ಸರ್ಕಾರಿ ಕಾಲೇಜಿನಲ್ಲಿ ಅಂತರಾಷ್ಟ್ರೀಯ ಯುವ ದಿನಾಚರಣೆ ವಿಜಯವಾಣಿ ಸುದ್ದಿಜಾಲ ಗದಗ ಜಿಲ್ಲಾ ಆಡಳಿತ ಮತ್ತು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಹಯೋಗದಲ್ಲಿ ಬುಧವಾರ ತಾಲೂಕಿನ ನರಸಾಪೂರ ಗ್ರಾಮದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಜಿಲ್ಲಾ ಮಟ್ಟದ ಅಂತರಾಷ್ಟ್ರೀಯ ಯುವ ದಿನ ಹಾಗೂ ಎಚ್ಐವಿ ಅರಿವಿನ ಮಾಸಾಚರಣೆ ಉದ್ಘಾಟನಾ ಕಾರ್ಯಕ್ರಮ ಜರುಗಿತು. ಸಮಾರಂಭ ಉದ್ಘಾಟಿಸಿ ಮಾತನಾಡಿದ ಆರೋಗ್ಯ ಇಲಾಖೆ ಅಧಿಕಾರಿ ಡಾ. ಅರುಂಧತಿ ಕೆ., ಯೌವನವನ್ನು ಸದುಪಯೋಗ ಪಡಿಸಿಕೊಳ್ಳಲು ಮಾನಸಿಕ, ದೈಹಿಕ, ಸಾಮಾಜಿಕ ಆರೋಗ್ಯದ ಕಡೆ ಗಮನ ಹರಿಸಬೇಕು. ಸಮಾಜದಲ್ಲಿ ಒಳ್ಳೆಯ ಸಂಪನ್ಮೂಲ ವ್ಯಕ್ತಿಗಳಾಗಿ ಬೆಳೆಯಬೇಕು. ಇಂದಿನ ಯುವಕರು ಸಧೃಢ ಆರೋಗ್ಯವನ್ನು ಹೊಂದಿ, ದೇಶದ ಭವಿಷ್ಯ ರೂಪಿಸಲು ಕೈಜೋಡಿಸಬೇಕು. ಇಂದಿನ ಯುವ ಜನಾಂಗದಲ್ಲಿ ಸಾಮಾಜಿಕ ಮೌಲ್ಯಗಳು ಕಡಿಮೆ ಆಗಿವೆ. ಗುರು ಹಿರಿಯರು, ತಂದೆ ತಾಯಿ ಎನ್ನುವ ಗೌರವವಿಲ್ಲದೆ ಆಧುನಿಕ ಮಾಧ್ಯಮದ ತಂತ್ರಜ್ಞಾನಕ್ಕೆ ಮಾರು ಹೋಗಿದ್ದಾರೆ. ದೇಶದಲ್ಲಿ ಶೇ. 40ರಷ್ಟು ಇರುವ ಯುವಜನರು ತಮ್ಮ ಜವಾಬ್ದಾರಿಯನ್ನು ಅರಿತು ದೇಶದ ಒಳಿತಿಗೆ ಪೂರಕವಾದ ತೀರ್ಮಾಣವನ್ನು ಕೈಗೊಂಡು ಸಧೃಡವಾದ ದೇಶ ಕಟ್ಟಲು ಮುಂದಾಗಬೇಕು. ರಕ್ತದಾನ ಮಾಡಲು ಎಚ್ಬಿ ಪ್ರಮಾಣ 12.5 ಗ್ರಾಂ ಇರಬೇಕು. ತೂಕ 45 ಕೆಜಿ. ಗಿಂತ ಹೆಚ್ಚು ಇರಬೇಕು. 