ಧರ್ಮಸ್ಥಳ ಗ್ರಾಮಾಭಿವೃದ್ಧಿ ಟ್ರಸ್ಟ್​ದಿಂದ ಸ್ವಾಸ್ಥ ಸಂಕಲ್ಪ ಕಾರ್ಯಕ್ರಮ

Gadag
Gadag
Published on
ವಿಜಯವಾಣಿ ಸುದ್ದಿಜಾಲ ಗದಗ
ದುಶ್ಚಟಗಳು ವಿದ್ಯಾಥಿರ್ಗಳನ್ನು ಬಲಹೀನಗೊಳಿಸುತ್ತವೆ. ವಿದ್ಯಾಥಿರ್ ಜೀವನವು ಸುಗಮವಾಗಿ ಪರಿರ್ಪೂಣವಾಗಲು ನಿರಂತರ ಓದು, ಶಿಸ್ತು, ಉತ್ತಮ ಆರೋಗ್ಯ ಅತ್ಯವಶ್ಯವಾಗಿದೆ. ಉತ್ತಮ ಸಂಸ್ಕಾರದೊಂದಿಗೆ ಯಶಸ್ಸು ಸಾಧಿಸಬೇಕು ಎಂದು ಪತ್ರಕರ್ತ ಬಸವರಾಜ ದಂಡಿನ ಹೇಳಿದರು
ನಗರದ ಸಂಕೇತ ಕಾಲೇಜ್​ದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಟ್ರಸ್ಟ್​ ಏರ್ಪಡಿಸಿದ್ದ ಸ್ವಾಸ್ಥ ಸಂಕಲ್ಪ ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಮಾತನಾಡಿದರು. ಉತ್ತಮರ ಸಹವಾಸ ಉತ್ತಮ ವಿಚಾರಗಳನ್ನು ಮೂಡಿಸುತ್ತದೆ. ವಿದ್ಯಾಥಿರ್ಗಳು ದುಶ್ಚಟಗಳಿಗೆ ದಾಸರಾಗದೆ ಹಿರಿಯರ ಮಾರ್ಗದರ್ಶನದೊಂದಿಗೆ ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕು ಎಂದರು.
ಉದ್ಘಾಟನೆ ನೆರವೇರಿಸಿ ಮಾತನಾಡಿದ ಗದಗ ತಾಲೂಕ ಮದ್ಯವರ್ಜನ ವ್ಯವಸ್ಥಾಪನಾ ಸಮಿತಿಯ ಉಪಾಧ್ಯ ಶ್ರೀನಿವಾಸ ಹುಯಿಲಗೋಳ, ಸಂಸ್ಥೆಯು ಉನ್ನತ ಧ್ಯೇಯ ಧೋರಣೆಗಳೊಂದಿಗೆ ವಿದ್ಯಾಥಿರ್ಗಳ ಉತ್ತಮ ಭವಿಷ್ಯಕ್ಕಾಗಿ ಇಂತಹ ಕಾರ್ಯಕ್ರಮಗಳನ್ನು ವಿದ್ಯಾಥಿರ್ ಬಳಿಗೆ ತಂದಿದ್ದು ಇದು ಸದುಪಯೋಗ ಆಗಬೇಕು ಎಂದರು.
ಮಾರುತಿ ಪೂಜಾರ, ಲಕ್ಷಿ$್ಮ ಪಾವಸ್ಕಾರ, ಸುಜಾತಾ ಪಾಟೀಲ, ಲಕ್ಷಿ$್ಮ ಅರಮನಿ, ಜ್ಯೋತಿ ಗೌಡರ ಹಲವರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net