ಜೆಟಿ ಕಾಲೇಜಿನ ಆವರಣದಲ್ಲಿ ಬೃಹತ್​ ಆರೋಗ್ಯ ಶಿಬಿರ

ಕೆಎಲ್​ಇ ಸಂಸ್ಥೆಯ ಜೆಟಿ ಕಾಲೇಜಿನ ಆವರಣದಲ್ಲಿ ಉಚಿತ ಆರೋಗ್ಯ ಶಿಬಿರ ನಡೆಸುವ ಕುರಿತು ಎಸ್​.ವಿ. ಸಂಕನೂರು ಸುದ್ದಿಗೋಷ್ಟಿ ನಡೆಸಿದರು. ಎಸ್​.ಪಿ ಸಂಶಿಮಠ, ವಿರೇಶ ಕೂಗು, ಈಶಣ್ಣ ಮುನವಳ್ಳಿ, ಮೃತ್ಯುಂಜಯ ಸಂಕೇಶ್ವರ, ಡಾ. ಅಲ್ಲಮಪ್ರಭು ಇತರರು ಇದ್ದರು.
ಕೆಎಲ್​ಇ ಸಂಸ್ಥೆಯ ಜೆಟಿ ಕಾಲೇಜಿನ ಆವರಣದಲ್ಲಿ ಉಚಿತ ಆರೋಗ್ಯ ಶಿಬಿರ ನಡೆಸುವ ಕುರಿತು ಎಸ್​.ವಿ. ಸಂಕನೂರು ಸುದ್ದಿಗೋಷ್ಟಿ ನಡೆಸಿದರು. ಎಸ್​.ಪಿ ಸಂಶಿಮಠ, ವಿರೇಶ ಕೂಗು, ಈಶಣ್ಣ ಮುನವಳ್ಳಿ, ಮೃತ್ಯುಂಜಯ ಸಂಕೇಶ್ವರ, ಡಾ. ಅಲ್ಲಮಪ್ರಭು ಇತರರು ಇದ್ದರು.
Published on
ವಿಜಯವಾಣಿ ಸುದ್ದಿಜಾಲ ಗದಗ
ನಗರದ ಕೆಎಲ್​ ಇ ಸಂಸ್ಥೆಯ ಜೆಟಿ ಕಾಲೇಜಿನ ಸಭಾ ಭವನದಲ್ಲಿ ಜು.17, ಬೆಳಗ್ಗೆ 10.30 ಕ್ಕೆ ಬೆಳಗಾವಿಯ ಪ್ರಭಾಕರ ಕೋರೆ ಆಸ್ಪತ್ರೆ ಹಾಗೂ ವೈದ್ಯಕಿಯ ಸಂಶೋಧನೆ ಕೇಂದ್ರ, ಹುಬ್ಬಳ್ಳಿಯ ಕೆಎಲ್​ಇ ಆಸ್ಪತ್ರೆ ಮತ್ತು ವೈದ್ಯಕಿಯ ಮಹಾವಿದ್ಯಾಲಯ, ಜವಹರಲಾಲ್​ ನೆಹರು ವೈದ್ಯಕಿಯ ಮಹಾವಿದ್ಯಾಲಯ ಸಂಯುಕ್ತ ಆಶ್ರಯದಲ್ಲಿ ಬೃಹತ್​ ಉಚಿತ ಆರೋಗ್ಯ ತಪಾಸಣೆ ಮತ್ತು ಶಸ್ತ್ರಚಿಕಿತ್ಸೆ ಶಿಬಿರವನ್ನು ಜು.17ಕ್ಕೆ ಹಮ್ಮಿಕೊಳ್ಳಲಾಗಿದೆ ಎಂದು ವಿಧಾನ ಪರಿಷತ್​ ಸದಸ್ಯ ಎಸ್​.ವಿ. ಸಂಕನೂರು ಬುಧವಾರ ಸುದ್ದಿಗೋಷ್ಟಿ ಯಲ್ಲಿ ಹೇಳಿದರು.
ಕೆಎಲ್​ಇ ಸಂಸ್ಥೆಯು ರಾಜ್ಯದ ಶ್ರೇಷ್ಠ ದರ್ಜೆಯ ಶಿಕ್ಷಣ ಸಂಸ್ಥೆ ಆಗಿದೆ. ಸಹಕಾರ, ಸಾಮಾಜಿಕ, ಕೃಷಿ ಕ್ಷೇತ್ರ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಈ ಸಂಸ್ಥೆ ಕಾರ್ಯ ನಿರ್ವಹಿಸುತ್ತಿದೆ. ಈ ಸಂಸ್ಥೆಯಿಂದ ಗದಗ ನಗರ ಜನತೆಗೆ ಅನುಕೂಲಕ್ಕೆ ಈ ಶಿಬಿರ ಮಾಡಲಾಗುತ್ತಿದೆ. ಸಂಸ್ಥೆಯ ಸಂಸ್ಥೆಯ ಶಿಕ್ಷಕ ವೃಂದವು ಪ್ರತಿ ಗ್ರಾಪಂ ಗೆ ತೆರಳಿ ಶಿಬಿರ ಕುರಿತು ಜಾಗೃತಿ ಮೂಡಿಸಿದ್ದಾರೆ. ಆನ್​ ಲೈನ್​ ಮೂಲಕವು ನೋಂದಣಿಗೆ ಅವಕಾಶ ನೀಡಲಾಗಿದೆ. ಈಗಾಗಲೇ 8 ಸಾವಿರ ಜನರು ನೋಂದಣಿ ಮಾಡಿಕೊಂಡಿದ್ದಾರೆ ಎಂದರು.
