ಬಿಸಿಯೂಟ ಅನುದಾನ ಹೆಚ್ಚಳಕ್ಕೆ ಆಗ್ರಹಿಸಿ ಜಿಲ್ಲಾಧಿಕಾರಿಗೆ ಪ್ರಾಥಮಿಕ ಶಾಲಾ ಶಿಕ್ಷಕರ ಮನವಿ

ಪ್ರಾಥಮಿಕ ಶಾಲಾ ಶಿಕ್ಷಕರ ವಿವಿಧ ಬೇಡಿಕೆಗೆ ಆಗ್ರಹಿಸಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂದಿಂದ ಡಿಡಿಪಿಐ ಆರ್​. ಎಸ್​. ಬುರಡಿ ಅವರಿಗೆ ಮನವಿ ಸಲ್ಲಿಸಲಾಯಿತು. ವಿ. ಎಂ. ಹಿರೇಮಠ, ಎಸ್​.ಆರ್​. ಬಂಡಿ, ಎಂ. ಪಿ. ಶೀರನಳ್ಳಿ, ವಿ. ಸಿ. ಉಳ್ಳಾಗಡ್ಡಿ, ಬಿ. ಬಿ. ಹಡಪದ, ಎಂ. ಪಿ. ಮೋಹನ, ಎನ್​. ಎಚ್​. ಪಾಟೀಲ, ಎಸ್​.ಎಂ. ಬಸೇಗೌಡ್ರ, ಎಸ್​. ಎಸ್​. ಲಕೊಪ್ಪ, ಎಸ್​. ಪಿ. ಕುರಿ ಇತರರು ಇದ್ದರು.
ಪ್ರಾಥಮಿಕ ಶಾಲಾ ಶಿಕ್ಷಕರ ವಿವಿಧ ಬೇಡಿಕೆಗೆ ಆಗ್ರಹಿಸಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂದಿಂದ ಡಿಡಿಪಿಐ ಆರ್​. ಎಸ್​. ಬುರಡಿ ಅವರಿಗೆ ಮನವಿ ಸಲ್ಲಿಸಲಾಯಿತು. ವಿ. ಎಂ. ಹಿರೇಮಠ, ಎಸ್​.ಆರ್​. ಬಂಡಿ, ಎಂ. ಪಿ. ಶೀರನಳ್ಳಿ, ವಿ. ಸಿ. ಉಳ್ಳಾಗಡ್ಡಿ, ಬಿ. ಬಿ. ಹಡಪದ, ಎಂ. ಪಿ. ಮೋಹನ, ಎನ್​. ಎಚ್​. ಪಾಟೀಲ, ಎಸ್​.ಎಂ. ಬಸೇಗೌಡ್ರ, ಎಸ್​. ಎಸ್​. ಲಕೊಪ್ಪ, ಎಸ್​. ಪಿ. ಕುರಿ ಇತರರು ಇದ್ದರು.
Published on

