ಆ. 18 ರಿಂದ ದ್ಯಾಮವ್ವ, ದುರಗಮ್ಮ ದೇವಿ ಹರಿಜಾತ್ರೋತ್ಸವ: ಕೋಟ್ರಪ್ಪ ಕಮತರ
ಒಕ್ಕಲಗೇರಿ ಓಣಿಯಲ್ಲಿ ಇರುವ ದ್ಯಾಮವ್ವ, ದುರಗಮ್ಮ ಜಾತ್ರಾ ಮಹೋತ್ಸವ ನಡೆಸುವ ಕುರಿತು ಕೊಟ್ರಪ್ಪ ಕಮತರ ಸುದ್ದಿಗೋಷ್ಠಿ ನಡೆಸಿದರು. ವಿಜಯಕುಮಾರ ಗಡ್ಡಿ, ವೀರಣ್ಣ ಮೇಟಿ, ಶ್ರೀಧರ ವಜ್ರಬಂಡಿ ಸೇರಿದಂತೆ ಹಲವರು ಇದ್ದರು.
ಅವಳಿ ನಗರದ ಓಕ್ಕಲಗೇರಿ ಓಣಿಯಲ್ಲಿರುವ ಗ್ರಾಮದೇವತೆಗಳಾದ ದ್ಯಾಮವ್ವ ಮತ್ತು ದುರಗಮ್ಮ ದೇವಿಯರ "ಹರಿಜಾತ್ರೋತ್ಸವ' ಕಾರ್ಯಕ್ರಮ 18 ವರ್ಷಗಳ ನಂತರ ಆ. 18 ರಿಂದ ಅದ್ದೂರಿಯಾಗಿ ಹಮ್ಮಿಕೊಳ್ಳಲಾಗುತ್ತಿದೆ ಎಂದು ಜಾತ್ರಾ ಮಹೋತ್ಸವ ಅಧ್ಯಕ್ಷ ಕೋಟ್ರಪ್ಪ ಕಮತರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಈ ಜಾತ್ರಾ ಮಹೋತ್ಸವ ಪ್ರತಿ 12 ವರ್ಷಕ್ಕೊಮ್ಮೆ ನಡೆಯುತ್ತದೆ. 2020ರಲ್ಲಿ 12 ವರ್ಷಕ್ಕೆ ಜಾತ್ರೆ ನಡೆಯಬೇಕಿತ್ತು. ಆದರೆ, ಅಂದು ಕರೋನಾ ಸಮಯವಿದ್ದರಿಂದ ಆರು ವರ್ಷ ತಡವಾಗಿ ಜಾತ್ರಾ ಮಹೋತ್ಸವ ನಡೆಯುತ್ತಿದೆ. ಆ. 18ರಂದು ದ್ಯಾಮವ್ವ ಮತ್ತು ದುರಗಮ್ಮ ದೇವಿಗಳ ಮೂತಿರ್ ಪ್ರತಿಷ್ಠಾಪನಾ ಕಾರ್ಯಕ್ರಮ ನಡೆಯಲಿದೆ. ಜೊತೆಗೆ ಪ್ರತಿದಿನ ಭಕ್ತಾದಿಗಳಿಗೆ ಮಹಾ ಅನ್ನಸಂತರ್ಪಣೆ ಕಾರ್ಯಕ್ರಮ ನಡೆಯಲಿದೆ. ಆ. 25ರಂದು ಉಡಿ ತುಂಬುವ ಕಾರ್ಯಕ್ರಮ ಆಯೋಜಿಸಲಾಗಿದೆ. ಹಾಗೂ ನಗರದಲ್ಲಿರುವ ವಿವಿಧ ದೇವಸ್ಥಾನಗಳಿಗೆ ಉಡಿ ತುಂಬುವ ಮತ್ತು ಕಾಯಿ ಒಡೆಯುವ ಕಾರ್ಯಕ್ರಮಗಳು ಜರುಗುವವು ಎಂದರು.
ಆ. 26 ರಂದು ಬೆಳಗ್ಗೆ 11 ಗಂಟೆಗೆ ದ್ಯಾಮವ್ವ ಹಾಗೂ ದುರಗಮ್ಮ ದೇವತೆಯರನ್ನು ಸಕಲ ಮಂಗಲವಾದ್ಯ ವೈಭವಗಳೊಂದಿಗೆ ಒಕ್ಕಲಗೇರಿಯ ದ್ಯಾಮವ್ವನ ಕಟ್ಟೆಯಿಂದ ಜೋಡು ಮಾರುತಿ ದೇವಸ್ಥಾನದ ಹತ್ತಿರದ ಕಿಲ್ಲಾ ಓಣಿಯಲ್ಲಿ ಇರುವ ದ್ಯಾಮವ್ವ ಹಾಗೂ ದುರಗಮ್ಮನ ಗುಡಿಯಲ್ಲಿ ಮೂತಿರ್ ಪ್ರತಿಷ್ಠಾಪನೆ ಮಾಡಲಾಗುವುದು. ಆ. 28 ರಂದು ದ್ಯಾಮವ್ವ ಹಾಗೂ ದುರಗಮ್ಮ ದೇವರ ಗುಡಿಯಲ್ಲಿ ಬೆಳಗ್ಗೆ 7 ಗಂಟೆಗೆ ಹೋಮ ಹಾಗೂ ಮಧ್ಯಾಹ್ನ ಅನ್ನಸಂತರ್ಪಣೆ, ಸಂಜೆ ಸಾಂಸತಿಕ ಕಾರ್ಯಕ್ರಮಗಳು ನೇರವೆರಲಿವೆ ಎಂದು ತಿಳಿಸಿದರು.
ಕಾರ್ಯಾಧ್ಯಕ್ಷ ಫಕ್ಕಿರಪ್ಪ ಹೆಬಸೂರ, ನಿಂಗಪ್ಪ ಪಡಗದ, ರಾಮಣ್ಣ ಪಲ್ಲದಡ್ಡಿ, ಶಿವಣ್ಣ ಕತ್ತಿ, ನಾಗಪ್ಪ ಗುಗ್ಗರಿ ಇತರರು ಇದ್ದರು.