ಗದಗದಲ್ಲಿ ಅಕ್ರಮವಾಗಿ ನೆಲೆಸಿದ್ದ ಇಬ್ಬರು ಬಾಂಗ್ಲಾದೇಶಿ ಪ್ರಜೆಗಳು ವಶಕ್ಕೆ

 ಬಾಂಗ್ಲಾ ಪ್ರಜೆಗಳು
ಬಾಂಗ್ಲಾ ಪ್ರಜೆಗಳು
Published on

ವಿಜಯವಾಣಿ ಸುದ್ದಿಜಾಲ ಗದಗ
ನಿರ್ಮಾಣ ಹಂತದಲ್ಲಿರುವ ವಸತಿ ಶಾಲೆಯ ಕಟ್ಟಡ ಕಾಮಗಾರಿಯಲ್ಲಿ ಕೆಲಸ ಮಾಡುತ್ತಿದ್ದ ಇಬ್ಬರು ಅಕ್ರಮ ಬಾಂಗ್ಲಾದೇಶಿ ಪ್ರಜೆಗಳನ್ನು ಜಿಲ್ಲಾ ಗ್ರಾಮೀಣ ಪೊಲೀಸರು ಖಚಿತ ಮಾಹಿತಿಯ ಮೇರೆಗೆ ವಶಕ್ಕೆ ಪಡೆದಿದ್ದಾರೆ ಎಂದು ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ರೋಹನ್​ ಜಗದೀಶ್​ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಬಾಂಗ್ಲಾದೇಶದ ಪ್ರಜೆಗಳಾದ ಮೊಹಮ್ಮದ ಸಾಕೀಬ್​ (26) ಹಾಗೂ ಮೊಹಮ್ಮದ ಹುಸೇನ್​ (22) ಬಂಧಿತರು. ಬಾಂಗ್ಲಾದೇಶದ ರಾಜ್​ಶಾಹಿ ಜಿಲ್ಲೆಯ ನಿವಾಸಿಗಳಾಗಿದ್ದಾರೆ. ವೀಸಾ ಹಾಗೂ ಪಾಸ್​ಪೋರ್ಟ ಇಲ್ಲದೇ ಅಕ್ರಮವಾಗಿ ಭಾರತ ಪ್ರವೇಶಿಸಿರುವುದು ವಿಚಾರಣೇಳೆ ಬೆಳಕಿಗೆ ಬಂದಿದೆ ಎಂದರು.
ಕೊಲ್ಕತ್ತಾದಲ್ಲಿ ಏಜೆಂಟರ ಮೂಲಕ ಅಕ್ರಮವಾಗಿ ಭಾರತೀಯ ದಾಖಲೆಗಳನ್ನು ಸೃಷ್ಟಿಸಿಕೊಂಡು, ಆಧಾರ್​ ಹಾಗೂ ಪ್ಯಾನ್​ ಕಾರ್ಡ ಪಡೆದಿರುವುದು ಪತ್ತೆಯಾಗಿದೆ. ಮೊಹಮ್ಮದ್​ ಸಾಕೀಬ್​ ಕಳೆದ 12 ವರ್ಷಗಳಿಂದ ಹಾಗೂ ಮೊಹಮ್ಮದ್​ ಹುಸೇನ್​ ಕಳೆದ 6 ವರ್ಷಗಳಿಂದ ಭಾರತದಲ್ಲಿ ವಿವಿಧೆಡೆ ನೆಲೆಸಿದ್ದರು. ಬೆಂಗಳೂರು, ಮಂಗಳೂರು, ಕೊಪ್ಪಳ, ಗಂಗಾವತಿ, ಇಸ್ಲಾಂಪುರ ಸೇರಿದಂತೆ ಹಲವು ಪ್ರದೇಶಗಳಲ್ಲಿ ಕೆಲಸ ಮಾಡಿರುವುದಾಗಿ ತಿಳಿದು ಬಂದಿದೆ. ಕಳೆದ ಎರಡು ತಿಂಗಳಿಂದ ಜಿಲ್ಲೆಯ ಹತಿರ್ ಗ್ರಾಮದ ಬಳಿ ನಿರ್ಮಾಣ ಕಾಮಗಾರಿಯಲ್ಲಿ ಕಾಮಿರ್ಕರಾಗಿ ಕಾರ್ಯ ನಿರ್ವಹಿಸುತ್ತಿದ್ದರು. ವಿಚಾರಣೆ ವೇಳೆ ಇಬ್ಬರೂ ತಮ್ಮ ಅಕ್ರಮ ವಲಸೆಯ ಕುರಿತು ಮಾಹಿತಿ ನೀಡಿದ್ದಾರೆ ಎಂದರು.
ಬಂಧಿಯ ಇಬ್ಬರನ್ನೂ ಧಾರವಾಡದ ಆಶ್ರಯ ನಿಲಯದಲ್ಲಿ ಇರಿಸಲಾಗಿದೆ. ಬೆಂಗಳೂರಿನ ಫಾರೆನರ್ಸ ರೀಜನಲ್​ ರಿಜಿಸ್ಟ್ರೆಶನ್​ ಆಫೀಸ್​ ವರದಿಗಾಗಿ ಕಾಯುತ್ತಿದೆವೆ. ವರದಿ ಬಂದ ಬಳಿಕ ಅಗತ್ಯ ಕಾನೂನು ಪ್ರಕ್ರಿಯೆ ರ್ಪೂಣಗೊಳಿಸಿ ಬಾಂಗ್ಲಾದೇಶ ಗಡಿಭಾಗದಲ್ಲಿರುವ ಬಾರ್ಡರ್​ ಸೆಕ್ಯುರಿಟಿ ೋರ್ಸ ಅಧಿಕಾರಿಗಳಿಗೆ ಹಸ್ತಾಂತರಿಸಲಾಗುವುದು ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net