ವಿಜಯವಾಣಿ ಸುದ್ದಿಜಾಲ ಗದಗ
ಬಿಸಿಯೂಟ ಅನುದಾನ ಹೆಚ್ಚಳ ಸೇರಿದಂತೆ ವಿವಿಧ ಸಮಸ್ಯೆಗಳ ಪರಿಹಾರಕ್ಕೆ ಆಗ್ರಹಿಸಿ ಗದಗ ಗ್ರಾಮೀಣ ವಲಯದ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂವು ಜಿಲ್ಲಾಧಿಕಾರಿ ಸಿ.ಎನ್​. ಶ್ರೀಧರ ಹಾಗೂ ಡಿಡಿಪಿಐ ಆರ್​. ಎಸ್​. ಬುರಡಿ ಅವರಿಗೆ ಶನಿವಾರ ಮನವಿ ಸಲ್ಲಿಸಿತು.
ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕ ವಿ.ಎಂ.ಹಿರೇಮಠ ಮಾತನಾಡಿ, ಶಾಲೆಗಳ ಬಿಸಿಯೂಟ ಯೋಜನೆಯಡಿ ಮೊಟ್ಟೆ ಹಾಗೂ ತರಕಾರಿ ದರಗಳು ದಿನದಿಂದ ದಿನಕ್ಕೆ ಏರಿಕೆ ಆಗುತ್ತಿರುವ ಹಿನ್ನೆಲೆಯಲ್ಲಿ ಪ್ರಸ್ತುತ ಒಂದು ಮೊಟ್ಟೆಗೆ ನೀಡಲಾಗುತ್ತಿರುವ ರೂ. 6 ಅನುದಾನ ಸಾಕಾಗುತ್ತಿಲ್ಲ. ಮೊಟ್ಟೆಯನ್ನು ಖರೀದಿಸುವುದು, ಕುದಿಸುವುದು ಹಾಗೂ ಸುಲಿಯುವುದು ಸೇರಿದಂತೆ ಉಂಟಾಗುತ್ತಿರುವ ಹೆಚ್ಚುವರಿ ವೆಚ್ಚದಿಂದ ಮುಖ್ಯೋಪಾಧ್ಯಾಯರ ಮೇಲೆ ಆಥಿರ್ಕ ಹೊರೆ ಬೀಳುತ್ತಿದೆ. ಆದ್ದರಿಂದ ಮಾರುಕಟ್ಟೆ ದರಕ್ಕೆ ಅನುಗುಣವಾಗಿ ಮೊಟ್ಟೆ ಹಾಗೂ ಅಡುಗೆ ವೆಚ್ಚದ ಅನುದಾನವನ್ನು ತಣವೇ ಹೆಚ್ಚಿಸಬೇಕು ಎಂದು ಒತ್ತಾಯಿಸಿದರು.
ಎಸ್​ಎಟಿಎಸ್​ ನಲ್ಲಿ ನಿರಂತರವಾಗಿ ಸಿಂಕ್​ ಆಗದಿರುವ ತಾಂತ್ರಿಕ ಸಮಸ್ಯೆಯನ್ನು ಶ್ರೀ ಪರಿಹರಿಸಬೇಕು. ಎಲ್​ಕೆಜಿ ಹಾಗೂ ಯುಕೆಜಿ ಮಕ್ಕಳ ಹಾಜರಾತಿ ನಿರಂತರದಲ್ಲಿ ದಾಖಲಾಗದ ಕಾರಣ ಅನುಷ್ಠಾನದ ಅನುದಾನ ವೆಚ್ಚ ನಿರ್ವಹಣೆಯಲ್ಲಿ ಎದುರಾಗುತ್ತಿರುವ ಸಮಸ್ಯೆಯನ್ನು ನಿವಾರಿಸಬೇಕು. ಅರ ದಾಸೋಹ ಯೋಜನೆಯಡಿ ಅಗತ್ಯ ದಾಸ್ತಾನುಗಳನ್ನು ಕಾಲಕಾಲಕ್ಕೆ ಪೂರೈಸಬೇಕು ಎಂದು ಹೇಳಿದರು.
ಕಳೆದ ಬೇಸಿಗೆ ರಜೆ ಅವಧಿಯಲ್ಲಿ ಭಾರತ ಜನಗಣತಿ ಸಮೀೆ ಕಾರ್ಯದಲ್ಲಿ ಪಾಲ್ಗೊಂಡ ಶಿಕರಿಗೆ ಬಾಕಿ ಇರುವ ಗೌರವಧನವನ್ನು ಶ್ರೀ ಬಿಡುಗಡೆ ಮಾಡಬೇಕು ಹಾಗೂ ಗಳಿಕೆ ರಜೆಯನ್ನು ಜಮಾ ಮಾಡುವ ಕುರಿತು ಸಂಬಂಧಪಟ್ಟ ಇಲಾಖೆಗೆ ಅಗತ್ಯ ನಿರ್ದೇಶನ ನೀಡುವಂತೆ ಸಂದ ವತಿಯಿಂದ ಆಗ್ರಹಿಸಲಾಯಿತು.
ಮನವಿ ಸ್ವೀಕರಿಸಿ ಅಧಿಕಾರಿಗಳು ಸಂಬಂಧಿಸಿದವರ ಗಮನ ಸೆಳೆಯುವದಾಗಿ ಭರವಸೆ ನೀಡಿದರು.
ಎಸ್​.ಆರ್​. ಬಂಡಿ, ಎಂ. ಪಿ. ಶೀರನಳ್ಳಿ, ವಿ. ಸಿ. ಉಳ್ಳಾಗಡ್ಡಿ, ಬಿ. ಬಿ. ಹಡಪದ, ಎಂ. ಪಿ. ಮೋಹನ, ಎನ್​. ಎಚ್​. ಪಾಟೀಲ, ಎಸ್​.ಎಂ. ಬಸೇಗೌಡ್ರ, ಎಸ್​. ಎಸ್​. ಲಕೊಪ್ಪ, ಎಸ್​. ಪಿ. ಕುರಿ, ಕೆ. ಬಿ. ಕೊಣ್ಣೂರ, ಬಿ. ವೈ. ಹುಡೇದಮನಿ, ಎಸ್​.ಡಿ. ಗುಂಜಳ, ಎನ್​.ಆರ್​. ಶೈಲಾ, ಪಿ.ಕೆ. ಅವರಡ್ಡಿ, ಬಿ.ಎಸ್​. ತಮ್ಮನಗೌಡ್ರ, ಎ್​.ಎಸ್​. ಗಾಣಿಗೇರ, ಪಿ. ಬಿ. ಮುಧೋಳಮಠ, ಟಿ. ಡಿ. ಲಮಾಣಿ, ಪಿ. ಎ್​. ಅಗಸಿಮನಿ, ಬಿ.ವಿ. ಹೊಸಮನಿ, ಜೆ.ಎನ್​. ದೊಡ್ಡಮನಿ, ವಿ.ಎ್​. ಕಲಕಂಬಿ, ಬಿ.ಎಸ್​. ಆಲೂರ, ಎಸ್​.ಬಿ. ಅಂಗಡಿ, ಎ. ವಿ. ಪ್ರಭು, ಎಸ್​.ಕೆ. ಹೊಟ್ಟಿನ, ರವಿ ಪಡೆಸೂರ, ಎ. ಡಿ. ಬಂಡಿ, ಸಿ.ಕೆ. ಮರಿಗೌಡ್ರ ಹಲವರು ಇದ್ದರು.




ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net