ಮಹಿಳೆ ಸಂತುಷ್ಠಳಾಗಿರಲು ಕೌಟುಂಬಿಕ ಸಮಸ್ಯೆಗಳು ದೂರಾಗಬೇಕು: ವೀಣಾ ಪಾಟೀಲ

  ಗದಗ ನಗರದ ಯೋಗ ಪಾಠಶಾಲೆಯಲ್ಲಿ ಯೋಗ ವಿಜ್ಞಾನ ಕೇಂದ್ರದ 17ವೇ ವಾಷಿರ್ಕೋತ್ಸವ ಜರುಗಿತು. ವೀಣಾ ಪಾಟೀಲ, ಜಯಲಕ್ಷಿ$್ಮ ಉಮಚಗಿ, ಸುಮಂಗಲಾ ಹದ್ಲಿ, ಅರುಣಾ ಇಂಗಳಳ್ಳಿ, ಶೋಭಾ ಭಾಂಡಗೆ, ಕವಿತಾ ಮರಿಗೌಡರ, ಎಸ್​. ಕೆ. ನಾಲತ್ವಾಡಮಠ, ಎಂ. ವಿ. ಐಹೊಳ್ಳಿ, ಶಿವನಗೌಡ ಗೌಡರ, ಸಂಗನಬಸಪ್ಪ ಆನೆಹೊಸೂರ, ಬಸವರಾಜ ತೋಟಿಗೇರ, ವಿದ್ಯಾ ಕೊಳ್ಳಿ, ಪ್ರಭಾವತಿ ಕುಲಕಣಿರ್, ತುಳಸಮ್ಮ ಮಳಲಿ, ಜಯಶ್ರೀ ಪುರದ, ವಿದ್ಯಾ ಸ್ವಾಮಿ, ಇಂದಿರಾ ಪರಡ್ಡಿ, ಸರೋಜಾ ತೋಟಿಗೇರ ಹಲವರು ಇದ್ದರು.
ಗದಗ ನಗರದ ಯೋಗ ಪಾಠಶಾಲೆಯಲ್ಲಿ ಯೋಗ ವಿಜ್ಞಾನ ಕೇಂದ್ರದ 17ವೇ ವಾಷಿರ್ಕೋತ್ಸವ ಜರುಗಿತು. ವೀಣಾ ಪಾಟೀಲ, ಜಯಲಕ್ಷಿ$್ಮ ಉಮಚಗಿ, ಸುಮಂಗಲಾ ಹದ್ಲಿ, ಅರುಣಾ ಇಂಗಳಳ್ಳಿ, ಶೋಭಾ ಭಾಂಡಗೆ, ಕವಿತಾ ಮರಿಗೌಡರ, ಎಸ್​. ಕೆ. ನಾಲತ್ವಾಡಮಠ, ಎಂ. ವಿ. ಐಹೊಳ್ಳಿ, ಶಿವನಗೌಡ ಗೌಡರ, ಸಂಗನಬಸಪ್ಪ ಆನೆಹೊಸೂರ, ಬಸವರಾಜ ತೋಟಿಗೇರ, ವಿದ್ಯಾ ಕೊಳ್ಳಿ, ಪ್ರಭಾವತಿ ಕುಲಕಣಿರ್, ತುಳಸಮ್ಮ ಮಳಲಿ, ಜಯಶ್ರೀ ಪುರದ, ವಿದ್ಯಾ ಸ್ವಾಮಿ, ಇಂದಿರಾ ಪರಡ್ಡಿ, ಸರೋಜಾ ತೋಟಿಗೇರ ಹಲವರು ಇದ್ದರು.
