ಮಾಜಿ ಸಚಿವ ಎಸ್.ಎಸ್. ಪಾಟೀಲ ಅವರ ಜನ್ಮದಿನವನ್ನು ಸಸಿ ನೆಡುವ ಮೂಲಕ ಆಚರಿಸಲಾಯಿತು. ಮಂಜುಳಾ ಅಕ್ಕಿ, ಸುಲೋಚನಾ ಐಹೋಳಿ, ಸ್ವಾತಿ ಹಿರೇಮಠ, ಚೇತನಾ ಹಂಪಿಮಠ, ಸುಜಾತಾ ಕಾಡಪ್ಪನವರ ಇತರರು ಇದ್ದರು.
ಉತ್ತಮ ಪರಿಸರ ನಮ್ಮೆಲ್ಲರ ಜೀವರಕ. ಇಂದು ವ್ಯಾಪಾರೀಕರಣ, ಔದ್ಯೋಗಿಕರಣದ ನಡುವೆ ಪರಿಸರವು ನಾಶವಾಗುತ್ತಿದೆ. ಇಂತಹ ಪರಿಸ್ಥಿಯಲ್ಲಿ ಹಸಿರು ಪರಿಸರದ ಅರಣ್ಯವನ ನಿಮಿರ್ಸುವ ಮೂಲಕ ಪ್ರಾಣಿ ಪಗಳಿಗೆ ಆಶ್ರಯ ತಾಣವಾಗಿರುವ ಈ ಜೈವ ಉದ್ಯಾನವನ ಮಾದರಿಯಾಗಿದೆ ಎಂದು ಮಾಜಿ ಸಚಿವ ಎಸ್.ಎಸ್ ಪಾಟೀಲ ಹೇಳಿದರು.
ತಾಲೂಕಿನ ಬಳಗಾನೂರ ಗ್ರಾಮದಲ್ಲಿ ಡಾ.ಪ್ರದಿಪ ಉಗಲಾಟ ಅವರು ನಿಮಿರ್ಸಿರುವ ಶಿವಶಾಂತ ಜೀವ ವೈವಿದ್ಯ ಉದ್ಯಾನವನದಲ್ಲಿ ಬುಧವಾರ 92ನೇ ಜನ್ಮ ದಿನಾಚರಣೆ ಅಂಗವಾಗಿ ಏರ್ಪಡಿಸಿದ್ದ 92 ಸಸಿಗಳನ್ನು ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಅರಣ್ಯ ಅತ್ಯಂತ ಅವಶ್ಯವಾಗಿದೆ. ಕಪ್ಪತ್ತಗುಡ್ಡವು ಔಷಧಿ ಸಸ್ಯಗಳ ಆಗರವಾಗಿದೆ. ಅರಣ್ಯ ಉಳಿದರೆ ಪರಿಸರ ಉಳಿಯುತ್ತದೆ. ಪರಿಸರ ಉಳಿದರೆ ಮಾನವನ ಜೀವನ ಸುರತವಾಗಿರುತ್ತದೆ. ಅರಣ್ಯವು ಪ್ರಕೃತಿಯ ಅಮೂಲ್ಯ ಕೊಡುಗೆ. ಭೂಮಿಯ ಜೀವಜಲದ ಆಧಾರವಾಗಿದೆ ಎಂದರು.
ಪಶು ವೈದ್ಯಕಿಯ ಮಹಾವಿದ್ಯಾಲಯದ ಪ್ರಾಧ್ಯಾಪಕ ಡಾ. ಶಿವಕುಮಾರ ರಡ್ಡೇರ ಮಾತನಾ, ಎಸ್. ಎಸ್. ಪಾಟೀಲರು ರಾಜಕೀಯ ಹೊರತಾಗಿಯೂ ಎಲ್ಲ ೇತ್ರಗಳಲ್ಲಿಯೂ ಸಾಮಾಜಿಕ ಕಾರ್ಯಗಳನ್ನು ಕೈಗೊಂಡಿದ್ದಾರೆ. ಶರಣರ ವಚನದಂತೆ ಸಸ್ಯಗಳನ್ನು ನೆಡುವ ಮೂಲಕ ಇಂದು ಜನ್ಮ ದಿನ ಆಚರಿಸಿಕೊಂಡಿದ್ದಾರೆ ಎಂದರು.
ಡಾ.ಜಿ.ಬಿ.ಪಾಟೀಲ ಮಾತನಾಡಿ ಬಸವಣ್ಣನವರ ತತ್ವ, ಸಿದ್ಧಾಂತಗಳನ್ನು ಅಳವಡಿಸಿಕೊಳ್ಳುವ ಮೂಲಕ ಎಸ್.ಎಸ್.ಪಾಟೀಲರು ಶರಣ ಬದುಕನ್ನು ಸಾರ್ಥಕಗೊಳಿಸಿದ್ದಾರೆ. ಡಾ. ಉಗಲಾಟ ದಂಪತಿಗಳು ಅರಣ್ಯವನ ನಿಮಿರ್ಸುವ ಮೂಲಕ ನಿಸರ್ಗದ ಸಂಪತ್ತನ್ನು ಕ್ರೂಢಿಕರಿಸುವ ಕೆಲಸಕ್ಕೆ ಮುಂದಾಗಿದ್ದಾರೆ ಎಂದರು.
ಪ್ರೊ. ಸಿದ್ದು ಯಾಪಲಪವಿರ್ ಮಾತನಾಡಿ ಇಳಿ ವಯಸ್ಸಿನಲ್ಲಿಯೂ ಎಸ್.ಎಸ್ ಪಾಟೀಲರ ಪರಿಸರ ಕಾಳಜಿ ಆಧರಣೀಯವಾಗಿದೆ. ತಮ್ಮ ಜನ್ಮದಿನವನ್ನು ಪರಿಸರದೊಂದಿಗೆ ಆಚರಿಸಿಕೊಳ್ಳುವ ಮೂಲಕ ಯುವ ಪೀಳಿಗೆಗೆ ಉತ್ತಮ ಸಂದೇಶ ನೀಡಿದ್ದಾರೆ ಎಂದರು.
ರೋಟರಿ ಕ್ಲಬ್ನ ಉಪಾಧ್ಯ ಸುರೇಶ ಕುಂಬಾರ ಮಾತನಾಡಿ ಆಧುನೀಕರಣದಲ್ಲಿ ಕಾಡುಗಳೆಲ್ಲ ನಾಡುಗಳಾಗುತ್ತಿವೆ. ಜೀವ ಜೀವ ವೈವಿಧ್ಯಕ್ಕೆ ಅಪಾರ ಹಾನಿ ಆಗುತ್ತಿದ್ದು, ಅವುಗಳ ಉಳಿವಿಗಾಗಿ ಹೋರಾಟ ನಡೆಯುತ್ತಿದೆ ಎಂದರು. ಕಾರ್ಯಕ್ರಮದಲ್ಲಿ ಎಸ್.ಎಸ್ ಪಾಟೀಲ ಅವರಿಗೆ ಸನ್ಮಾನಿಸಿ ಗೌರವಿಸಲಾಯಿತು.
ಡಾ. ವಿನಯ ಟೀಕಾರೆ, ಅಯ ಶೆಟ್ಟಿ, ಪ್ರದಿಪ ಉಗಲಾಟ, ನೀಲಾಂಬಿಕಾ ಉಗಲಾಟ, ಶಿವಾಚಾರ್ಯ ಹೊಸಳ್ಳಿಮಠ ಇತರರು ಇದ್ದರು.