ರೋಗಿಗಳಿಗೆ 20 ಕೌಂಟರ್​ ತೆರೆಯಲಾಗಿದೆ. ಪ್ರತಿ ರೋಗಕ್ಕೂ ಪ್ರತ್ಯೇಕ ತಪಾಸಣೆ ಕೊಠಡಿಗಳನ್ನು ತೆರೆಯಲಾಗಿದೆ. 50 ತಜ್ಞ ವೈದ್ಯರು ಶಿಬಿರದಲ್ಲಿ ತಪಾಸಣೆ ಮಾಡಲಿದ್ದಾರೆ. ರೋಗಗಳನ್ನು ಕಂಡು ಹಿಡಿಯಲು 18 ಲ್ಯಾಬ್​ ಗಳನ್ನು ಸಂಸ್ಥೆ ಆವರಣದಲ್ಲಿ ತೆರೆಯಲಾಗಿದೆ. ತಪಾಸಣೆ ನಂತರ ಉಚಿತ ಔಷಧ ವಿತರಿಸಲಾಗುತ್ತದೆ. ಚಿಕಿತ್ಸೆ ಅವಶ್ಯವಿದ್ದರೆ ಕೆಎಲ್​ಇ ವೈದ್ಯಕಿಯ ಸಂಸ್ಥೆಗೆ ಶಿಫಾರಸು ಮಾಡಲಾಗುವುದು. ಅತ್ಯಂತ ಕಡಿಮೆ ವೆಚ್ಚದಲ್ಲಿ ಚಿಕಿತ್ಸೆ ನೀಡಲಾಗುವುದು ಎಂದರು.
ತೋಂಟದಾರ್ಯ ಮಠದ ಸಿದ್ಧರಾಮ ಶ್ರೀಗಳು ಸಾನ್ನಿಧ್ಯ ವಹಿಸುವರು. ಕೆಎಲ್​ಇ ಸಂಸ್ಥೆಯ ಮಾಜಿ ನಿರ್ದೇಶಕ ಶಂಕ್ರಣ್ಣ ಮುನವಳ್ಳಿ ಅಧ್ಯಕ್ಷತೆ ವಹಿಸುವರು. ಸಂಸದ ಬಸವರಾಜ ಬೊಮ್ಮಾಯಿ, ಶಾಸಕ ಎಚ್​.ಕೆ. ಪಾಟೀಲ, ಜಿಲ್ಲಾಧಿಕಾರಿ ಸಿ.ಎನ್​. ಶ್ರೀಧರ, ಆರೋಗ್ಯ ಇಲಾಖೆ ಅಧಿಕಾರಿ ಎಚ್​.ಎಸ್​. ನೀಲಗುಂದ ಕಾರ್ಯಕ್ರಮದಲ್ಲಿ ಉಪಸ್ಥಿತಿ ಇರುವರು ಎಂದು ಸಂಕನೂರು ಹೇಳಿದರು.
ಎಸ್​.ಪಿ. ಸಂಶಿಮಠ ಮಾತನಾಡಿ, ಕೆಎಲ್​ಇ ಸಂಸ್ಥೆ ಆರಂಭವಾಗಿ 125 ವರ್ಷ ಕಳೆಯಿತು. ಈ ಸಂಭ್ರಮದ ಹಿನ್ನೆಲೆ ಈ ಬೃಹತ್​ ಶಿಬಿರ ಹಮ್ಮಿಕೊಳ್ಳಾಗುತ್ತಿದೆ. ಶಿಬಿರದಲ್ಲಿ ಹೃದಯ ರೋಗ, ಹೃದಯ ಚಿಕಿತ್ಸೆ ಅಂಗಾಗ ಜೋಡಣೆ, ಮೂತ್ರಕೋಶ, ಮೂತ್ರಪಿಂಡ ಅಂಗಾಗ ಕಸಿ ಜೋಡಣೆ ನೇತ್ರ ಶಸ್ತ್ರಚಿಕಿತ್ಸೆ, ಶ್ವಾಸಕೋಶ, ನರರೋಗ ಶಸ್ತ್ರಚಿಕಿತ್ಸೆ, ಎಲಬು ಕೀಲು, ಕ್ಯಾನ್ಸರ್​ ರೋಗ ಚಿಕಿತ್ಸೆ, ಸ್ತ್ರೀ ರೋಗ, ಚರ್ಮರೋಗ ಚಿಕಿತ್ಸೆ ಸೇರಿದಂತೆ ಇತರೆ ರೋಗಗಳ ಪರಿಶೀಲನೆ ನಡೆಸಲಾಗುವುದು. ಚಿಕಿತ್ಸೆ ಅಗತ್ಯ ಇರುವ ರೋಗಿಗಳಿಗೆ ಬೆಳಗಾವಿ ಕೆಎಲ್​ಇ ಗೆ ತೆರಳಲು ಉಚಿತ ಬಸ್​ ಪ್ರಯಾಣದ ವ್ಯವಸ್ಥೆ ಮಾಡಲಾಗುವುದು ಎಂದರು.
ಸುದ್ದಿಗೋಷ್ಟಿಯಲ್ಲಿ ವಿರೇಶ ಕೂಗು, ಈಶಣ್ಣ ಮುನವಳ್ಳಿ, ಮೃತ್ಯುಂಜಯ ಸಂಕೇಶ್ವರ, ಡಾ. ಅಲ್ಲಮಪ್ರಭು ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net