ವಚನಗಳ ವಿಚಾರಗಳಿಂದ ಉತ್ತಮ ವ್ಯಕ್ತಿತ್ವ ನಿರ್ಮಾಣ: ತೋಂಟದ ಶ್ರೀಗಳು

ಗದಗ ತೋಂಟದಾರ್ಯಮಠದಲ್ಲಿ ಜರುಗಿದ ಕಾರ್ಯಕ್ರಮದಲ್ಲಿ 500 ವಚನಗಳನ್ನು ಹೇಳಿದ ತನುಶ್ರೀ ಬದಿ ಹಾಗೂ ಕೃಷ್ಣಪ್ರಿಯ ಬದಿ ಅವರಿಗೆ ಡಾ. ತೋಂಟದ ಸಿದ್ಧರಾಮ ಶ್ರೀಗಳು ಬಹುಮಾನ ವಿತರಿಸಿದರು. ವಿವೇಕಾನಂದಗೌಡ ಪಾಟೀಲ, ಸಂತೋಷ ಅಂಗಡಿ, ಗೌರಕ್ಕ ಬಡಿಗಣ್ಣವರ, ಎಸ್​. ವಿ. ಪವಾಡಿಗೌಡ್ರ, ಎಸ್​. ಯು. ಸಜ್ಜನಶೆಟ್ಟರ, ರಮೇಶ ಕಲ್ಲನಗೌಡರ, ಕೆ. ಎ. ಬಳಿಗೇರ, ಸುಧಾ ಹುಚ್ಚಣ್ಣವರ, ನೀಲಮ್ಮ ಅಂಗಡಿ, ಗಿರಿಜಾ ಹಸಬಿ ಇತರರು ಇದ್ದರು.
ಗದಗ ತೋಂಟದಾರ್ಯಮಠದಲ್ಲಿ ಜರುಗಿದ ಕಾರ್ಯಕ್ರಮದಲ್ಲಿ 500 ವಚನಗಳನ್ನು ಹೇಳಿದ ತನುಶ್ರೀ ಬದಿ ಹಾಗೂ ಕೃಷ್ಣಪ್ರಿಯ ಬದಿ ಅವರಿಗೆ ಡಾ. ತೋಂಟದ ಸಿದ್ಧರಾಮ ಶ್ರೀಗಳು ಬಹುಮಾನ ವಿತರಿಸಿದರು. ವಿವೇಕಾನಂದಗೌಡ ಪಾಟೀಲ, ಸಂತೋಷ ಅಂಗಡಿ, ಗೌರಕ್ಕ ಬಡಿಗಣ್ಣವರ, ಎಸ್​. ವಿ. ಪವಾಡಿಗೌಡ್ರ, ಎಸ್​. ಯು. ಸಜ್ಜನಶೆಟ್ಟರ, ರಮೇಶ ಕಲ್ಲನಗೌಡರ, ಕೆ. ಎ. ಬಳಿಗೇರ, ಸುಧಾ ಹುಚ್ಚಣ್ಣವರ, ನೀಲಮ್ಮ ಅಂಗಡಿ, ಗಿರಿಜಾ ಹಸಬಿ ಇತರರು ಇದ್ದರು.
Published on
ವಿಜಯವಾಣಿ ಸುದ್ದಿಜಾಲ ಗದಗ
ಬಸವಾದಿಶರಣರ ವಿಚಾರಗಳನ್ನು ಬಾಲ್ಯದಲ್ಲಿಯೇ ಅರಿತು ಆಚರಿಸಿದರೆ ಉತ್ತಮ ವ್ಯಕ್ತಿತ್ವ ರೂಪಿತವಾಗುತ್ತದೆ. ವಚನಗಳಲ್ಲಿರುವ ವಿಚಾರಗಳು ಸಾರ್ವಕಾಲಿಕ ಸತ್ಯಗಳಾಗಿದ್ದು ವ್ಯಕ್ತಿ ಹಿತದ ಜೊತೆಗೆ ಸಮಾಜೋನ್ನತಿಯನ್ನು ಹೊಂದಿವೆ ಎಂದು ಡಾ. ತೋಂಟದ ಸಿದ್ಧಲಿಂಗ ಶ್ರೀಗಳು ಹೇಳಿದರು.
ನಗರದ ವಚನ ಪಾಠಶಾಲೆಯ ವತಿಯಿಂದ ತೋಂಟದಾರ್ಯ ಮಠದಲ್ಲಿ ಜರುಗಿದ ವಚನ ಪ್ರಶಸ್ತಿ ವಿತರಣಾ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ವಚನ ಪಾಠಶಾಲೆಯ ವತಿಯಿಂದ ವರ್ಷವಿಡಿ ವಚನ ಕಂಠಪಾಠ, ವಚನ ನ್ಯತ್ಯ, ಶರಣ ಸಂಸತಿ ಶಿಬಿರ, ರಸಪ್ರಶ್ನೆ, ವಿಚಾರ ಸಂಕಿರಣ, ನಾಟಕೋತ್ಸವಗಳನ್ನು ಆಯೋಜಿಸಲಾಗುತ್ತದೆ. ವಚನಗಳು ಬಾಳಿನ ಬೆಳಕಾಗುತ್ತವೆ ಎಂದರು.