Published on
ವಿಜಯವಾಣಿ ಸುದ್ದಿಜಾಲ ಗದಗ 
ಆಧುನಿಕ ದಿನಗಳಲ್ಲಿ ಮಹಿಳೆ ಸುಖಕರ ಜೀವನಕ್ಕೆ ಬೇಕಾದ ಸಕಲ ಸೌಲಭ್ಯಗಳನ್ನು ಪಡೆದಿದ್ದರೂ ತೃಪ್ತಿಕರ ಬದುಕು ಅವಳದಾಗಿಲ್ಲ. ಹುಟ್ಟಿನಿಂದ ಹಿಡಿದು ಶಿಕ್ಷಣ, ವಿವಾಹ, ಯೌವ್ವನ, ವೃದ್ಧಾಪ್ಯದವರೆಗೂ ಮಹಿಳೆ ಒಂದಿಲ್ಲೊಂದು ಕೌಟುಂಬಿಕ ಮತ್ತು ಸಾಮಾಜಿಕ ಸಮಸ್ಯೆಗಳ ಸುಳಿಯಲ್ಲಿ ಸಿಲುಕಿ ಸಾಧಿಸಬೇಕಾದುದನ್ನು ಸಾಧಿಸದೆ ನೊಂದ ಮನದಿಂದ ಅನಿವಾರ್ಯತೆಯ ಜೀವನ ಸಾಗಿಸುತ್ತಿದ್ದಾಳೆ ಎಂದು ಚೈತನ್ಯ ಶಿಕ್ಷಣ ಸಂಸ್ಥೆಯ ನಿರ್ದೇಶಕಿ ವೀಣಾ ಹೇಮಂತಗೌಡ ಪಾಟೀಲ ಹೇಳಿದರು.
ನಗರದ ಯೋಗ ಪಾಠಶಾಲೆಯಲ್ಲಿ ಭಾನುವಾರ ಏರ್ಪಡಿಸಿದ್ದ ವಿಶ್ವ ಮಹಿಳಾ ದಿನಾಚರಣೆ, ಯೋಗ ವಿಜ್ಞಾನ ಕೇಂದ್ರದ 17ನೇ ವಾಷಿರ್ಕೋತ್ಸ ಕಾರ್ಯಕ್ರಮದಲ್ಲಿ ಮಾತನಾಡಿ, ಎಲ್ಲ ಸಮಸ್ಯೆಗಳಿಂದ ಮಹಿಳೆಯು ದೂರ ಇರಬೇಕಾದರೆ ಮಹಿಳೆ ಸಾಮಾಜಿಕ ಸಂಟನೆ, ಸತ್ಸಂಗ, ಸಭೆ, ಸಮಾರಂಭ, ಸಮಾಜ ಸೇವೆಗಳಲ್ಲಿ ಪಾಲ್ಗೊಳ್ಳಬೇಕು. ಇದರಿಂದ ಮಹಿಳೆಯ ಮನಸ್ಸು ಪ್ರುಲ್ಲಗೊಳ್ಳುವುದು, ಮನೋ ದೈಹಿಕ ಸಾಮರ್ಥ್ಯ ಹೆಚ್ಚುತ್ತದೆ.  ಸಮಸ್ಯೆಗಳಿಗೆ ಪರಿಹಾರ ಉಪಾಯಗಳ ಅರಿವಾಗುತ್ತವೆ. ತೃಪ್ತಿದಾಯಕ ಜೀವನ ಸಾಗಿಸಲು ಮಹಿಳೆ ಸಮರ್ಥ ಆಗುತ್ತಾಳೆ. ಮಹಿಳೆಯ ಮನೋ ದೈಹಿಕ ಹಾಗೂ ಇನ್ನಿತರೆ ತೊಂದರೆಗಳ ನಿವಾರಣೆಗೆ ಯೋಗ ಅತ್ಯುತ್ತಮ ಪರಿಹಾರ ಮಾರ್ಗವಾಗಿದೆ. ಮಹಿಳೆ ತನ್ನ ಗೃಹ ಕಾರ್ಯಗಳ ಜೊತೆಯಲ್ಲಿ ಪ್ರತಿದಿನ ಬೆಳಗ್ಗೆ ಅರ್ಧಗಂಟೆ ಯೋಗ ಸಾಧನೆಗೆ ಮೀಸಲು ಇಡಬೇಕು. ಸುಂದರ ಬದುಕಿಗೆ ಯೋಗ ಅವಶ್ಯಕ ಎಂದರು.
