ಎಸ್​ಐಆರ್​ ಪ್ರಕ್ರಿಯೆಯಲ್ಲಿ ನಾಯಕರೂ ಕಣಕ್ಕಳಿಯಬೇಕು: ಬಸವರಾಜ ಬೊಮ್ಮಾಯಿ

ಗದಗ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಬಿಜೆಪಿ ಕಾರ್ಯಕರಣಿ ಸಭೆಯನ್ನು ಬಸವರಾಜ ಬೊಮ್ಮಾಯಿ ಉದ್ಘಾಟಿಸಿದರು. ಪ್ರಹ್ಲಾದ ಜೋಶಿ, ರಾಜು ಕುರಡಗಿ, ಸಿ. ಸಿ. ಪಾಟೀಲ, ಡಾ.ಚಂದ್ರು ಲಮಾಣಿ, ಮುರುಗೇಶ ನಿರಾಣಿ, ಎಸ್​.ವಿ ಸಂಕನೂರ, ಕಳಕಪ್ಪ ಬಂಡಿ ಸೇರಿದಂತೆ ಪಕ್ಷದ ಪ್ರಮುಖರು ಇದ್ದರು.
ಗದಗ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಬಿಜೆಪಿ ಕಾರ್ಯಕರಣಿ ಸಭೆಯನ್ನು ಬಸವರಾಜ ಬೊಮ್ಮಾಯಿ ಉದ್ಘಾಟಿಸಿದರು. ಪ್ರಹ್ಲಾದ ಜೋಶಿ, ರಾಜು ಕುರಡಗಿ, ಸಿ. ಸಿ. ಪಾಟೀಲ, ಡಾ.ಚಂದ್ರು ಲಮಾಣಿ, ಮುರುಗೇಶ ನಿರಾಣಿ, ಎಸ್​.ವಿ ಸಂಕನೂರ, ಕಳಕಪ್ಪ ಬಂಡಿ ಸೇರಿದಂತೆ ಪಕ್ಷದ ಪ್ರಮುಖರು ಇದ್ದರು.
Published on
ವಿಜಯವಾಣಿ ಸುದ್ದಿಜಾಲ ಗದಗ
ಚುನಾವಣಾ ಕಾರ್ಯತಂತ್ರ ಹಾಗೂ ಮತದಾರರ ಪಟ್ಟಿ ಪರಿಷ್ಕರಣೆ ವಿಚಾರದಲ್ಲಿ ಕೇವಲ ಬಿಎಲ್​ಎಗಳ ಮೇಲೆ ನಂಬಿಕೆ ಇಟ್ಟು ಸುಮ್ಮನಿರಬಾರದು. ವಾರ್ಡ ಮಟ್ಟದ ಮೂಲ ಕಾರ್ಯಕರ್ತರು, ಶಕ್ತಿ ಕೇಂದ್ರದ ಪ್ರಮುಖರು ಹಾಗೂ ಕಾರ್ಯಕಾರಿಣಿ ಜವಾಬ್ದಾರಿಯುತ ನಾಯಕರು ನೇರವಾಗಿ ಕಣಕ್ಕಿಳಿದು ಕೆಲಸ ಮಾಡಬೇಕು ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.
ಭಾರತೀಯ ಜನತಾ ಪಾಟಿರ್ಯ ಜಿಲ್ಲಾ ಕಾರ್ಯಾಲಯದಲ್ಲಿ ಭಾರತೀಯ ಜನತಾ ಪಾಟಿರ್ ಜಿಲ್ಲೆಯ ವತಿಯಿಂದ ಏರ್ಪಡಿಸಿದ ವಿಶೇಷ ಕಾರ್ಯಕಾರಿಣಿ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ವಿರೋಧ ಪಕ್ಷವಾದ ಕಾಂಗ್ರೆಸ್​ನವರು ಕೇವಲ ಬಿಎಲ್​ಒಗಳ ಮೇಲೆ ಅವಲಂಬಿತರಾಗದೆ, ಹೆಚ್ಚುವರಿಯಾಗಿ ಜನರನ್ನು ನಿಯೋಜಿಸಿ ಕೆಲಸ ಮಾಡುತ್ತಿದ್ದಾರೆ. ಆದರೆ ನಮ್ಮಲ್ಲಿ ಕೇವಲ ಸಭೆಗಳನ್ನು ಮಾಡುವುದಕ್ಕೆ ಸೀಮಿತ ಆಗಬಾರದು. ಸಭೆಗೆ ಬರುವ ನಾಯಕರು ಎಸ್​ಐಆರ್​ ಕಣದಲ್ಲಿ ಕಾಣಿಸಿಕೊಳ್ಳುತ್ತಿಲ್ಲ ಎಂದು ಹೇಳಿದರು.