18 ರಿಂದ 60 ವಯೋಮಾನದ ಪುರುಷ ಮಹಿಳೆ ಎಂಬ ಬೇಧ ಇಲ್ಲದೆ ಯಾರು ಬೇಕಾದರೂ ರಕ್ತದಾನ ಮಾಡಬಹುದು ಎಂದು ತಿಳಿಸಿದರು. ಆರೋಗ್ಯ ಇಲಾಖೆ ಸಹಾಯಕ ಅಧಿಕಾರಿ ಐಸಿಟಿಸಿ ಮೇಲ್ವಿಚಾರಕ ಬಿ. ಬಿ. ಲಾಳಗಟ್ಟಿ ಮಾತನಾಡಿ, ಇಂದಿನ ಯುಗದಲ್ಲಿ ಯುವಕರು ಆರೋಗ್ಯ ಅರಿವನ್ನು ಮೂಡಿಸಬೇಕು. ಸುಸ್ಥಿರ ಅಭಿವೃದ್ಧಿಯನ್ನು ಸಾ-ಧಿಸಲು ಯುವಕರು ಶಿಣಕ್ಕೆ ಹೆಚ್ಚು ಪ್ರಾಮುಖ್ಯತೆ ನೀಡಬೇಕು. ಜಾತಿ, ಧರ್ಮ, ಲಿಂಗ, ಗುಂಪು ಆಧಾರಿತ ಸವಾಲುಗಳನ್ನು ಎದುರುಸಿ ಯುವಕರು ಸನ್ನಡತೆಯನ್ನು ಅಳವಡಿಸಿಕೊಳ್ಳಬೇಕು ಎಂದರು. ಪ್ರಾಚಾರ್ಯ ಡಾ. ಶಿವಪ್ಪ ಕುರಿ ಮಾತನಾಡಿ, ಯುವಕರು ದುಶ್ಚಟಗಳಿಂದ ದೂರವಿದ್ದು, ಯವ್ವನವನ್ನು ಜೋಪಾನ ಮಾಡಿಕೊಳ್ಳಬೇಕು. ದುರಾಚಾರಿಗಳಿಂದ ದೂರವಿದ್ದ ಸಮಾಜಕ್ಕೆ ಒಳ್ಳೇಯ ಕೊಡುಗೆ ನೀಡಬೇಕು. ಇಲಾಖೆಯ ವಿವಿಧ ಸಾಮಾಜಿಕ ಕಾರ್ಯಗಳಲ್ಲಿ ಭಾಗವಹಿಸಿ ಸಾಮಾಜಿಕ ಸೇವೆಗೆ ಮುಂದಾಗಬೇಕು ಎಂದರು. ಕಾರ್ಯಕ್ರಮದಲ್ಲಿ ವಿದ್ಯಾಥಿರ್ಗಳಿಕೆ ಸದೃಢ ಆರೋಗ್ಯ ಮತ್ತು ಸನ್ನಡತೆ ಕುರಿತು ಪ್ರಮಾಣ ವಚನ ಬೋಧಿಸಲಾಯಿತು. ಸಾಧಕ ವಿದ್ಯಅಥಿರ್ಗಳಿಗೆ ಪ್ರಮಾಣಪತ್ರ ವಿತರಿಸಲಾಯಿತು. ಪ್ರೊ. ಖಲೀಲ ಅಹ್ಮದ, ಪ್ರೊ. ಕ್ಯಾರಕೋಪ್ಪ, ಚೆನ್ನಮ್ಮ, ಮಹೇಶ ಎಸ್. ಎಸ್.ಕೆ., ಪ್ರೊ. ಮಹಾದೇವ ವಡೇಕಾರ, ಪ್ರೊ. ಕವಿತಾ ಜಂಬಗಿ ಇತರರು ಇದ್ದರು. ಪೊಟೋ 12ಜಿಡಿಜಿ08 ಗದಗ ಸರ್ಕಾರಿ ಕಾಲೇಜಿನಲ್ಲಿ ಅಂತರಾಷ್ಟ್ರೀಯ ಯುವ ದಿನಾಚರಣೆ ಆಚರಿಸಲಾಯಿತು. ಅರುಂಧತಿ ಕೆ, ಬಿ.ಬಿ. ಲಾಳಗಟ್ಟಿ, ಪ್ರೊ. ಖಲೀಲ ಅಹ್ಮದ, ಪ್ರೊ. ಕ್ಯಾರಕೋಪ್ಪ ಇತರರು ಇದ್ದರು.
