ಸಮಾಜಮುಖಿ ವ್ಯಕ್ತಿಗಳು ಸದಾ ಸ್ಮರಣೀಯರು: ಎಸ್​.ವಿ.ಸಂಕನೂರ

 ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನಿಂದ ಜರುಗಿದ ಕಾರ್ಯಕ್ರಮದಲ್ಲಿ ಸದಾಶಿವಾನಂದ ಸಂಸ್ಮರಣ ಗ್ರಂಥವನ್ನು ಎಸ್​.ವಿ.ಸಂಕನೂರ ಲೋಕಾರ್ಪಣೆಗೊಳಿಸಿದರು. ಶಾಂತಲಿಂಗ ಮಹಾಸ್ವಾಮಿಗಳು, ವಿವೇಕಾನಂದಗೌಡ ಪಾಟೀಲ, ಎಸ್​.ಎಸ್​.ಪಾಟೀಲ, ಚಂದ್ರಶೇಖರ ವಸ್ತ್ರದ, ಶಕುಂತಲಾ ಗಿಡ್ನಂದಿ ಮೊದಲಾದವರು ಉಪಸ್ಥಿತರಿದ್ದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನಿಂದ ಜರುಗಿದ ಕಾರ್ಯಕ್ರಮದಲ್ಲಿ ಸದಾಶಿವಾನಂದ ಸಂಸ್ಮರಣ ಗ್ರಂಥವನ್ನು ಎಸ್​.ವಿ.ಸಂಕನೂರ ಲೋಕಾರ್ಪಣೆಗೊಳಿಸಿದರು. ಶಾಂತಲಿಂಗ ಮಹಾಸ್ವಾಮಿಗಳು, ವಿವೇಕಾನಂದಗೌಡ ಪಾಟೀಲ, ಎಸ್​.ಎಸ್​.ಪಾಟೀಲ, ಚಂದ್ರಶೇಖರ ವಸ್ತ್ರದ, ಶಕುಂತಲಾ ಗಿಡ್ನಂದಿ ಮೊದಲಾದವರು ಉಪಸ್ಥಿತರಿದ್ದರು.
Published on
ವಿಜಯವಾಣಿ ಸುದ್ದಿಜಾಲ ಗದಗ
ಬದುಕಿರುವ ಅವಧಿಗಿಂತ ಬದುಕಿದ್ದ ಅವಧಿಯಲ್ಲಿ ಸಮಾಜಮುಖಿ ಆಗಿರುವ ಮಾಡಿರುವ ಕಾರ್ಯಗಳು ವ್ಯಕ್ತಿಯನ್ನು ಸದಾ ಸ್ಮರಣೀಯವಾಗಿಸುತ್ತವೆ. ಶಿಕರಾದವರು ಬೋಧನೆಯ ಜೊತೆಗೆ ಸಾಹಿತ್ಯ, ಸಂಸತಿಯ ಬಲವರ್ಧನೆಗೆ ದೊಡ್ಡ ಕೊಡುಗೆಯನ್ನು ನೀಡುತ್ತಾ ಬಂದಿದ್ದಾರೆ. ಕವಿಯಾಗಿ, ಸಂಟಕನಾಗಿ, ಉತ್ತಮ ಬೋಧಕನಾಗಿ ಗದಗ ಪರಿಸರದ ಸಾಂಸತಿಕ ಶ್ರೀಮಂತಿಕೆಗೆ ತಮ್ಮದೇ ಆದ ಕಾಣಿಕೆಯನ್ನು ಶಿವಾನಂದ ಗಿಡ್ನಂದಿ ಅವರು ನೀಡಿದ್ದಾರೆ ಎಂದು ವಿಧಾನಪರಿಷತ್ತಿನ ಶಾಸಕ ಎಸ್​.ವಿ.ಸಂಕನೂರ ತಿಳಿಸಿದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಸಹಯೋಗದಲ್ಲಿ ಜಿಲ್ಲಾ ವಾಣಿಜ್ಯೋದ್ಯಮ ಸಂಸ್ಥೆ ಸಭಾಂಗಣದಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ಶಿವಾನಂದ ಗಿಡ್ನಂದಿ ಅವರ ಸಂಸ್ಮರಣ ಗ್ರಂಥ "ಸದಾಶಿವಾನಂದ ಕೃತಿಯನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದ ಅವರು, ಬಡ್ತಿ ಶಿಕರ ಸಂದ ಅಧ್ಯರಾಗಿ ಸೇವೆ ಸಲ್ಲಿಸಿದ್ದಾರೆ. ಅವರು ತಮ್ಮ ಬರವಣಿಗೆ ಮೂಲಕ ಹೆಸರಾಗಿದ್ದಾರೆ ಎಂದು ಹೇಳಿದರು.
ಮಾಜಿ ಸಚಿವ ಎಸ್​.ಎಸ್​.ಪಾಟೀಲ ಮಾತನಾಡಿ, ಶಿಕರು ಕೇವಲ ವೈಯಕ್ತಿಕ ಬದುಕಿಗಷ್ಟೇ ಸೀಮಿತರಾಗದೇ ಸಂಸತಿಯ ಪೋಷಣೆಯಲ್ಲಿ, ಸಾಮಾಜಿಕ ಬೆಳವಣಿಗೆಯಲ್ಲಿ ಪಾತ್ರ ವಹಿಸಬೇಕು. ದೇಶದ ಉದ್ಧಾರ ಶಿಕರಿಂದ ಮಾತ್ರ ಸಾಧ್ಯ. ಶಿವಾನಂದ ಅವರು ಉತ್ತಮ ಶಿಕರಾಗಿ, ಸಾಹಿತಿಗಳಾಗಿ, ಸಂಟಕರಾಗಿ ಸಮಾಜಕ್ಕೆ ಮಾದರಿ ಆಗಿದ್ದಾರೆ ಎಂದು ತಿಳಿಸಿದರು.
ಪ್ರೊ. ಚಂದ್ರಶೇಖರ ವಸ್ತ್ರದ ಮಾತನಾಡಿ, ಉತ್ತಮ ವಾಗ್ಮಿಗಳು ನಿರೂಪಕರಾಗಿದ್ದ ಗಿಡ್ನಂದಿ ಅವರು ಸಾಹಿತ್ಯ ವಲಯದಲ್ಲಿ ತಮ್ಮ ಕವಿತೆಗಳ ಮೂಲಕ ಗುರುತಿಸಿಕೊಂಡಿದ್ದರು. ಅವರ ಹಾದಿಯಲ್ಲಿ ಕುಟುಂಬ ಸಾಗುತ್ತಿರುವದು ಸಂತಸ ತಂದಿದೆ ಎಂದು ತಿಳಿಸಿದರು.
ಡಾ. ಎಚ್​. ಬಿ. ಪೂಜಾರ, ಕಸಾಪ ಅಧ್ಯ ವಿವೇಕಾನಂದಗೌಡ ಪಾಟೀಲ, ಭೈರನಹಟ್ಟಿ ದೊರೆಸ್ವಾಮಿಮಠದ ಶಾಂತಲಿಂಗ ಮಹಾಸ್ವಾಮಿಗಳು, ಎಸ್​. ಜಿ. ಕಡೇಮನಿ ಮಹಾದೇವಪ್ಪ ಕಡೇಮನಿ, ಶಕುಂತಲಾ ಗಿಡ್ನಂದಿ ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net