ಏಷ್ಯನ್​ ಆಟ್ಯಾಪಟ್ಯಾದಲ್ಲಿ ಗದಗದ ಯುವಕರ ಚಿನ್ನದ ಸಾಧನೆ

ಅಂತಾರಾಷ್ಟ್ರೀಯ ಚಾಂಪಿಯನ್​ಶಿಪ್​ನಲ್ಲಿ ಭಾರತಕ್ಕೆ ಚಿನ್ನದ ಪದಕ ಪಡೆದ ಸ್ಪಧಿರ್ಗಳನ್ನು ಜಿಲ್ಲಾಧಿಕಾರಿ ಸಿ. ಎನ್​. ಶ್ರೀಧರ ಶುಕ್ರವಾರ ಸನ್ಮಾನಿಸಿದರು. ಸಿ. ಎನ್​. ಶ್ರಿಧರ, ಶರಣು ಗೋಗೇರಿ, ವಸಂತ ಮಡ್ಲೂರು, ಬಸವರಾಜ ಬಳ್ಳಾರಿ ಇತರರು ಇದ್ದರು.
ಅಂತಾರಾಷ್ಟ್ರೀಯ ಚಾಂಪಿಯನ್​ಶಿಪ್​ನಲ್ಲಿ ಭಾರತಕ್ಕೆ ಚಿನ್ನದ ಪದಕ ಪಡೆದ ಸ್ಪಧಿರ್ಗಳನ್ನು ಜಿಲ್ಲಾಧಿಕಾರಿ ಸಿ. ಎನ್​. ಶ್ರೀಧರ ಶುಕ್ರವಾರ ಸನ್ಮಾನಿಸಿದರು. ಸಿ. ಎನ್​. ಶ್ರಿಧರ, ಶರಣು ಗೋಗೇರಿ, ವಸಂತ ಮಡ್ಲೂರು, ಬಸವರಾಜ ಬಳ್ಳಾರಿ ಇತರರು ಇದ್ದರು.
Published on
ಗದಗ: ಭೂತಾನ್​ನಲ್ಲಿ ನಡೆದ ಅಂತಾರಾಷ್ಟ್ರೀಯ ಚಾಂಪಿಯನ್​ಶಿಪ್​ ಎರಡು ವಿಭಾಗಗಳಲ್ಲಿ ಭಾರತಕ್ಕೆ ಚಿನ್ನದ ಪದಕ ಪಡೆದ ಸ್ಪಧಿರ್ಗಳನ್ನು ಜಿಲ್ಲಾಧಿಕಾರಿ ಸಿ. ಎನ್​. ಶ್ರೀಧರ ಶುಕ್ರವಾರ ಸನ್ಮಾನಿಸಿದರು.
ಭೂತಾನ್​ನಲ್ಲಿ ನಡೆದ ಏಷ್ಯನ್​ ಆಟ್ಯಾಪಟ್ಯಾ ಚಾಂಪಿಯನ್​ಶಿಪ್​ನಲ್ಲಿ ಚಿನ್ನದ ಪದಕ ಗೆದ್ದು ಜಿಲ್ಲೆಗೆ ಕೀತಿರ್ ತಂದಿದ್ದಾರೆ. ಸಾಧಕರಾದ ರಾಹುಲ್​ ಶೇಖರ್​ ಕಾರಭಾರಿ ಹಾಗೂ ಉಳವೇಶ ಶಿವಾಜಿ ಲಮಾಣಿ ಈ ಸಾಧನೆ ಮಾಡಿದ್ದು, ಜಿಲ್ಲೆಗೆ ಹೆಮ್ಮೆ ತಂದಿದ್ದಾರೆ ಎಂದು ಜಿಲ್ಲಾಧಿಕಾರಿ ಸಿ.ಎನ್​. ಶ್ರೀಧರ ಹೇಳಿದರು.
ಈ ಸಂದರ್ಭದಲ್ಲಿ ಕ್ರೀಡಾ ಇಲಾಖೆ ಅಧಿಕಾರಿ ಶರಣು ಗೋಗೇರಿ, ವಾರ್ತಾ ಅಧಿಕಾರಿ ವಸಂತ ಮಡ್ಲೂರು, ಹಿಂದುಳಿವ ವರ್ಗಗಳ ಇಲಾಖೆ ಅಧಿಕಾರಿ ಬಸವರಾಜ ಬಳ್ಳಾರಿ ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net