ಗದಗಲ್ಲಿ ಸೇನಾ ಭರ್ತಿ ತರಬೇತಿ ಕೇಂದ್ರ ಆರಂಭ

ಗದಗ ನಗರದಲ್ಲಿ ಸೇನಾ ಭರ್ತಿ ತರಬೇತಿ ಕೇಂದ್ರ ಆರಂಭಿಸುವ ಕುರಿತು ಜಿ.ಬಿ. ಮಾಳಗತ್ತಿಮಠ ಸುದ್ದಿಗೋಷ್ಠೀ ನಡೆಸಿದರು. ಸುದೀರ್ ಘೋರ್ಪಡೆ, ಎಸ್​. ಆರ್​. ಪಾಟೀಲ, ಸಿ. ಜಿ. ಸೊನ್ನದ, ಶೇಖಪ್ಪ ಹೊನ್ನಪ್ಪನವರ, ಚನ್ನಯ್ಯ ಬಳಗಾನೂರು ಮಠ, ಕುಮಾರಸ್ವಾಮಿ ಹಿರೇಮಠ, ಜಿ.ಬಿ. ಅರವಟಗಿಮಠ, ಎ.ಎಂ. ತಹಸೀಲ್ದಾರ, ಸಿದ್ದಪ್ಪ ಹೂಗಾರು, ವೀಣಾ ಹೂಗಾರ ಇತರರು ಇದ್ದರು
ಗದಗ ನಗರದಲ್ಲಿ ಸೇನಾ ಭರ್ತಿ ತರಬೇತಿ ಕೇಂದ್ರ ಆರಂಭಿಸುವ ಕುರಿತು ಜಿ.ಬಿ. ಮಾಳಗತ್ತಿಮಠ ಸುದ್ದಿಗೋಷ್ಠೀ ನಡೆಸಿದರು. ಸುದೀರ್ ಘೋರ್ಪಡೆ, ಎಸ್​. ಆರ್​. ಪಾಟೀಲ, ಸಿ. ಜಿ. ಸೊನ್ನದ, ಶೇಖಪ್ಪ ಹೊನ್ನಪ್ಪನವರ, ಚನ್ನಯ್ಯ ಬಳಗಾನೂರು ಮಠ, ಕುಮಾರಸ್ವಾಮಿ ಹಿರೇಮಠ, ಜಿ.ಬಿ. ಅರವಟಗಿಮಠ, ಎ.ಎಂ. ತಹಸೀಲ್ದಾರ, ಸಿದ್ದಪ್ಪ ಹೂಗಾರು, ವೀಣಾ ಹೂಗಾರ ಇತರರು ಇದ್ದರು
Published on
ವಿಜಯವಾಣಿ ಸುದ್ದಿಜಾಲ ಗದಗ
ನಗರದಲ್ಲಿ ಜ. 19 ರಂದು ಬೆಳಗ್ಗೆ 10.30ಕ್ಕೆ ಸೇನೆ ಭರ್ತಿ ತರಬೇತಿ ಕೇಂದ್ರ ಆರಂಭವಾಗಲಿದೆ ಎಂದು ನಿವೃತ್ತ ಸೈನಿಕರ ಸಂದ ಜಿಲ್ಲಾಧ್ಯಕ್ಷರ ಜಿ.ಬಿ. ಮಾಲಗತ್ತಿಮಠ ಹೇಳಿದರು.
ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಆದಿತ್ಯ ನಗರದಲ್ಲಿ 5 ಗುಂಟೆ ಜಾಗೆಯಲ್ಲಿ ಸಮುದಾಯದ ಭವನ ನಿಮಿರ್ಸಲಾಗಿದೆ. ಸಮುದಾಯ ಭವನದಲ್ಲಿ ತರಬೇತಿ ಕೇಂದ್ರ ಆರಂಭಿಸಲಾಗುವುದು. ಅರ್ಹ ಅಭ್ಯಥಿರ್ಗಳಿಗೆ ತರಬೇತಿ ನೀಡಲು ಸಮುದಾಯ ಮುಂಭಾಗದಲ್ಲಿ ಜಾಗೆ ಇದ್ದು ದೈಹಿಕ ತರಬೇತಿ ನೀಡಲಾಗುವುದು. ತಜ್ಞರು ತರಬೇತಿ ನೀಡುವರು ಎಂದರು.