ಜಿಲ್ಲಾ ಆಡಳಿತ ಮತ್ತು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಹಯೋಗದಲ್ಲಿ ಬುಧವಾರ ತಾಲೂಕಿನ ನರಸಾಪೂರ ಗ್ರಾಮದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಜಿಲ್ಲಾ ಮಟ್ಟದ ಅಂತರಾಷ್ಟ್ರೀಯ ಯುವ ದಿನ ಹಾಗೂ ಎಚ್ಐವಿ ಅರಿವಿನ ಮಾಸಾಚರಣೆ ಉದ್ಘಾಟನಾ ಕಾರ್ಯಕ್ರಮ ಜರುಗಿತು.
ಸಮಾರಂಭ ಉದ್ಘಾಟಿಸಿ ಮಾತನಾಡಿದ ಆರೋಗ್ಯ ಇಲಾಖೆ ಅಧಿಕಾರಿ ಡಾ. ಅರುಂಧತಿ ಕೆ., ಯೌವನವನ್ನು ಸದುಪಯೋಗ ಪಡಿಸಿಕೊಳ್ಳಲು ಮಾನಸಿಕ, ದೈಹಿಕ, ಸಾಮಾಜಿಕ ಆರೋಗ್ಯದ ಕಡೆ ಗಮನ ಹರಿಸಬೇಕು. ಸಮಾಜದಲ್ಲಿ ಒಳ್ಳೆಯ ಸಂಪನ್ಮೂಲ ವ್ಯಕ್ತಿಗಳಾಗಿ ಬೆಳೆಯಬೇಕು. ಇಂದಿನ ಯುವಕರು ಸಧೃಢ ಆರೋಗ್ಯವನ್ನು ಹೊಂದಿ, ದೇಶದ ಭವಿಷ್ಯ ರೂಪಿಸಲು ಕೈಜೋಡಿಸಬೇಕು. ಇಂದಿನ ಯುವ ಜನಾಂಗದಲ್ಲಿ ಸಾಮಾಜಿಕ ಮೌಲ್ಯಗಳು ಕಡಿಮೆ ಆಗಿವೆ. ಗುರು ಹಿರಿಯರು, ತಂದೆ ತಾಯಿ ಎನ್ನುವ ಗೌರವವಿಲ್ಲದೆ ಆಧುನಿಕ ಮಾಧ್ಯಮದ ತಂತ್ರಜ್ಞಾನಕ್ಕೆ ಮಾರು ಹೋಗಿದ್ದಾರೆ. ದೇಶದಲ್ಲಿ ಶೇ. 40ರಷ್ಟು ಇರುವ ಯುವಜನರು ತಮ್ಮ ಜವಾಬ್ದಾರಿಯನ್ನು ಅರಿತು ದೇಶದ ಒಳಿತಿಗೆ ಪೂರಕವಾದ ತೀರ್ಮಾಣವನ್ನು ಕೈಗೊಂಡು ಸಧೃಡವಾದ ದೇಶ ಕಟ್ಟಲು ಮುಂದಾಗಬೇಕು. ರಕ್ತದಾನ ಮಾಡಲು ಎಚ್ಬಿ ಪ್ರಮಾಣ 12.5 ಗ್ರಾಂ ಇರಬೇಕು. ತೂಕ 45 ಕೆಜಿ. ಗಿಂತ ಹೆಚ್ಚು ಇರಬೇಕು. 18 ರಿಂದ 60 ವಯೋಮಾನದ ಪುರುಷ ಮಹಿಳೆ ಎಂಬ ಬೇಧ ಇಲ್ಲದೆ ಯಾರು ಬೇಕಾದರೂ ರಕ್ತದಾನ ಮಾಡಬಹುದು ಎಂದು ತಿಳಿಸಿದರು.
