

ಗದಗ: ಜಿಲ್ಲೆಯಲ್ಲಿ ಕಳೆದ ಒಂದು ವರ್ಷದಲ್ಲಿ 1,066 ಪ್ರಕರಣಗಳನ್ನು ಪತ್ತೆ ಮಾಡಿ 146 ಆರೋಪಿಗಳು ವಶಕ್ಕೆ ಪಡೆದಿರುವ ಜಿಲ್ಲಾ ಪೊಲೀಸರು 3.68 ಕೋಟಿ ರೂ. ಮೌಲ್ಯದ ಬಂಗಾರ, ಬೆಳ್ಳಿ, ವಾಹನ ಜಪ್ತಿ ಮಾಡಿದ್ದಾರೆ. ಕಳ್ಳತನವಾದ 1.65 ಕೋಟಿ ರೂ. ಮೌಲ್ಯದ 1.73 ಕೆಜಿ ಬಂಗಾರ, 37 ಕೆಜಿ ಬೆಳ್ಳಿ, 8 ಲಕ್ಷ ರೂ. ನಗದು, 36 ವಾಹನಗಳು ಹಾಗೂ 965 ಮೊಬೈಲ್ಗಳನ್ನು ಜಿಲ್ಲಾ ಪೊಲೀಸ್ ದಸ್ತಗಿರಿ ಮಾಡಿದೆ. ಈ ಕುರಿತು ಜಿಲ್ಲಾ ಪೊಲೀಸ್ ಕಲ್ಯಾಣ ಕೇಂದ್ರದಲ್ಲಿ ಬೆಳಗಾವಿ ಉತ್ತರ ವಲಯದ ಐಜಿಪಿ ಸಂದೀಪ ಪಾಟೀಲ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದರು. ನಿಯಮ ಪ್ರಕಾರ ಮೂಲ ಮಾಲೀಕರಿಗೆ ವಸ್ತುಗಳನ್ನು ಹಿಂದಿರುಗಿಸಿದರು. ಸುದ್ದಿಗೋಷ್ಠೀಯಲ್ಲಿ ಜಿಲ್ಲಾ ಎಸ್ಪಿ ರೋಹನ್ ಜಗದೀಶ, ಡಿವೈಎಸ್ಪಿ ಮುರ್ತುಜಾ ಖಾದ್ರಿ ಇತರರು ಇದ್ದರು.