ಕಾರ್ಯಕಾರಿಣಿ ಸದಸ್ಯರು ಎಂದರೆ ಕೇವಲ ಜವಾಬ್ದಾರಿ ಹೊಂದಿರುವ ನಾಯಕರಷ್ಟೇ ಅಲ್ಲ. ಅವರು ಸ್ವತಃ ಕಣಕ್ಕೆ ಇಳಿದು ಕೆಲಸ ಮಾಡಬೇಕು. ಫಾರ್ಮಗಳನ್ನು ತುಂಬುವುದು, ತಂದೆ- ತಾಯಿ ಅಥವಾ ಕುಟುಂಬದ ಸದಸ್ಯರ ಹೆಸರುಗಳನ್ನು ಸೇರ್ಪಡೆ ಮಾಡುವುದು ಹಾಗೂ ತಿದ್ದುಪಡಿಗಳ ಕಡೆಗೆ ಹೆಚ್ಚಿನ ಗಮನ ಹರಿಸಬೇಕು. ನಮ್ಮ ಕಡೆಯ ಮತದಾರರು ಬೇರೆ ಕಡೆ ವಲಸೆ ಹೋಗಿದ್ದರೂ ಅಥವಾ ಬೆಂಗಳೂರಿನಲ್ಲೇ ಇದ್ದರೂ ಅವರ ಮತಗಳು ಪಟ್ಟಿಯಿಂದ ಕೈತಪ್ಪದಂತೆ ನೋಡಿಕೊಳ್ಳಬೇಕು ಎಂದು ತಿಳಿಸಿದರು.
ತಂತ್ರಜ್ಞಾನದ ಬಳಕೆ:
ಮತದಾರರ ಮಾಹಿತಿ ಹಾಗೂ ದಾಖಲೆಗಳನ್ನು ಸ್ಥಳದಲ್ಲೇ ರ್ಪೂಣಗೊಳಿಸಿ ಸ್ಕಾ$ನ್​ ಮಾಡಿಸುವ ಮೂಲಕ ಪ್ರಕ್ರಿಯೆಯನ್ನು ರ್ಪೂಣಗೊಳಿಸಬೇಕು. ಕೇವಲ ಬಿಎಲ್​ಎ ಗಳ ಮೇಲಿನ ಅವಲಂಬನೆಯನ್ನು ಬಿಟ್ಟು, ನೀವೆಲ್ಲರೂ ವಾರ್ಡ ಮಟ್ಟದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಾಗ ಮಾತ್ರ ನಿರೀಕ್ಷಿತ ಯಶಸ್ಸು ಸಾಧ್ಯ ಎಂದು ಹೇಳಿದರು.
ಕೇಂದ್ರ ಸಚಿವ ಪ್ರಲ್ಹಾದ್​ ಜೋಶಿ, ಭಾರತೀಯ ಜನತಾ ಪಾಟಿರ್ಯ ಜಿಲ್ಲಾಧ್ಯಕ್ಷ ರಾಜು ಕುರಡಗಿ, ಶಾಸಕ ಸಿ. ಸಿ. ಪಾಟೀಲ, ಡಾ.ಚಂದ್ರು ಲಮಾಣಿ, ಮಾಜಿ ಸಚಿವ ಮುರುಗೇಶ ನಿರಾಣಿ, ವಿಧಾನ ಪರಿಷತ್​ ಸದಸ್ಯ ಎಸ್​.ವಿ ಸಂಕನೂರ, ಮಾಜಿ ಶಾಸಕ ಕಳಕಪ್ಪ ಬಂಡಿ ಸೇರಿದಂತೆ ಪಕ್ಷದ ಪ್ರಮುಖರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net