ಜಲ ಸಂರಕ್ಷಣೆಗೆ ಒಗ್ಗೂಡೋಣ: ನೀರಿದ್ದರೆ ಜೀವ, ಜೀವನ: ನಾಗವೇಣಿ

ಗದಗ ಜಿಲ್ಲಾ ನ್ಯಾಯಾಲಯ ಆವರಣದಲ್ಲಿ ಬುಧವಾರ ಜರುಗಿದ ವಿಶ್ವ ಜಲ ಸಂರಕ್ಷಣೆ ದಿನಾಚರಣೆಯಲ್ಲಿ ನಾಗವೇಣಿ ಮಾತನಾಡಿದರು. ಆರ್​.ಜಿ. ಕಲ್ಲೂರ, ಗಂಗಾಧರ ಸಿ.ಎಂ., ಗೀತಾ ಶಿಂಧೆ, ಗಿರಿಮಲ್ಲಪ್ಪ ಶೆಟ್ಟರ್​, ಸಿ. ಎಸ್​. ಶಿವನಗೌಡ್ರ, ಬೀರಪ್ಪ ಕಾಂಬಳೆ, ಎಂ. ಎ. ಸಂಗನಾಳ, ವಸಂತ ಮಡ್ಲೂರ ಇತರರು ಇದ್ದರು.
ಗದಗ ಜಿಲ್ಲಾ ನ್ಯಾಯಾಲಯ ಆವರಣದಲ್ಲಿ ಬುಧವಾರ ಜರುಗಿದ ವಿಶ್ವ ಜಲ ಸಂರಕ್ಷಣೆ ದಿನಾಚರಣೆಯಲ್ಲಿ ನಾಗವೇಣಿ ಮಾತನಾಡಿದರು. ಆರ್​.ಜಿ. ಕಲ್ಲೂರ, ಗಂಗಾಧರ ಸಿ.ಎಂ., ಗೀತಾ ಶಿಂಧೆ, ಗಿರಿಮಲ್ಲಪ್ಪ ಶೆಟ್ಟರ್​, ಸಿ. ಎಸ್​. ಶಿವನಗೌಡ್ರ, ಬೀರಪ್ಪ ಕಾಂಬಳೆ, ಎಂ. ಎ. ಸಂಗನಾಳ, ವಸಂತ ಮಡ್ಲೂರ ಇತರರು ಇದ್ದರು.
Published on
ವಿಜಯವಾಣಿ ಸುದ್ದಿಜಾಲ ಗದಗ
ನೀರಿದ್ದರೆ ಜೀವ, ಜೀವನ ಎಂಬ ಸಂದೇಶವನ್ನು ಅರಿತು ಪ್ರತಿಯೊಬ್ಬರೂ ನೀರಿನ ಸಂರಕ್ಷಣೆಗೆ ಬದ್ಧರಾಗಬೇಕು ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯೆ ನಾಗವೇಣಿ ಹೇಳಿದರು.
ನಗರದ ಜಿಲ್ಲಾ ನ್ಯಾಯಾಲಯದಲ್ಲಿ ಬುಧವಾರ ಏರ್ಪಡಿಸಿದ್ದ ವಿಶ್ವ ಜಲ ದಿನಾಚರಣೆ, ಜಲ ಜಾಗೃತಿ ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಪ್ರತಿ ಮನೆಯ ಮುಂಭಾಗದಲ್ಲಿ ಪ್ರಾಣಿಪಕ್ಷಿಗಳಿಗಾಗಿ ತೆಂಗಿನ ಚಿಪ್ಪು ಅಥವಾ ಪಾತ್ರೆಗಳಲ್ಲಿ ನೀರು ಇಡುವ ಅಭ್ಯಾಸ ಬೆಳೆಸಿಕೊಳ್ಳಬೇಕು. ನೀರು ಮಾನವರಿಗೆ ಮಾತ್ರವಲ್ಲದೇ, ಪ್ರಾಣಿ ಪಕ್ಷಿಗಳ ಬದುಕಿಗೂ ಅತಿ ಮುಖ್ಯವಾಗಿದೆ. ಅವುಗಳ ಸಂರಕ್ಷಣೆಯೂ ನಮ್ಮ ಹೊಣೆಗಾರಿಕೆ ಆಗಿದೆ. ನೀರಿನ ಕೊರತೆಯ ಬಗ್ಗೆ ಅರಿವು ಮೂಡಿಸಿ ಅದರ ಅಪವ್ಯಯವನ್ನು ತಡೆಯಬೇಕು. ಮಳೆನೀರು ಸಂಗ್ರಹಣೆ, ಪ್ಲಾಸ್ಟಿಕ್​ ವಸ್ತುಗಳನ್ನು ಬಳಸಿ ನೀರು ಸಂರಕ್ಷಿಸುವ ಕ್ರಮಗಳನ್ನು ಅನುಸರಿಸಬೇಕು. ರೈತರು