ಮಾಜಿ ಸಚಿವ ಎಸ್​.ಎಸ್​.ಪಾಟೀಲ ಅವರ ಮಾತನಾಡಿ ಇಂದಿನ ಸಂದರ್ಭದಲ್ಲಿ ಶರಣರ ಚಿಂತನೆಗಳು ಅಗತ್ಯವಿದೆ. ಶಾಲೆಗಳಲ್ಲಿ ಸೀಮಿತ ವಿಚಾರಗಳಿದ್ದು, ಅವುಗಳನ್ನು ವ್ಯಾಪಕಗೊಳಿಸಲು ವಚನ ಪಾಠಶಾಲೆ ಕಾರ್ಯ ನಿರ್ವಹಿಸಬೇಕು. ಮಠದ ವಚನ ಪಾಠಶಾಲೆ ನಾಡಿನ ಎಲ್ಲ ಮಠಗಳಿಗೆ ಪ್ರೇರಣೆಯನ್ನು ನೀಡಲಿ ಎಂದು ತಿಳಿಸಿದರು.
ವಚನ ಕಂಠಪಾಠ ಸ್ಪರ್ಧೆಯಲ್ಲಿ 1 ರಿಂದ 4ನೇ ತರಗತಿ ವಿಭಾಗದಲ್ಲಿ ನರಗುಂದದ ಪ್ರಣಮ್ಯ ಗುಜಮಾಗಡಿ ಪ್ರಥಮ ಸ್ಥಾನ, ಅಪೂರ್ವ ವಡ್ಡರ ದ್ವೀತಿಯ, ನಿಶ್ಚಿತಾ ಪಾಟೀಲ ತೃತೀಯ ಹಾಗೂ 5 ರಿಂದ 8ನೇ ತರಗತಿ ವಿಭಾಗದಲ್ಲಿ ತನುಶ್ರೀ ಬದಿ ಪ್ರಥಮ ಸ್ಥಾನ, ಕೃಷ್ಣಪ್ರೀಯ ಬದಿ ದ್ವೀತಿಯ ಸ್ಥಾನ, ಸಂಜನಾ ಗಾಜಿ ತೃತೀಯ ಸ್ಥಾನ ಪಡೆದರು. ಪ್ರಬಂಧ ಸ್ಪರ್ಧೆ ಪ್ರೌಢಶಾಲಾ ವಿಭಾಗದಲ್ಲಿ ಶ್ರಾವಣಿ ಗುಡಗೂರ ಪ್ರಥಮ, ಸುಮಾ ನಾಯ್ಕಲ್​ ದ್ವೀತಿಯ, ಪೂಜಾ ಆಲೂರ ತೃತೀಯ ಸ್ಥಾನ ಸೇರಿದಂತೆ ಹಲವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ವಿವೇಕಾನಂದಗೌಡ ಪಾಟೀಲ, ಸಂತೋಷ ಅಂಗಡಿ, ಗೌರಕ್ಕ ಬಡಿಗಣ್ಣವರ, ಎಸ್​. ವಿ. ಪವಾಡಿಗೌಡ್ರ, ಎಸ್​. ಯು. ಸಜ್ಜನಶೆಟ್ಟರ, ರಮೇಶ ಕಲ್ಲನಗೌಡರ, ಕೆ. ಎ. ಬಳಿಗೇರ, ಸುಧಾ ಹುಚ್ಚಣ್ಣವರ, ನೀಲಮ್ಮ ಅಂಗಡಿ, ಗಿರಿಜಾ ಹಸಬಿ, ರಾಜೇಶ್ವರ ಬಡ್ನಿ, ಗಿರಿಜಕ್ಕ ಧರ್ಮರೆಡ್ಡಿ, ನಿರ್ಮಲಾ ಪಾಟೀಲ, ಭಂಡಾರಿ, ಜ್ಯೋತಿ ಹೇರಲಗಿ, ರಶ್ಮಿ ಅಂಗಡಿ, ಎಸ್​. ಎ. ಮುಗದ, ಅನ್ನದಾನಿ ಹಿರೇಮಠ, ಅರುಣಾ ಹಳಕಟ್ಟಿ, ಬಿ. ಎಲ್​. ಚವ್ಹಾಣ, ಸಿ. ವಿ. ಬಡಿಗೇರ, ಬಸವರಾಜ ನೆಲಜೇರಿ, ಶಿವನಗೌಡ ಗೌಡರ, ಅಂದಯ್ಯ ಅರವಟಗಿಮಠ, ಸತೀಶ ಚನ್ನಪ್ಪಗೌಡ್ರ, ರಾಹುಲ ಗಿಡ್ನಂದಿ, ಅಮರೇಶ ರಾಂಪೂರ ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net