ನರಗುಂದ ತಾಲೂಕಿನ 4 ಗ್ರಾಪಂ ವ್ಯಾಪ್ತಿಯಲ್ಲಿನ ಮೂಗನೂರ, ಹದ್ಲಿ, ಕೊಣ್ಣೂರ, ರ್ಕುಲಗೇರಿ, ಬನಹಟ್ಟಿ ಹಾಗೂ ಭೈರನಹಟ್ಟಿ ಗ್ರಾಮಗಳು ಸೇರಿದಂತೆ ಒಟ್ಟು 6 ಗ್ರಾಮಗಳಲ್ಲಿ ಕುಡಿವ ನೀರಿನ ಸಮಸ್ಯೆ, ಗಜೇಂದ್ರಗಡ ತಾಲೂಕಿನ 3 ಗ್ರಾಪಂ ಗಳ ವ್ಯಾಪ್ತಿಯಲ್ಲಿನ 4 ಗ್ರಾಮಗಳಾದ ಮಾಟರಂಗಿ, ಪುರ್ತಗೇರಿ, ಹಿರೇಕೊಪ್ಪ, ನಾಗೇಂದ್ರಗಡ, ರೋಣ ತಾಲೂಕಿನ 5 ಗ್ರಾಪಂ ವ್ಯಾಪ್ತಿಯ 8 ಗ್ರಾಮಗಳಾದ ಹೊಳೆಮಣ್ಣೂರ, ಮೆಣಸಗಿ, ಗಾಡಗೋಳಿ, ಭೋಪಳಾಪೂರ, ಬಿ.ಎಸ್.ಬೇಲೇರಿ, ಬಸರಕೋಡ, ಮಾಳವಾಡ ಹಾಗೂ ಬಾಸಲಾಪೂರ, ಶಿರಹಟ್ಟಿ ತಾಲೂಕಿನ 6 ಗ್ರಾಪಂ ವ್ಯಾಪ್ತಿಯಲ್ಲಿನ 10 ಗ್ರಾಮಗಳಾದ ಜೆಲ್ಲಿಗೇರಿ, ವರವಿ, ಜಲ್ಲಿಗೇರಿ ತಾಂಡಾ, ಚೌಡಾಳ, ನವೆಭಾವನೂರ, ಮಾಚೇನಹಳ್ಳಿ, ಕುಸಲಾಪೂರ, ಶಿವಾಜಿನಗರ, ಮಾಗಡಿ, ಚನ್ನಪಟ್ಟಣ, ಲೆ$್ಮಶ್ವರ ತಾಲೂಕಿನ 7 ಗ್ರಾಪಂ ವ್ಯಾಪ್ತಿಯಲ್ಲಿನ 10 ಗ್ರಾಮಗಳಾದ ಮಾಡಳ್ಳಿ, ಯತ್ತಿನಹಳ್ಳಿ, ಯಳವತ್ತಿ, ಗೊಜನೂರ, ಅಕ್ಕಿಗುಂದ, ಅಕ್ಕಿಗುಂದ ತಾಂಡಾ, ಪುಟಗಾಂ ಬಡ್ನಿ, ಆದ್ರಳ್ಳಿ, ಯಲ್ಲಾಪೂರ, ಬಾಲೆಹೊಸೂರ ಗ್ರಾಮಗಳ ಜನರು ನೀರನ ಸಮಸ್ಯೆ ಎದುರಿಸುತ್ತಿದ್ದಾರೆ. ಜಿಲ್ಲೆಯಲ್ಲಿರುವ ಒಟ್ಟು 122 ಗ್ರಾಪಂಗಳ ವ್ಯಾಪ್ತಿಯಲ್ಲಿ ಒಟ್ಟು 337 ಗ್ರಾಮಗಳಿವೆ. ಇವುಗಳಲ್ಲಿ 39 ಗ್ರಾಪಂಗಳು ಕುಡಿವ ನೀರಿನ ಸಮಸ್ಯೆಯನ್ನು ಎದುರಿಸುತ್ತಿವೆ.