ಸಹಕಾರ ಸಪ್ತಾಹ ಕಾರ್ಯಕ್ರಮ ವಿವಿಧ ತಳಿಯ ರಾಸುಗಳ ಪ್ರದರ್ಶನ

 ಗದಗ ಜಿಲ್ಲೆಯ ನರಗುಂದ ತಾಲೂಕಿನ ಖಾನಾಪೂರದಲ್ಲಿ ಏರ್ಪಡಿಸಿದ್ದ ಸಹಕಾರ ಸಪ್ತಾಹ ಕಾರ್ಯಕ್ರಮ ಹಾಗೂ ವಿವಿಧ ತಳಿಯ ರಾಸುಗಳ ಪ್ರದರ್ಶನವನ್ನು ಎಚ್​.ಜಿ. ಹಿರೇಗೌಡ್ರ ಉದ್ಘಾಟಿಸಿದರು. ಹನಮಂತಗೌಡ ತಿಮ್ಮನಗೌಡ ಹೊಸಮನಿ, ಶಂಕರಗೌಡ ಕಗದಾಳ, ಅನಿತಾ ವೀರನಗೌಡ್ರ, ಶಿವಾನಂದ ಸಲಾದಿ, ಸೀಮಾ ಆಲೂರ, ಗೀತಾ ಹುಳ್ಯಾಳ, ರತ್ನಾ ತಳವಾರ, ಮಂಜುಳಾ ನಿಂಬಣ್ಣವರ, ಚಂದ್ರಶೇಖರ  ಕರಿಯಪ್ಪನವರ, ಡಿ. ಐ. ನದಾ ಹಲವರು ಇದ್ದರು.
ಗದಗ ಜಿಲ್ಲೆಯ ನರಗುಂದ ತಾಲೂಕಿನ ಖಾನಾಪೂರದಲ್ಲಿ ಏರ್ಪಡಿಸಿದ್ದ ಸಹಕಾರ ಸಪ್ತಾಹ ಕಾರ್ಯಕ್ರಮ ಹಾಗೂ ವಿವಿಧ ತಳಿಯ ರಾಸುಗಳ ಪ್ರದರ್ಶನವನ್ನು ಎಚ್​.ಜಿ. ಹಿರೇಗೌಡ್ರ ಉದ್ಘಾಟಿಸಿದರು. ಹನಮಂತಗೌಡ ತಿಮ್ಮನಗೌಡ ಹೊಸಮನಿ, ಶಂಕರಗೌಡ ಕಗದಾಳ, ಅನಿತಾ ವೀರನಗೌಡ್ರ, ಶಿವಾನಂದ ಸಲಾದಿ, ಸೀಮಾ ಆಲೂರ, ಗೀತಾ ಹುಳ್ಯಾಳ, ರತ್ನಾ ತಳವಾರ, ಮಂಜುಳಾ ನಿಂಬಣ್ಣವರ, ಚಂದ್ರಶೇಖರ ಕರಿಯಪ್ಪನವರ, ಡಿ. ಐ. ನದಾ ಹಲವರು ಇದ್ದರು.
Published on
ವಿಜಯವಾಣಿ ಸುದ್ದಿಜಾಲ
ಸಹಕಾರ ಮಹಾ ಮಂಡಳ, ಉತ್ಪಾದಕರ ಸಹಕಾರ ಸಂ ಸಹಯೋಗದಲ್ಲಿ ಜಿಲ್ಲೆಯ ನರಗುಂದ ತಾಲೂಕಿನ ಖಾನಾಪೂರದಲ್ಲಿ ಪಶುಗಳಿಗೆ ಹಾಗೂ ಸದಸ್ಯರಿಗೆ ಉಚಿತ ಆರೋಗ್ಯ ಶಿಬಿರ, ವಿವಿಧ ತಳಿಯ ರಾಸುಗಳ ಪ್ರದರ್ಶನ ಕಾರ್ಯಕ್ರಮ ಜರುಗಿತು.