ತಮ್ಮ ಜಮೀನಿನಲ್ಲಿ ಕೃಷಿ ಹೊಂಡಗಳನ್ನು ನಿಮಿರ್ಸಿ ಬೆಳೆಗಳಿಗೂ ಹಾಗೂ ಪ್ರಾಣಿಗಳಿಗೂ ನೀರು ಒದಗಿಸುವ ಕಾರ್ಯಕ್ಕೆ ಮುಂದಾಗಬೇಕು ಎಂದು ಸಲಹೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ವಕೀಲರ ಸಂದ ಅಧ್ಯಕ್ಷ ಆರ್​.ಜಿ. ಕಲ್ಲೂರ ಮಾತನಾಡಿ, ನೀರಿನ ಮಹತ್ವವನ್ನು ವರ್ಷದಿಂದ ವರ್ಷಕ್ಕೆ ಜಾಗೃತಿಯ ಮೂಲಕ ಸಾರಬೇಕಿದೆ. ಇಂದಿನ ಪರಿಸ್ಥಿತಿಯಲ್ಲಿ ನೀರನ್ನು ಖರೀದಿಸುವ ಮಟ್ಟಕ್ಕೆ ತಲುಪಿರುವುದು ಆತಂಕಕಾರಿ ಬೆಳವಣಿಗೆ ಆಗಿದೆ ಎಂದರು.
ಪ್ರಾಣಿ ಪಕ್ಷಿಗಳಿಗೆ ಶುದ್ಧ ನೀರು ಸಿಗದಿದ್ದರೆ ಅವುಗಳು ವಲಸೆ ಹೋಗುವ ಪರಿಸ್ಥಿತಿ ಎದುರಾಗುತ್ತದೆ. ನೀರಿನ ಕೊರತೆ ಕಾಡುಪ್ರಾಣಿಗಳನ್ನು ಗ್ರಾಮಗಳತ್ತ ಸೆಳೆಯುತ್ತಿದೆ. ಒಂದು ಆಕಳಿಗೆ ದಿನಕ್ಕೆ ಸುಮಾರು 40 ಲೀಟರ್​ ನೀರು ಅಗತ್ಯವಿದ್ದು, ನೀರಿನ ಕೊರತೆಯಿಂದ ಅನೇಕ ರೋಗಗಳಿಗೆ ತುತ್ತಾಗುತ್ತವೆ. ಗಭಿರ್ಣಿ ಪ್ರಾಣಿಗಳು ನೀರಿಗಾಗಿ ಹೆಚ್ಚು ಸಂಕಷ್ಟ ಅನುಭವಿಸುತ್ತವೆ ಎಂದು ಹೇಳಿದರು.
ಪ್ರಧಾನ ನ್ಯಾಯಾಧೀಶರಾದ ಗಂಗಾಧರ ಸಿ.ಎಂ., ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಗೀತಾ ಶಿಂಧೆ, ಹಿರಿಯ ಸಿವಿಲ್​ ನ್ಯಾಯಾಧೀಶರು ಹಾಗೂ ಸಿಜೆಎಂ ಗಿರಿಮಲ್ಲಪ್ಪ ಶೆಟ್ಟರ್​, ಹಿರಿಯ ಸಿವಿಲ್​ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದಶಿರ್ ಸಿ. ಎಸ್​. ಶಿವನಗೌಡ್ರ, ಹೆಚ್ಚುವರಿ ಹಿರಿಯ ಸಿವಿಲ್​ ನ್ಯಾಯಾಧೀಶ ಪದ್ಮಶ್ರೀ ಆರ್​. ಪಾಟೀಲ, ದ್ವೀತಿಯ ಹೆಚ್ಚುವರಿ ಸಿವಿಲ್​ ನ್ಯಾಯಾಧೀಶ ಬೀರಪ್ಪ ಕಾಂಬಳೆ, ಜಿಲ್ಲಾ ವಕೀಲಕ ಸಂಘದ ಉಪಾಧ್ಯಕ್ಷ ಎಂ. ಎ. ಸಂಗನಾಳ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಹಾಯಕ ನಿರ್ದೇಶಕರಾದ ವಸಂತ ಮಡ್ಲೂರ ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net