ಪ್ಲಾಸ್ಟಿಕ್​ ಧ್ವಜ ಮಾರಾಟಗಾರರ ವಿರುದ್ಧ ಕ್ರಮಕ್ಕೆ ಆಗ್ರಹ

 ಪ್ಲಾಸ್ಟಿಕ್​ ಧ್ವಜ ನಿಷೇಧಿಸುವಂತೆ ಹಿಂದು ಜನಜಾಗೃತಿ ಸಮಿತಿ ಸದಸ್ಯರು ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ರೋಹನ್​ ಜಗದೀಶ ಅವರಿಗೆ ಮನವಿ ಸಲ್ಲಿಸಿದರು. ಭೀಮರಾಜ ದೊಡ್ಡಮನಿ, ಡಾ. ರವೀಂದ್ರ ನಂದಿ, ಪ್ರವಿಣ ಬೆನ್ನೂರ ಇತರರು ಇದ್ದರು.
ಪ್ಲಾಸ್ಟಿಕ್​ ಧ್ವಜ ನಿಷೇಧಿಸುವಂತೆ ಹಿಂದು ಜನಜಾಗೃತಿ ಸಮಿತಿ ಸದಸ್ಯರು ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ರೋಹನ್​ ಜಗದೀಶ ಅವರಿಗೆ ಮನವಿ ಸಲ್ಲಿಸಿದರು. ಭೀಮರಾಜ ದೊಡ್ಡಮನಿ, ಡಾ. ರವೀಂದ್ರ ನಂದಿ, ಪ್ರವಿಣ ಬೆನ್ನೂರ ಇತರರು ಇದ್ದರು.
Published on

ವಿಜಯವಾಣಿ ಸುದ್ದಿಜಾಲ ಗದಗ

ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ರಾಷ್ಟ್ರಧ್ವಜಕ್ಕೆ ಆಗುವ ಅವಮಾನವನ್ನು ತಡೆಗಟ್ಟಲು ಮತ್ತು ನಿಷೇಧಿತ ಪ್ಲಾಸ್ಟಿಕ್​ ಧ್ವಜಗಳ ಮಾರಾಟವನ್ನು ನಿಷೇಧಿಸಿ, ಮಾರಾಟ ಮಾಡುವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಹಿಂದೂ ಜನಜಾಗೃತಿ ಸಮಿತಿ ಸದಸ್ಯರು ಶುಕ್ರವಾರ ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿಗಳು ಹಾಗೂ ೇತ್ರ ಶಿಣಾಧಿಕಾರಿಗಳಿಗೆ ಪ್ರತ್ಯೇಕ ಮನವಿ ಸಲ್ಲಿಸಿದರು.
ಕಾಗದದ ಧ್ವಜಗಳು ಬೇಗನೆ ಮಣ್ಣಿನಲ್ಲಿ ಸೇರಿಹೋಗುತ್ತವೆ. ಆದರೆ ಪ್ಲಾಸ್ಟಿಕ್​ ಧ್ವಜಗಳು ನಾಶವಾಗದೆ ಹಲವು ದಿನಗಳವರೆಗೆ ರಸ್ತೆಗಳಲ್ಲಿ ಬಿದ್ದು ರಾಷ್ಟ್ರಧ್ವಜಕ್ಕೆ ಅಗೌರವ ಉಂಟಾಗುತ್ತಿದೆ. ಈ ರಾಷ್ಟ್ರೀಯ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿದ ಹಿಂದೂ ಜನಜಾಗೃತಿ ಸಮಿತಿಯು ಮುಂಬೈ ಹೈಕೋರ್ಟ್​ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅಜಿರ್ ಸಲ್ಲಿಕೆ ಆಗಿತ್ತು. ಅಜಿರ್ಯ ವಿಚಾರಣೆ ನಡೆಸಿದ ನ್ಯಾಯಾಲಯವು ಪ್ಲಾಸ್ಟಿಕ್​ ಧ್ವಜದಿಂದ ಆಗುವ ರಾಷ್ಟ್ರಧ್ವಜದ ಅವಮಾನವನ್ನು ತಡೆಯುವಂತೆ ಸರ್ಕಾರಕ್ಕೆ ಸ್ಪಷ್ಟ ಆದೇಶ ನೀಡಿತ್ತು. ಈ ಆದೇಶದಂತೆ ಕೇಂದ್ರ ಮತ್ತು ರಾಜ್ಯ ಗೃಹ ಇಲಾಖೆ ಹಾಗೂ ಶಿಣ ಇಲಾಖೆಯು ಈ ಕುರಿತು ಸುತ್ತೋಲೆ ಹೊರಡಿಸಿವೆ. ಕೇಂದ್ರ ಸರ್ಕಾರ ಪ್ಲಾಸ್ಟಿಕ್​ ಬಳಕೆಯನ್ನು ನಿಷೇಧಿಸಲಾಗಿದೆ. ಹಾಗಾಗಿ ಪ್ಲಾಸ್ಟಿಕ್​ ಧ್ವಜವನ್ನು ನಿಷೇಧಿಸಬೇಕು ಎಂದು ಮನವಿಯಲ್ಲಿ ತಿಳಿಸಲಾಗಿದೆ.
ಈ ಸಂದರ್ಭದಲ್ಲಿ ಪ್ರಕಾಶ ಕೋಟಿ, ವಿನಾಯಕ ಕೆ., ಭೀಮರಾಜ ದೊಡ್ಡಮನಿ, ಡಾ. ರವೀಂದ್ರ ನಂದಿ, ಲಕ್ಷಿ$್ಮ ನಂದಿ, ಪ್ರವಿಣ ಬೆನ್ನೂರ, ವಸಂತ ಕುಲಕಣಿರ್, ಕರಿಸೋಮನಗೌಡ್ರು, ನಿರಂಜನ ನಾರಾಯಣಕರ ಹಲವರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net