ರಾಜ್ಯ ಸಹಕಾರ ಹಾಲು ಉತ್ಪಾದಕರ ಮಹಾಮಂಡಳ ನಿರ್ದೇಶಕ ಎಚ್​. ಜಿ. ಹಿರೇಗೌಡ್ರ ಕಅರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಧಾರವಾಡ ಹಾಲು ಒಕ್ಕೂಟದಿಂದ 120 ತರಹದ ಹಾಲು ಉತ್ಪನ್ನಗಳನ್ನು ತಯಾರಿಸಲಾಗುತ್ತಿದೆ. ವಿಶ್ವದಲ್ಲಿಯೇ ಭಾರತವು ಹೈನುಗಾರಿಕೆ ಗಮನಾರ್ಹ ಸಾಧನೆ ಮಾಡಿದೆ. ಹಾಲು ಉತ್ಪಾದನೆಯಲ್ಲಿ ವಿಶ್ವದಲ್ಲಿಯೇ ಪ್ರಥಮ ಸ್ಥಾನದಲ್ಲಿದೆ. ಹಾಲು ಉತ್ಪಾದನೆಯಲ್ಲಿ ರಾಜ್ಯದ ಹೈನುಗಾರಿಕೆ ಅಭಿವೃದ್ಧಿಯತ್ತ ಸಾಗುತ್ತಿದೆ. ಹೈನುಗಾರಿಕಾ ವಲಯದಿಂದ ಗ್ರಾಮೀಣ ಪ್ರದೇಶಗಳ ಅಭಿವೃದ್ಧಿ ಮತ್ತು ರೈತರು ಆಥಿರ್ಕ ಸ್ವಾವಲಂಭನೆ ಪಡೆಯುತ್ತಿದ್ದಾರೆ. ದೇಶದ ಆಥಿರ್ಕತೆಗೆ ಪೂರಕವಾಗಿ ಒತ್ತು ನೀಡಲು ಗ್ರಾಮೀಣ ಪ್ರದೇಶದ ಹೈನುಗಾರಿಕೆ ಮತ್ತು ಗ್ರಾಮೀಣ ಗುಡಿ ಕೈಗಾರಿಕೆಗಳಿಗೆ ಹೆಚ್ಚು ಒತ್ತು ನೀಡಬೇಕಾಗಿದೆ ಎಂದರು.
ಖಾನಾಪುರ ಹಾಲು ಉತ್ಪಾದಕರ ಸಹಕಾರ ಸಂದ ಅಧ್ಯಕ್ಷ ಎಂ. ಎಚ್​. ತಿಮ್ಮನಗೌಡ್ರ ಮಾತನಾಡಿ ಖಾನಾಪೂರ ಗ್ರಾಮದ ಹಾಲಿನ ಸಂಕ್ಕೆ 41 ವರ್ಷ ಕಳೆದಿವೆ. ಗ್ರಾಮೀಣ ಪ್ರದೇಶದಲ್ಲಿನ ಪಶುಪಾಲನೆಯಿಂದ ಆರಂಭವಾಗುವ ಹೈನೋದ್ಯಮದ ಕಾರ್ಯವ್ಯಾಪ್ತಿಯು ಹಾಲು ಮತ್ತು ಹಾಲಿನ ಉತ್ಪನ್ನಗಳನ್ನು ಅಗತ್ಯವಿರುವ ಗ್ರಾಹಕರ ಮನೆ ಬಾಗಿಲಿಗೆ ತಲುಪಿಸುವವರೆಗೆ ವಿಸ್ತಾರಗೊಂಡಿದೆ. ವಿಶ್ವದಲ್ಲಿ ಇಂದು ಹೆಚ್ಚುತ್ತಿರುವ ಜನಸಂಖ್ಯೆ ಅಗಣುಗುಣವಾಗಿ ಅಗತ್ಯವಿರುವ ಆಹಾರ ಸರಬರಾಜಿನ ಸಮಸ್ಯೆಯನ್ನು ಹಾಲು ಮತ್ತು ಹಾಲಿನ ಉತ್ಪನ್ನಗಳಿಂದ ಸಮರ್ಥವಾಗಿ ಎದುರಿಸಬಹುದು. ಜಗತ್ತಿನ ಎಲ್ಲ ರಾಷ್ಟ್ರಗಳಲ್ಲಿನ ಅಪೌಷ್ಠಿಕತೆ ನಿವಾರಣೆ ಮಾಡಿ ಆರೋಗ್ಯವಂತ ಸಮಾಜ ನಿರ್ಮಾಣದ ಕನಸು ಕೆಎಂಎ್​ ನಿಂದ ಸಾಧ್ಯವಾಗಿದೆ ಎಂದು ಹೇಳಿದರು.
