸುವ ಗುರಿ ಹೊಂದಲಾಗಿದೆ. ಸೆಮಿಕಂಡಕ್ಟರ್​ ಯೋಜನೆಯ ಮೂಲಕ ಉತ್ಪಾದನಾ ಸಾಮರ್ಥ್ಯ ಹೆಚ್ಚಿಸಲಾಗುತ್ತಿದ್ದು, ವಿರಳ ಲೋಹಗಳ ಕಾರಿಡಾರ್​ ಸ್ಥಾಪನೆಗೆ 40 ಸಾವಿರ ಕೋಟಿ ರೂ. ಅನುದಾನ ನೀಡಲಾಗಿದೆ. ಬಂಡವಾಳ ವೆಚ್ಚವನ್ನು 11.4 ಲಕ್ಷ ಕೋಟಿಯಿಂದ 12.2 ಲಕ್ಷ ಕೋಟಿಗೆ ಹೆಚ್ಚಿಸಲಾಗಿದೆ ಎಂದರು.
ದೇಶದಲ್ಲಿ 20 ಜಲಮಾರ್ಗಗಳ ಅಭಿವೃದ್ಧಿ ಮೂಲಕ ರ್ತು ಉತ್ತೇಜನ ದೊರಕಿದ್ದು, 7 ಹೊಸ ಹೈಸ್ಪೀಡ್​ ರೈಲು ಮಾರ್ಗಗಳನ್ನು ಘೋಷಿಸಲಾಗಿದೆ. ಪ್ರತಿಯೊಂದು ಜಿಲ್ಲೆಗೆ ಮಹಿಳಾ ಹಾಸ್ಟೆಲ್​ ನೀಡಲಾಗಿದೆ. ವಿದ್ಯಾ ಆಧಾರಿತ ಉದ್ಯೋಗ ಸೃಷ್ಟಿಗೆ ವಿಶೇಷ ಸಮಿತಿ ರಚಿಸಲಾಗಿದೆ ಎಂದು ಹೇಳಿದರು.
ಐದುನೂರು ಹೊಸ ಜಲಾಶಯಗಳ ನಿರ್ಮಾಣಕ್ಕೆ ಸರ್ಕಾರ ಮುಂದಾಗಿದೆ. ಮಹಿಳೆಯರ ಸ್ವಾವಲಂಬನೆಗಾಗಿ ಲಕ್​ಪತಿ ದೀದಿ ಯೋಜನೆಯಡಿ ದಿನಸಿ ಅಂಗಡಿ ಸ್ಥಾಪನೆಗೆ ಆಥಿರ್ಕ ಉತ್ತೇಜನ ನೀಡಲಾಗುತ್ತಿದೆ. ಪ್ರಮುಖ ನಗರಗಳಿಗೆ 4,000 ಎಲೆಕ್ಟ್ರಿಕ್​ ಬಸ್​ಗಳನ್ನು ಹಂಚಿಕೆ ಮಾಡಲಾಗಿದೆ ಎಂದರು.
ಕೇಂದ್ರ ಸಚಿವೆ ನೀರ್ಮಲಾ ಸೀತಾರಾಮನ್​ ಮಂಡಿಸಿದ ಬಜೆಟ್​ ವಿಕಸಿತ ಭಾರತಕ್ಕೆ ಪೂರಕವಾದ ಬಜೆಟ್​ ಆಗಿದ್ದು, ಪ್ರಧಾನಿ ನರೇಂದ್ರ ಮೋದಿ ಅವರ ಕನಸು ಈ ಬಜೆಟ್​ ಮೂಲಕ ನನಸಾಗಲಿದೆ ಎಂದು ಸಿ.ಸಿ. ಪಾಟೀಲ ವಿಶ್ವಾಸ ವ್ಯಕ್ತಪಡಿಸಿದರು.
ವಿಬಿಜಿ ರಾಮ್​ ಜಿ ಯೋಜನೆ ಕುರಿತು ಮಾತನಾಡಿದ ಸಿ.ಸಿ. ಪಾಟೀಲ, ಮಹಾತ್ಮಾ ಗಾಂಧಿ ಉದ್ಯೋಗ ಖಾತರಿ ಯೋಜನೆಯಲ್ಲಿ ಈ ಮೊದಲು ಕೆಲ ಲೋಪಗಳಿದ್ದವು. ಬಯೋಮೆಟ್ರಿಕ್​ ವ್ಯವಸ್ಥೆ ಜಾರಿಯಿಂದ ಹಣದ ಲೋಪ ತಪ್ಪಿಸಲಾಗಿದೆ. ಹಿಂದಿನ ದಿನಗಳಲ್ಲಿ ರಾಜಕೀಯ ಪುಡಾರಿಗಳಿಗೆ ಹಣ ತಿನ್ನಲು ಅವಕಾಶ ಇತ್ತು. ಈ ಬ್ರಷ್ಟಾಚಾರ ತಪ್ಪಿಸ ಹಿನ್ನೆಲೆ ಕಾಂಗ್ರೆಸ್​ ಪಕ್ಷ ನೋವಿನಿಂದ ವಿರೋಧ ಮಾಡುತ್ತಿದೆ. ನರೇಗಾ ಯೋಜನೆಯಲ್ಲಿ ಕೆಲಸದ ದಿನಗಳನ್ನು 100ರಿಂದ 125ಕ್ಕೆ ಹೆಚ್ಚಿಸಿ, ಕೂಲಿಯನ್ನು ಕೂಡ ಹೆಚ್ಚಿಸಲಾಗಿದೆ ಎಂದ ಅವರು, ಈ ಹಿಂದೆ ಕಾಂಗ್ರೆಸ್​ ಪಕ್ಷ ಈ ಯೋಜನೆಯ ಹೆಸರನ್ನು ಈಗಾಗಲೇ 9 ಬಾರಿ ಬದಲಿಸಿತ್ತು ಎಂದರು.
ಸುದ್ದಿಗೋಷ್ಠಿಯಲ್ಲಿ ಜಿಲ್ಲಾಧ್ಯಕ್ಷ ರಾಜು ಕುರಡಗಿ, ಎಂ.ಎಸ್​. ಕರಿಗೌಡ್ರ, ಎಂ. ಎಂ. ಹಿರೇಮಠ, ಲಿಂಗರಾಜ ಪಾಟೀಲ, ಉಷಾ ದಾಸರ ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net