ಗದಗ ನಗರದ ಬಿಜೆಪಿ ಜಿಲ್ಲಾ ಕಚೇರಿಯಲ್ಲಿ ಬಿಜೆಪಿ ಸಂಸ್ಥಾಪನಾ ದಿನಾಚರಣೆ ಆಚರಿಸಲಾಯಿತು. ರಾಜು ಕುರಡಗಿ, ಎಸ್.ವಿ. ಸಂಕನೂರು, ಶ್ರೀಪತಿ ಉಡುಪಿ, ಜಗನ್ನಾಥಸಾ ಭಾಂಡಗೆ, ಬಿ.ಎಚ್.ಲದ್ವಾ, ಎಂ.ಎಂ.ಹಿರೇಮಠ, ಲಿಂಗರಾಜ ಪಾಟೀಲ, ನಿರ್ಮಲಾ ಕೊಳ್ಳಿ, ಸಿದ್ದು ಪಲ್ಲೇದ, ರವಿ ದಂಡಿನ, ಶಂಕರ ಕಾಕಿ, ಸುರೇಶ ಚಿತ್ತರಗಿ, ಅನೀಲ ಅಬ್ಬಿಗೇರಿ, ಶಶಿಧರ ದಿಂಡೂರ, ಸಂತೋಷ ಅಕ್ಕಿ, ರಮೇಶ ಸಜ್ಜಗಾರ, ನಾಗರಾಜ ತಳವಾರ, ದೇವೆಂದ್ರಪ್ಪ ಹೂಗಾರ, ರವಿ ಮಾನ್ವಿ, ವಿಶ್ವನಾಥ ಟೆಂಗಿನಕಾಯಿ, ಕೇಶವ ಕೋಟ್ನಿಕಲ್ ಇತರರು ಇದ್ದರು.
Published on:
Copied
Follow Us
ವಿಜಯವಾಣಿ ಸುದ್ದಿಜಾಲ ಗದಗ
ಬಿಜೆಪಿ ಜಿಲ್ಲಾ ಕಾರ್ಯಾಲಯದಲ್ಲಿ ಸೋಮವಾರ ಬಿಜೆಪಿ 46 ನೇ ಸಂಸ್ಥಾಪನ ದಿನವನ್ನು ಧ್ವಜರೋಹಣ ಮಾಡುವುದರ ಮೂಲಕ ಆಚರಣೆ ಮಾಡಲಾಯಿತು.
ಬಿಜೆಪಿ ಜಿಲ್ಲಾಧ್ಯಕ್ಷ ರಾಜು ಕುರುಡಗಿ ಮಾತನಾಡಿ ಕಾರ್ಯಕರ್ತರ ಪರಿಶ್ರಮ, ಜನತೆಯ ಆಶೀರ್ವಾದ, ಶ್ರೇಷ್ಠ ನಾಯಕರ ನೇತೃತ್ವದಲ್ಲಿ 1980ರಲ್ಲಿ ಇಬ್ಬರು ಸದಸ್ಯರಿಂದ ಪ್ರಾರಂಭವಾದ ಪಕ್ಷದ ಪಯಣ, ಇಂದು ವಿಶ್ವದ ಬೃಹತ್ ರಾಜಕೀಯ ಶಕ್ತಿಯಾಗಿ ಪರಿವರ್ತನೆಗೊಂಡಿದೆ. ಹೆಮ್ಮೆಯ ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ, ಸತತ 3 ಬಾರಿಯಿಂದ ಕೇಂದ್ರದಲ್ಲಿ ಸರ್ಕಾರ ರಚನೆಯಾಗಿದೆ. ಇಂದಿಗೆ 21 ರಾಜ್ಯಗಳಲ್ಲಿ ಎನ್.ಡಿ.ಎ ಆಡಳಿತದ ಮೂಲಕ ಬಿಜೆಪಿ ಇಂದು ಭಾರತೀಯರ ಭರವಸೆಯಾಗಿದೆ. ಇದು ಕೇವಲ ರಾಜಕೀಯ ಪಯಣವಲ್ಲ, ‘ಸಬ್ ಕಾ ಸಾಥ್, ಸಬ್ ಕಾ ವಿಕಾಸ್’ ಮಂತ್ರದೊಂದಿಗೆ ಅಭಿವೃದ್ಧಿ ಪಥದಲ್ಲಿ ಮುನ್ನಡೆಯುತ್ತಿರುವ ‘ಭಾರತದ ವಿಕಾಸದ ಪಯಣ. ಪಕ್ಷದ ಪ್ರತಿಯೊಬ್ಬ ಕಾರ್ಯಕರ್ತರ ದೃಢಸಂಕಲ್ಪ, ಮೊದಲು ದೇಶ, ಆಮೇಲೆ ಪಕ್ಷ, ಕೊನೆಯಲ್ಲಿ ತಾನು ಎಂಬ ಧ್ಯೆಯದೊಂದಿಗೆ ಭಾರತೀಯ ಜನತಾ ಪಾರ್ಟಿ ಇಂದು ಸದೃಢವಾಗಿದೆ ಎಂದರು.