ಆರೋಗ್ಯ ಇಲಾಖೆ ಸಹಾಯಕ ಅಧಿಕಾರಿ ಐಸಿಟಿಸಿ ಮೇಲ್ವಿಚಾರಕ ಬಿ. ಬಿ. ಲಾಳಗಟ್ಟಿ ಮಾತನಾಡಿ, ಇಂದಿನ ಯುಗದಲ್ಲಿ ಯುವಕರು ಆರೋಗ್ಯ ಅರಿವನ್ನು ಮೂಡಿಸಬೇಕು. ಸುಸ್ಥಿರ ಅಭಿವೃದ್ಧಿಯನ್ನು ಸಾ-ಧಿಸಲು ಯುವಕರು ಶಿಣಕ್ಕೆ ಹೆಚ್ಚು ಪ್ರಾಮುಖ್ಯತೆ ನೀಡಬೇಕು. ಜಾತಿ, ಧರ್ಮ, ಲಿಂಗ, ಗುಂಪು ಆಧಾರಿತ ಸವಾಲುಗಳನ್ನು ಎದುರುಸಿ ಯುವಕರು ಸನ್ನಡತೆಯನ್ನು ಅಳವಡಿಸಿಕೊಳ್ಳಬೇಕು ಎಂದರು.
ಪ್ರಾಚಾರ್ಯ ಡಾ. ಶಿವಪ್ಪ ಕುರಿ ಮಾತನಾಡಿ, ಯುವಕರು ದುಶ್ಚಟಗಳಿಂದ ದೂರವಿದ್ದು, ಯವ್ವನವನ್ನು ಜೋಪಾನ ಮಾಡಿಕೊಳ್ಳಬೇಕು. ದುರಾಚಾರಿಗಳಿಂದ ದೂರವಿದ್ದ ಸಮಾಜಕ್ಕೆ ಒಳ್ಳೇಯ ಕೊಡುಗೆ ನೀಡಬೇಕು. ಇಲಾಖೆಯ ವಿವಿಧ ಸಾಮಾಜಿಕ ಕಾರ್ಯಗಳಲ್ಲಿ ಭಾಗವಹಿಸಿ ಸಾಮಾಜಿಕ ಸೇವೆಗೆ ಮುಂದಾಗಬೇಕು ಎಂದರು.
ಕಾರ್ಯಕ್ರಮದಲ್ಲಿ ವಿದ್ಯಾಥಿರ್ಗಳಿಕೆ ಸದೃಢ ಆರೋಗ್ಯ ಮತ್ತು ಸನ್ನಡತೆ ಕುರಿತು ಪ್ರಮಾಣ ವಚನ ಬೋಧಿಸಲಾಯಿತು. ಸಾಧಕ ವಿದ್ಯಅಥಿರ್ಗಳಿಗೆ ಪ್ರಮಾಣಪತ್ರ ವಿತರಿಸಲಾಯಿತು.
ಪ್ರೊ. ಖಲೀಲ ಅಹ್ಮದ, ಪ್ರೊ. ಕ್ಯಾರಕೋಪ್ಪ, ಚೆನ್ನಮ್ಮ, ಮಹೇಶ ಎಸ್. ಎಸ್.ಕೆ., ಪ್ರೊ. ಮಹಾದೇವ ವಡೇಕಾರ, ಪ್ರೊ. ಕವಿತಾ ಜಂಬಗಿ ಇತರರು ಇದ್ದರು.
ಗದಗ ಸರ್ಕಾರಿ ಕಾಲೇಜಿನಲ್ಲಿ ಅಂತರಾಷ್ಟ್ರೀಯ ಯುವ ದಿನಾಚರಣೆ ಆಚರಿಸಲಾಯಿತು. ಅರುಂಧತಿ ಕೆ, ಬಿ.ಬಿ. ಲಾಳಗಟ್ಟಿ, ಪ್ರೊ. ಖಲೀಲ ಅಹ್ಮದ, ಪ್ರೊ. ಕ್ಯಾರಕೋಪ್ಪ ಇತರರು ಇದ್ದರು.