ಗ್ರಾಮೀಣಾಭಿವೃದ್ಧಿ ವಿವಿಯಲ್ಲಿ ಎಐ ಶೃಂಗಸಭೆ

ಗದಗ ಗ್ರಾಮೀಣಾಭಿವೃದ್ಧಿ ವಿವಿಯಲ್ಲಿ ಏರ್ಪಡಿಸಿದ್ದ ಎಐ ಶೃಂಗಸಭೆ ಕಾರ್ಯಕ್ರಮವನ್ನು ರಣದೀಪ ಡಿ ಉದ್ಘಾಟಿಸಿದರು. ಡಾ. ಸುರೇಶ್​ ನಾಡಗೌಡರ, ಮದನ್​ ಪದಕಿ, ಸಂಜೀವ್​ ಗುಪ್ತಾ, ಪ್ರಶಾಂತ್​ ಜೆಸಿ, ಡಾ. ಅಮಿತ್​ ವಿಕ್ರಮ್​ ಇತರರು ಇದ್ದರು.
ಗದಗ ಗ್ರಾಮೀಣಾಭಿವೃದ್ಧಿ ವಿವಿಯಲ್ಲಿ ಏರ್ಪಡಿಸಿದ್ದ ಎಐ ಶೃಂಗಸಭೆ ಕಾರ್ಯಕ್ರಮವನ್ನು ರಣದೀಪ ಡಿ ಉದ್ಘಾಟಿಸಿದರು. ಡಾ. ಸುರೇಶ್​ ನಾಡಗೌಡರ, ಮದನ್​ ಪದಕಿ, ಸಂಜೀವ್​ ಗುಪ್ತಾ, ಪ್ರಶಾಂತ್​ ಜೆಸಿ, ಡಾ. ಅಮಿತ್​ ವಿಕ್ರಮ್​ ಇತರರು ಇದ್ದರು.
Published on
ಗ್ರಾಮೀಣಾಭಿವೃದ್ಧಿಗೆ ಕೃತಕ ಬುದ್ಧಿಮತ್ತೆಯ ಬಳಕೆಯ ಕುರಿತು ಸಂವಾದ
ವಿಜಯವಾಣಿ ಸುದ್ದಿಜಾಲ ಗದಗ
ನಗರದ ಮಹಾತ್ಮ ಗಾಂಧಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್​ ರಾಜ್​ ವಿಶ್ವವಿದ್ಯಾಲಯದಲ್ಲಿ ಶನಿವಾರ ಎಐ ಶೃಂಗಸಭೆ ಕಾರ್ಯಕ್ರಮ ಜರುಗಿತು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಸರ್ಕಾರದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್​ ರಾಜ್​ ಇಲಾಖೆ, ಸಾಮಾಜಿಕ ಕಲ್ಯಾಣ ಇಲಾಖೆ ಹಾಗೂ ಯುವಸೇವಾ ಮತ್ತು ಕ್ರೀಡಾ ಇಲಾಖೆಗಳ ಕಾರ್ಯದಶಿರ್ ರಣದೀಪ ಡಿ ಅವರು, ತಂತ್ರಜ್ಞಾನ ಮತ್ತು ಸಾರ್ವಜನಿಕ ನೀತಿಯ ಸಮನ್ವಯದ ಮೂಲಕ ಮಾತ್ರ ಸಮಗ್ರ, ಸಮಾವೇಶಿತ ಹಾಗೂ ಸುಸ್ಥಿರ ಅಭಿವೃದ್ಧಿಯನ್ನು ಸಾಧಿಸಲು ಸಾಧ್ಯ. ಗ್ರಾಮೀಣಾಭಿವೃದ್ಧಿ ಕ್ಷೇತ್ರದಲ್ಲಿ ಕೃತಕ ಬುದ್ಧಿಮತ್ತೆ ಹಾಗೂ ಡಿಜಿಟಲ್​ ತಂತ್ರಜ್ಞಾನಗಳ ಜವಾಬ್ದಾರಿಯುತ ಬಳಕೆ ಆಡಳಿತಾತ್ಮಕ ಕಾರ್ಯಕ್ಷಮತೆ ಮತ್ತು ಸಾರ್ವಜನಿಕ ಸೇವೆಗಳ ಗುಣಮಟ್ಟವನ್ನು ಹೆಚ್ಚಿಸಲು ನೆರವಾಗಲಿದೆ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಕುಲಸಚಿವ ಡಾ. ಸುರೇಶ್​ ನಾಡಗೌಡರ ಅವರು ಕೃತಕ ಬುದ್ಧಿಮತ್ತೆ ತಂತ್ರಜ್ಞಾನವು ಆಧುನಿಕ ಆಡಳಿತ ವ್ಯವಸ್ಥೆ, ಗ್ರಾಮೀಣ ಅಭಿವೃದ್ಧಿ ಯೋಜನೆಗಳ ಪರಿಣಾಮಕಾರಿ ಅನುಷ್ಠಾನ, ಶಿಕ್ಷಣ, ಆರೋಗ್ಯ ಹಾಗೂ ಸಾರ್ವಜನಿಕ ಸೇವೆಗಳ ಗುಣಮಟ್ಟ ಹೆಚ್ಚಿಸುವಲ್ಲಿ ಮಹತ್ವದ ಪಾತ್ರ ವಹಿಸಲಿದೆ. ತಂತ್ರಜ್ಞಾನವು ಮಾನವ ಕೇಂದ್ರಿತವಾಗಿರಬೇಕು ಹಾಗೂ ಸಮಾಜದ ತಳಮಟ್ಟದ ಜನರಿಗೆ ಲಾಭವಾಗುವ ರೀತಿಯಲ್ಲಿ ಬಳಸಬೇಕು ಎಂದು ಹೇಳಿದರು.
ಮದನ್​ ಪದಕಿ, ಸಂಜೀವ್​ ಗುಪ್ತಾ, ಪ್ರಶಾಂತ್​ ಜೆಸಿ, ಡಾ. ಅಮಿತ್​ ವಿಕ್ರಮ್​ ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net