ದ್ಯಾಮವ್ವ, ದುರ್ಗಮ್ಮ ಹರಿಜಾತ್ರೆಯನ್ನು ವಿಜ್ರಂಭಣೆಯಿಂದ ಆಚರಿಸಲು ಭಕ್ತರ ನಿರ್ದಾರ

  ಗದಗ ನಗರದ ರಾಚೋಟೀಶ್ವರ ದೇವಸ್ಥಾನದಲ್ಲಿ ನಡೆದ ಸಭೆಯಲ್ಲಿ ದ್ಯಾಮವ್ವ ದುರ್ಗಮ್ಮ ಜಾತ್ರೆ ನಡೆಸಲು ತೀರ್ಮಾನಿಸಲಾಯಿತು. ಎಂ.ಎಂ.ಹಿರೇಮಠ, ರಾಜು ಖಾನಪ್ಪನವರ, ಕೊಟ್ರಪ್ಪ ಕಮತರ, ಕ್ಕಿರಪ್ಪ ಹೆಬಸೂರ, ಮಂಜುನಾಥ ಅಬ್ಬಿಗೇರಿ, ಪ್ರಶಾಂತ ಶಾಬಾದಿಮಠ ಹಲವರು ಇದ್ದರು.
ಗದಗ ನಗರದ ರಾಚೋಟೀಶ್ವರ ದೇವಸ್ಥಾನದಲ್ಲಿ ನಡೆದ ಸಭೆಯಲ್ಲಿ ದ್ಯಾಮವ್ವ ದುರ್ಗಮ್ಮ ಜಾತ್ರೆ ನಡೆಸಲು ತೀರ್ಮಾನಿಸಲಾಯಿತು. ಎಂ.ಎಂ.ಹಿರೇಮಠ, ರಾಜು ಖಾನಪ್ಪನವರ, ಕೊಟ್ರಪ್ಪ ಕಮತರ, ಕ್ಕಿರಪ್ಪ ಹೆಬಸೂರ, ಮಂಜುನಾಥ ಅಬ್ಬಿಗೇರಿ, ಪ್ರಶಾಂತ ಶಾಬಾದಿಮಠ ಹಲವರು ಇದ್ದರು.
Published on
ವಿಜಯವಾಣಿ ಸುದ್ದಿಜಾಲ ಗದಗ
ನಗರದ ಒಕ್ಕಲಗೇರಿ ಓಣಿಯಲ್ಲಿ ಹನ್ನೆರೆಡು ವರ್ಷಕ್ಕೊಂಮ್ಮೆ ನಡೆಯುವ ಗದಗ&ಬೆಟಗೇರಿ ಗ್ರಾಮ ದೇವತೆಯರಾದ ದ್ಯಾಮವ್ವ ದುರ್ಗಮ್ಮ ದೇವಿಯವರ ಹರಿಜಾತ್ರೆಯನ್ನು ಆ. 18 ರಿಂದ 28ರ ವರೆಗೆ ಬಹಳ ವಿಜ್ರಂಭಣೆಯಿಂದ ಆಚರಿಸಲು ಭಕ್ತರು ನಿರ್ಧರಿಸಿದರು.
ನಗರದ ರಾಚೋಟೇಶ್ವರಿ ದೇವಸ್ಥಾನದಲ್ಲಿ ಭಾನುವಾರ ಜರುಗಿದ ಭಕ್ತರ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು. ಆ.8 ರಂದು ದ್ಯಾಮವ್ವನ ಕಟ್ಟೆಯಲ್ಲಿ ದ್ಯಾಮಮ್ಮ ದುರ್ಗಮ್ಮ ದೇವಿಯರ ಮೂತಿರ್ಗಳ ಪ್ರತಿಷ್ಠಾಪನೆ ಕಾರ್ಯಕ್ರಮ, ಆ. 28 ರ ವರೆಗೆ ಪ್ರತಿ ಸಂಜೆ ಸಾಂಸತಿಕ ಕಾರ್ಯಕ್ರಮ ನಡೆಸಲು ತಿರ್ಮಾನಿಸಲಾಯಿತು.
ಆ.25 ರಂದು ಮುತೆದೆಯರಿಗೆ ದೇವಸ್ಥಾನದಲ್ಲಿ ಉಡಿ ತುಂಬುವ ಕಾರ್ಯಕ್ರಮ ಹಾಗೂ ಮಧ್ಯಾಹ್ನ ನಗರದಲ್ಲಿರುವ ದೇವಸ್ಥಾನಗಳಿಗೆ ಉಡಿ ತುಂಬುವ ಹಾಗೂ ಕಾಯಿ ಒಡೆಸುವ ಕಾರ್ಯಕ್ರಮ ಜರುಗಲಿವೆ. ಆ. 26 ರಂದು ದ್ಯಾಮವ್ವ ಹಾಗೂ ದುರ್ಗಮ್ಮ ದೇವತೆಯರನ್ನು ಸಕಲ ಮಂಗಲ ವಾದ್ಯ ವೈಭವಗಳೊಂದಿಗೆ ಮೂತಿರ್ ಪ್ರತಿಷ್ಠಾಪನೆ ಮಾಡಲಾಗುವುದು. ಆ. 28 ರಂದು ಮಹಾ ಹೋಮ, ಅನ್ನ ಸಂತರ್ಪಣೆ ನಡೆಸಲು ತೀಮಾನಿಸಲಾಯಿತು.
ಸಭೆಯಲ್ಲಿ ಎಂ.ಎಂ.ಹಿರೇಮಠ, ರಾಜು ಖಾನಪ್ಪನವರ, ಕೊಟ್ರಪ್ಪ ಕಮತರ, ಕ್ಕಿರಪ್ಪ ಹೆಬಸೂರ, ಮಂಜುನಾಥ ಅಬ್ಬಿಗೇರಿ, ಪ್ರಶಾಂತ ಶಾಬಾದಿಮಠ, ರಾಮಣ್ಣ ಪಲದೊಡ್ಡಿ, ಅರುಣಕುಮಾರ ಚವ್ಹಾಣ, ಆನಂದ ಸರೋದೆ, ವಿಜಯಕುಮಾರ ಗಡ್ಡಿ, ರಾಜು ಕುರುಡಗಿ, ಪ್ರಕಾಶ ಬೊಮ್ಮನಳ್ಳಿ, ಪಕ್ಕಿರಸಾ ಭಾಂಡಗೆ, ಶ್ರೀಕಾಂತ ಖಟವಟೆ, ಚಂದ್ರಶೇಖರಪ್ಪ ಪಟ್ಟಣಶೆಟ್ಟಿ, ಶಿವಪ್ಪ ಕತ್ತಿ, ಮುರಗೇಪ್ಪ ನಾಲ್ವಾಡ ಹಲವರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net