ವಿಧಾನ ಪರಿಷತ್ ಸದಸ್ಯ ಎಸ್.ವಿ.ಸಂಕನೂರ ಮಾತನಾಡಿ ರಾಷ್ಟ್ರ ಸೇವೆಯ ಪವಿತ್ರ ಧ್ಯೇಯದೊಂದಿಗೆ ಸ್ಥಾಪನೆಯಾದ ಭಾರತೀಯ ಜನತಾ ಪಕ್ಷವು ಇಂದು ದೇಶದ ಅತ್ಯಂತ ದೊಡ್ಡ ಪ್ರಜಾಪ್ರಭುತ್ವ ಶಕ್ತಿಯಾಗಿ ಬೆಳೆದಿದೆ. ನಿಸ್ವಾರ್ಥ ಪರಿಶ್ರಮದಿಂದ ಪಕ್ಷವನ್ನು ಕಟ್ಟಿದ ನಮ್ಮ ಎಲ್ಲ ಹಿರಿಯ ನಾಯಕರನ್ನು, ಕಾರ್ಯಕರ್ತರನ್ನು ಸ್ಮರಿಸುವ ದಿನ ಇದಾಗಿದೆ. ಅಟಲ್ ಬಿಹಾರಿ ವಾಜಪೇಯಿ ಅವರು ಹಾಗೂ ಎಲ್.ಕೆ.ಅಡ್ವಾಣಿ ಅವರ ದೃಢ ನಾಯಕತ್ವ ಮತ್ತು ದೀರ್ಘದೃಷ್ಟಿಯ ಫಲವಾಗಿ ಬೆಳೆದ ಈ ಮಹಾನ್ ಸಂಘಟನೆ, ಇಂದು ನರೇಂದ್ರ ಮೋದಿ ಅವರ ಮಾರ್ಗದರ್ಶನದಲ್ಲಿ ರಾಷ್ಟ್ರದ ಸಮಗ್ರ ಅಭಿವೃದ್ಧಿಗೆ ಅಹೋರಾತ್ರಿ ಶ್ರಮಿಸುತ್ತಿದೆ. ಪಕ್ಷದ ಲಕ್ಷಾಂತರ ಕಾರ್ಯಕರ್ತರ ತ್ಯಾಗ, ಸಮರ್ಪಣೆ ಮತ್ತು ಶ್ರಮವೇ ಬಿಜೆಪಿ ಬಲವಾಗಿದೆ ಎಂದರು.
ಮಾಜಿ ಬಿಜೆಪಿ ಜಿಲ್ಲಾಧ್ಯಕ್ಷ ಎಂ. ಎಸ್. ಕರೀಗೌಡ್ರ ಮಾತನಾಡಿ, ಸಾಮಾನ್ಯ ಜನರ ಆಶಯಗಳನ್ನು ನೆರವೇರಿಸುವ ದಿಸೆಯಲ್ಲಿ ಬಿಜೆಪಿ ನಿರಂತರವಾಗಿ ಕಾರ್ಯನಿರ್ವಹಿಸುತ್ತಿದೆ. ಈ ಸಂಸ್ಥಾಪನಾ ದಿನದ ಸಂದರ್ಭದಲ್ಲಿ ಎಲ್ಲರೂ ರಾಷ್ಟ್ರ ನಿರ್ಮಾಣದ ಕಾರ್ಯದಲ್ಲಿ ಇನ್ನಷ್ಟು ಸಮರ್ಪಿತವಾಗಿ ತೊಡಗಿಸಿಕೊಳ್ಳಬೇಕು. ಭಾರತದ ಪ್ರಗತಿಗೆ ನಮ್ಮ ಕೊಡುಗೆ ನೀಡಬೇಕು ಎಂದರು.
ಶ್ರೀಪತಿ ಉಡುಪಿ, ಜಗನ್ನಾಥಸಾ ಭಾಂಡಗೆ, ಬಿ.ಎಚ್.ಲದ್ವಾ, ಎಂ.ಎಂ.ಹಿರೇಮಠ, ಲಿಂಗರಾಜ ಪಾಟೀಲ, ನಿರ್ಮಲಾ ಕೊಳ್ಳಿ, ಸಿದ್ದು ಪಲ್ಲೇದ, ರವಿ ದಂಡಿನ, ಶಂಕರ ಕಾಕಿ, ಸುರೇಶ ಚಿತ್ತರಗಿ, ಅನೀಲ ಅಬ್ಬಿಗೇರಿ, ಶಶಿಧರ ದಿಂಡೂರ, ಸಂತೋಷ ಅಕ್ಕಿ, ರಮೇಶ ಸಜ್ಜಗಾರ, ನಾಗರಾಜ ತಳವಾರ, ದೇವೆಂದ್ರಪ್ಪ ಹೂಗಾರ, ರವಿ ಮಾನ್ವಿ, ವಿಶ್ವನಾಥ ಟೆಂಗಿನಕಾಯಿ, ಕೇಶವ ಕೋಟ್ನಿಕಲ್ ಇತರರು ಇದ್ದರು.