ಸಂವು 2019ರಿಂದ ಬೈಲಾ ಹಾಗೂ ಸಹಕಾರ ಇಲಾಖೆ ನಿಯಮಾವಳಿಗಳ ಪ್ರಕಾರ ಕಾರ್ಯ ನಿರ್ವಹಿಸುತ್ತಿದ್ದು, ಪದಾಧಿಕಾರಿಗಳ ಜವಾಬ್ದಾರಿಗಳನ್ನು ಬೈಲಾದಲ್ಲೇ ಸ್ಪಷ್ಟವಾಗಿ ನಿರ್ಧರಿಸಲಾಗಿದೆ. ಇದೇ ನಮ್ಮ ಸಂವಿಧಾನ, ಇದೇ ಅಂತಿಮ. 2022ರಲ್ಲಿ ಸಂದ ಬೈಲಾಗೆ ತಿದ್ದುಪಡಿ ಮಾಡಿ ಎಲ್ಲ ಜಿಲ್ಲೆಗಳಲ್ಲೂ ಸಂದ ಸಭೆಗಳನ್ನು ಮಾಡುವಂತೆ ತಿದ್ದುಪಡಿ ಮಾಡಲಾಯಿತು. ಸಂವು ಎಲ್ಲ ಜಿಲ್ಲೆ, ತಾಲೂಕು, ಹೋಬಳಿಗಳಿಗೆ ವಿಸ್ತರಿಸುವ ಮುಖ್ಯ ಉದ್ದೇಶ ಹೊಂದಲಾಗಿದೆ. ಸಂವು ಸರಿಯಾಗಿ ದಿಕ್ಕಿನಲ್ಲಿ ಸಾಗಲು ಕೆಲಮೊಮ್ಮೆ ಕಠಿಣ ನಿರ್ಣಯ ಕೈಗೊಳ್ಳಬೇಕಾಗುತ್ತದೆ. ಸಂವು ಅನುಭವ ಮಂಟಪದಂತೆ ಇರಬೇಕು. ಇಲ್ಲಿ ಜಾತಿ, ಧರ್ಮ, ಪಂಥಕ್ಕೆ ಸ್ಥಾನವಿಲ್ಲ. ಎಲ್ಲರೂ ಮುಕ್ತವಾಗಿ ಚರ್ಚೆಯಲ್ಲಿ ಭಾಗವಹಿಸಬೇಕು ಎಂದು ಷಡಾಕ್ಷರಿ ಹೇಳಿದರು. ಹಿಂದಿನ ಸಭೆ ಮೈಸೂರಿನಲ್ಲಿ ಯಶಸ್ವಿಯಾಗಿ ನಡೆದಿತ್ತು. ಎನ್ಪಿಎಸ್, ವೃಂದ ನೇಮಕಾತಿ, ಓಪಿಎಸ್ ಜಾರಿ ಸೇರಿದಂತೆ ಹಲವು ಪ್ರಮುಖ ವಿಷಯಗಳ ಬಗ್ಗೆ ಚರ್ಚೆ ನಡೆದಿತ್ತು ಎಂದು ಹೇಳಿದರು.