ಈಶ್ವರಿಯ ವಿಶ್ವ ವಿದ್ಯಾಲಯದಲ್ಲಿ ಶಿಕ್ಷಕರ ದಿನಾಚರಣೆ

ನಗರದ ಬ್ರಹ್ಮಕುಮಾರಿ ವಿವಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಾಧಕ ಶಿಕ್ಷಕರನ್ನು ಸನ್ಮಾನಿಸಲಾಯಿತು. ರಾಧಾ ಎಸ್​, ಜಿ. ಎಸ್​. ಜತ್ತಿ, ಎಸ್​. ಆರ್​. ಕುಲಕಣಿರ್, ಎಫ್​. ಬಾಳಿಹಳ್ಳಿಮಠ, ಎಫ್​. ಎ. ನಮಾಜಿ, ಎಸ್​. ಎಸ್​. ಪಾಟೀಲ,  ಬಿ. ಎಚ್​. ಕಾಲವಾಡ, ಜೆ. ಬಿ. ಕುಂದರಗಿ, ಕವಿತಾ ಕೆ, ಮಹಾಲಕ್ಷಿ$್ಮ ತೊಂಡಿಹಾಳ, ದಾನಮ್ಮ ತೆಗ್ಗಿನಕೇರಿ ಇತರರು ಇದ್ದರು.
ನಗರದ ಬ್ರಹ್ಮಕುಮಾರಿ ವಿವಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಾಧಕ ಶಿಕ್ಷಕರನ್ನು ಸನ್ಮಾನಿಸಲಾಯಿತು. ರಾಧಾ ಎಸ್​, ಜಿ. ಎಸ್​. ಜತ್ತಿ, ಎಸ್​. ಆರ್​. ಕುಲಕಣಿರ್, ಎಫ್​. ಬಾಳಿಹಳ್ಳಿಮಠ, ಎಫ್​. ಎ. ನಮಾಜಿ, ಎಸ್​. ಎಸ್​. ಪಾಟೀಲ, ಬಿ. ಎಚ್​. ಕಾಲವಾಡ, ಜೆ. ಬಿ. ಕುಂದರಗಿ, ಕವಿತಾ ಕೆ, ಮಹಾಲಕ್ಷಿ$್ಮ ತೊಂಡಿಹಾಳ, ದಾನಮ್ಮ ತೆಗ್ಗಿನಕೇರಿ ಇತರರು ಇದ್ದರು.
Published on
ವಿಜಯವಾಣಿ ಸುದ್ದಿಜಾಲ ಗದಗ
ನಗರದ ಬ್ರಹ್ಮಕುಮಾರಿ ಈಶ್ವರಿಯ ವಿಶ್ವ ವಿದ್ಯಾಲಯದಲ್ಲಿ ಶಿಕ್ಷಕರ ದಿನಾಚರಣೆ ಪ್ರಯುಕ್ತ ಸೋಮವಾರ ವಿಶೇಷ ಕಾರ್ಯಕ್ರಮ ಮತ್ತು ಶಿಕ್ಷಕರಿಗೆ ಸನ್ಮಾನ ಸಮಾರಂಭ ಜರುಗಿತು.
ರಾಜಯೋಗಿನಿ ಬ್ರಹ್ಮಕುಮಾರಿ ಜಯಂತಿ ಅಕ್ಕನವರು ಮಾತನಾಡಿ, ಜ್ಞಾನವನ್ನು ಪುಸ್ತಕದಿಂದ ಮಸ್ತಕಕ್ಕೆ ತುಂಬಿದ ಶಿಕ್ಷಕರು ಜೀವನದ ಮೌಲ್ಯಗಳನ್ನು ಮಕ್ಕಳ ಮನಸ್ಸಿನಲ್ಲಿ ಧಾರಣೆ ಮಾಡಿಸುವ ಜವಾಬ್ದಾರಿ ಹೊರಬೇಕು. ಶಿಕ್ಷಕರು ದಿನಕ್ಕೆ ಕನಿಷ್ಠ ಒಂದು ಗಂಟೆ ರಾಜಯೋಗ ಧ್ಯಾನ ಹಾಗೂ ತರಬೇತಿಯನ್ನು ಪಡೆದುಕೊಂಡು, ಅದನ್ನು ತಮ್ಮ ವೃತ್ತಿ ಹಾಗೂ ವೈಯಕ್ತಿಕ ಜೀವನದಲ್ಲಿ ಅಳವಡಿಸಿಕೊಂಡಾಗ ಮುಂದಿನ ಪೀಳಿಗೆಗೆ ಅವರ ಜೀವನವೇ ಉಪದೇಶವಾಗುತ್ತದೆ. ಮಕ್ಕಳು ಕೆಲಮೊಮ್ಮೆ ತಂದೆ-ತಾಯಿಯ ಮಾತನ್ನು ಕೇಳುವುದಿಲ್ಲ. ಆದರೆ ಶಿಕ್ಷಕರ ಮಾತನ್ನು, ಗುರುಗಳ ಮಾತನ್ನು ಬಹಳ ಪ್ರೀತಿಯಿಂದ, ಗೌರವದಿಂದ ಕೇಳುತ್ತಾರೆ. ಆದ್ದರಿಂದ ಅವರ ಸರ್ವತೋಮುಖ ವ್ಯಕ್ತಿತ್ವದ ಬೆಳವಣಿಗೆಯಲ್ಲಿ ಶಿಕ್ಷಕರ ಪಾತ್ರ ಬಹಳ ಮುಖ್ಯ ಎಂದರು.
ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯ ಎಚ್​. ಬಿ. ರೆಡ್ಡರ್​ ಮಾತನಾಡಿ, ಇಲಾಖೆಯಿಂದ ಹೊಸದಾಗಿ ನೇಮಕಗೊಂಡ 140 ಶಿಕ್ಷಕರಿಗೆ ಬ್ರಹ್ಮಕುಮಾರಿ ಸಂಸ್ಥೆಯಲ್ಲಿ 10 ದಿನಗಳ ತರಬೇತಿ ನೀಡಲಾಗಿತ್ತು. ಶಿಕ್ಷಕರಲ್ಲಿ ಉತ್ತಮ ಸಂಸ್ಕಾರ, ನೈತಿಕ ಮೌಲ್ಯ ಮತ್ತು ಆಧ್ಯಾತ್ಮಿಕ ಚಿಂತನೆಗಳನ್ನು ಬೆಳೆಸುವ ಉದ್ದೇಶದಿಂದ ಬ್ರಹ್ಮಕುಮಾರಿ ಜಯಂತಿ ಅಕ್ಕನವರ ಮಾರ್ಗದರ್ಶನದಲ್ಲಿ ತರಬೇತಿ ನಡೆಸಲಾಗಿತ್ತು. ಇದರ ಪರಿಣಾಮವಾಗಿ, ಪ್ರಸಕ್ತ ಸಾಲಿನಲ್ಲಿ ಸರ್ಕಾರವು 1 ರಿಂದ 10 ನೇ ತರಗತಿಯವರೆಗೆ ಮೌಲ್ಯ ಶಿಕ್ಷಣವನ್ನು ಪಠ್ಯಕ್ರಮದ ಭಾಗವಾಗಿ ಜಾರಿಗೆ ತಂದಿದೆ ಎಂದು ತಿಳಿಸಿದರು.
ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪಡೆದ ಜಿ. ಎಚ್​. ಕಾಳವಾಡ ಮಾತನಾಡಿ, ನಾವು ಬಿತ್ತಿದ ಬೀಜ ಎಂದಾದರೂ ಒಂದು ದಿನ ಫಲ ನೀಡುತ್ತದೆ. ಮಕ್ಕಳಲ್ಲಿ ನೀಡಿದ ಶಿಕ್ಷಣ ಮತ್ತು ಈ ಸಂಸ್ಥೆಯು ನೀಡಿದ ನೈತಿಕ ಮೌಲ್ಯಗಳು ಜೀವನದ ಸಾರ್ಥಕತೆಗೆ ಕಾರಣವಾಗಿವೆ ಎಂದರು.
ಚಿಕ್ಕಟ್ಟಿ ಸಂಸ್ಥೆಯ ಮುಖ್ಯಸ್ಥ ಎಸ್​. ವೈ. ಚಿಕ್ಕಟ್ಟಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಸಾಧಕ ಶಿಕ್ಷರನ್ನು ಸನ್ಮಾನಿಸಲಾಯಿತು. ಶಿಕ್ಷರಾದ ನಾಗೇಶ, ಪುಷ್ಪಲತಾ ಬೆಲೇರಿ, ಅಕ್ಷಯ ವಿ. ಸಿ., ನಂದನ ಕೆ. ಜಿ, ವಿಸ್ಮಯ ಎನ್​, ನಮಿತಾ ಮುರಳಿ, ಮಹೇಶ ಬೆಟದೂರ, ವಿಠಲ ಪೂಜಾರ, ಎಸ್​. ಎಂ. ಕೊರಿಶೆಟ್ಟರ್​, ಎಸ್​. ಎಸ್​. ಅಂಗಡಿ, ಗಿರಿಯಪ್ಪ ಮಡಿವಾಳ, ಆರ್​. ಲಕ್ಷಿ$್ಮದೇವಿ, ಪಿ. ಆರ್​. ಪಾಟೀಲ, ವಿಜಯಾ ವಿ, ಪ್ರಿಯಾಂಕಾ ಪಾಟೀಲ ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net