ನಗರದಲ್ಲಿ ಯುವಕರಿಗೆ ತರಬೇತಿ ಕೊರತೆ ಇದೆ. ಸೇನೆ ಬಗ್ಗೆ ಜಾಗೃತಿ ಮೂಡಿಸುವರು ಇಲ್ಲವಾಗಿದೆ. ಯುವಕರಿಗೆ ಜಾಗೃತಿ ಜತೆಗೆ ಬಿಎಸ್​ಎಫ್​, ಅಗ್ನೀವಿರ ಹಾಗೂ ಕೇಂದ್ರ ಯೋಜನೆಗಳ ಬಗ್ಗೆ ತರಬೇತಿ ನೀಡಲಾಗುವುದು. ಜಿಲ್ಲಾದ್ಯಂತ ಶಾಲಾ ಕಾಲೇಜುಗಳಲ್ಲಿ ಈ ಬಗ್ಗೆ ಅರಿವು ಮೂಡಿಸಲಾಗುವುದು ಎಂದರು.
ಕಾರ್ಯಕ್ರಮದಲ್ಲಿ ಫಕ್ಕಿರೇಶ್ವರ ಶ್ರೀಗಳು, ಸಂಗಮೇಶ ದುಂದೂರು, ಸಿದ್ದಣ್ಣ ಪಲ್ಲೇದ ಸೇರಿದಂತೆ ಇತರರು ಉಪಸ್ಥಿತಿ ಇರುವರು ಎಂದು ತಿಳಿಸಿದರು.
ಸುದ್ದಿಗೋಷ್ಟಿಯಲ್ಲಿ ಸುದೀರ್ ಘೋರ್ಪಡೆ, ಎಸ್​. ಆರ್​. ಪಾಟೀಲ, ಸಿ. ಜಿ. ಸೊನ್ನದ, ಶೇಖಪ್ಪ ಹೊನ್ನಪ್ಪನವರ, ಚನ್ನಯ್ಯ ಬಳಗಾನೂರು ಮಠ, ಕುಮಾರಸ್ವಾಮಿ ಹಿರೇಮಠ, ಜಿ.ಬಿ. ಅರವಟಗಿಮಠ, ಎ.ಎಂ. ತಹಸೀಲ್ದಾರ, ಸಿದ್ದಪ್ಪ ಹೂಗಾರು, ವೀಣಾ ಹೂಗಾರ ಇತರರು ಇದ್ದರು
ಕೋಟ್​:
ಜ. 18 ರಂದು ಯುವಕರಿಗೆ ಪೂರ್ವಭಾವಿ ಪರೀಕ್ಷೆ ನಡೆಸಲಾಗುವುದು. ಪರೀಕ್ಷೆಯಲ್ಲಿ ಪ್ರಥಮ ದ್ವೀತಿಯ ತೃತೀಯ ಸ್ಥಾನ ಪಡೆದವರಿಗೆ ಬಹುಮಾನ ನೀಡಲಾಗುವುದು. ಪ್ರಶ್ನೆ ಪತ್ರಿಕೆ ಅಗ್ನೀವಿರ ಮಾದರಿಯಲ್ಲೇ ಸಿದ್ಧಪಡಿಸಲಾಗಿದೆ. ತರಬೇತಿ ಕೇಂದ್ರದಲ್ಲೇ ಊಟ ವಸತಿ ನೀಡಲಾಗುವುದು. ಮೂರು ತಿಂಗಳ ಅವಧಿಗೆ ತರಬೇತಿ ಇರುತ್ತದೆ
ಜಿ. ಬಿ. ಮಾಲಗತ್ತಿಮಠ. ಸಂದ ಅಧ್ಯಕ್ಷ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net