ಧಾರವಾಡ ಹಾಲು ಒಕ್ಕೂಟ ಗದಗ ಉಪವಿಭಾಗದ ಮುಖ್ಯಸ್ಥ ಡಾ. ಪ್ರಸನ್ನ ಪಟ್ಟೇದ ಮಾತನಾಡಿ, ಗ್ರಾಮೀಣ ಪ್ರದೇಶದಲ್ಲಿ ಇಂದು ಆಧುನಿಕ ತಂತ್ರಜ್ಞಾನವನ್ನು ಎಲ್ಲಾ ಹಂತಗಳಲ್ಲಿ ಅಳವಡಿಸಿ ಕೊಳ್ಳುತ್ತಿದ್ದು, ತಳಿ ಅಭಿವೃದ್ಧಿ, ಹಸಿರು ಮೇವು ಮತ್ತು ಸಮತೋಲಿನ ಪಶು ಆಹಾರ ಉತ್ಪಾದನೆ, ಪಶು ವೈದ್ಯಕಿಯ ಸೇವೆ, ಹಾಲು ಶೇಖರಣೆ ಹೀಗೆ ಎಲ್ಲಾ ಹಂತಗಳಲ್ಲಿ ಆಧುನಿಕ ತಂತ್ರಜ್ಞಾನದ ಉಪಯೋಗವನ್ನು ವಿಸ್ತರಿಸಿಕೊಳ್ಳಲಾಗಿದೆ. ಹಾಲನ್ನು ಶೇಖರಿಸಿದ ನಂತರ ಅದರ ಸಂಸ್ಕರಣೆ, ಹಾಲಿನ ಉತ್ಪನ್ನಗಳೊಂದಿಗೆ ಮೌಲ್ಯವಧಿರ್ತ ಉತ್ಪನ್ನಗಳ ತಯಾರಿಕೆಯಲ್ಲಿಯೂ ತಂತ್ರಜ್ಞಾನವನ್ನು ಡೇರಿ ೇತ್ರವು ಅಳವಡಿಸಿಕೊಂಡಿದೆ. ಇತ್ತೀಚಿಗೆ ಪ್ರವರ್ಧಮಾನಕ್ಕೆ ಬರುತ್ತಿರುವ ಕೃತಕ ಬುದ್ದಿಮತ್ತೆ ತಂತ್ರಜ್ಞಾನದತ್ತಲೂ ಗಮನ ಹರಿಸಿರುವ ಹೈನೋದ್ಯಮ ೇತ್ರವು ತನ್ನ ಕಾರ್ಯಮತೆ ಹೆಚ್ಚಿಸಿಕೊಳ್ಳುತ್ತಿದೆ ಎಂದರು.
ವೈ. ಎ್​. ಪಾಟೀಲ ಮಾತನಾಡಿ, ಸಹಕಾರ ಸಂಗಳ ಮೂಲಕ ಉದ್ಯೋಗ, ಆದಾಯ ಮತ್ತು ಸ್ವಾವಲಂಬನೆ ಹೆಚ್ಚಿಸುವುದು ಸಹಕಾರ ಸಂಗಳ ಪಾರದರ್ಶಕತೆ, ಡಿಜಿಟಲಿಕರಣ ಮತ್ತು ಉತ್ತಮ ಆಡಳಿತ ತರಿಸುವುದು, ಕೃಷಿ, ಹೈನುಗಾರಿಕೆ, ಮೀನುಗಾರಿಕೆ, ಸಂಗ್ರಹಣೆ, ಸಂಸ್ಕರಣೆ ಮತ್ತು ಮಾರುಕಟ್ಟೆ ವ್ಯವಸ್ಥೆಯನ್ನು ಸಹಕಾರದ ಮೂಲಕ ಅಭಿವೃದ್ಧಿ ಪಡಿಸುವುದು ಅಗತ್ಯವಿದೆ ಎಂದರು.
ಹನಮಂತಗೌಡ ತಿಮ್ಮನಗೌಡ ಹೊಸಮನಿ, ಶಂಕರಗೌಡ ಕಗದಾಳ, ಅನಿತಾ ವೀರನಗೌಡ್ರ, ಶಿವಾನಂದ ಸಲಾದಿ, ಸೀಮಾ ಆಲೂರ, ಗೀತಾ ಹುಳ್ಯಾಳ, ರತ್ನಾ ತಳವಾರ, ಮಂಜುಳಾ ನಿಂಬಣ್ಣವರ, ಚಂದ್ರಶೇಖರ ಕರಿಯಪ್ಪನವರ, ಡಿ. ಐ. ನದಾ ಹಲವರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net