ಕುರ್ತಕೋಟಿ ಗ್ರಾಮ ಪಂಚಾಯತಿ ಮಾಜಿ ಉಪಾಧ್ಯೆ ಸರೋಜಾ ಬೂದಪ್ಪ ಅಂಗಡಿ ಮಾತನಾಡಿ, ಮಹಿಳೆ ಕುಟುಂಬ ಮತ್ತು ಸಮಾಜ ಜೀವನವನ್ನು ಒಂದು ರಥದ ಎರಡು ಗಾಲಿಗಳಂತೆ ಸಮನಾಗಿ ನಡೆಸಿದರೆ ಬದುಕು ಹಸನಾಗುತ್ತದೆ ಎಂದರು. 
ಅಕ್ಕಮಹಾದೇವಿ ಯೋಗ ವಿಾನ ಕೇಂದ್ರದ ಅಧ್ಯೆ ವಿಜಯಲಕ್ಷಿ$್ಮ  ಆನೆಹೊಸೂರು ಮಾತನಾಡಿ, ಮಹಿಳೆ ಸಾಮಾಜಿಕ ಸಂಟನೆಗಳಲ್ಲಿ ಸಕ್ರೀಯವಾಗಿ ಭಾಗವಹಿಸಿದರೆ ಹೆಚ್ಚಿನ ಅಭಿವೃದ್ಧಿ ಸಾಧಿಸಲು ಸಾಧ್ಯವಾಗುತ್ತದೆ. ಮಹಿಳೆ ಜಾಗೃತಳಾದರೆ ಒಂದು ಕುಟುಂಬ, ಕುಟುಂಬಗಳಿಂದ ಸಮಾಜ ಜಾಗೃತಗೊಳ್ಳುತ್ತದೆ ಎಂದರು.
ಮಹಿಳಾ ದಿನಾಚರಣೆ ಪ್ರಯುಕ್ತ ನಡೆಸಿದ ನಿಬಂಧ ಮತ್ತು ವೇಷಭೂಷಣ ಹಾಗೂ ಮೋಜಿನ ಆಟಗಳ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಅಕ್ಕಮಹಾದೇವಿ ಯೋಗ ವಿಾನ ಕೇಂದ್ರದ ಗೌರವಾಧ್ಯೆ ಅನ್ನರ್ಪೂಣ ವರವಿ ನಗದು ಬಹುಮಾನ ಮತ್ತು ಪ್ರಶಸ್ತಿ ಪತ್ರ ವಿತರಿಸಿದರು.
ಜಯಲಕ್ಷಿ$್ಮ ಉಮಚಗಿ, ಸುಮಂಗಲಾ ಹದ್ಲಿ, ಅರುಣಾ ಇಂಗಳಳ್ಳಿ, ಶೋಭಾ ಭಾಂಡಗೆ, ಕವಿತಾ ಮರಿಗೌಡರ, ಎಸ್​. ಕೆ. ನಾಲತ್ವಾಡಮಠ, ಎಂ. ವಿ. ಐಹೊಳ್ಳಿ, ಶಿವನಗೌಡ ಗೌಡರ, ಸಂಗನಬಸಪ್ಪ ಆನೆಹೊಸೂರ, ಬಸವರಾಜ ತೋಟಿಗೇರ, ವಿದ್ಯಾ ಕೊಳ್ಳಿ, ಪ್ರಭಾವತಿ ಕುಲಕಣಿರ್, ತುಳಸಮ್ಮ ಮಳಲಿ, ಜಯಶ್ರೀ ಪುರದ, ವಿದ್ಯಾ ಸ್ವಾಮಿ, ಇಂದಿರಾ ಪರಡ್ಡಿ, ಸರೋಜಾ ತೋಟಿಗೇರ ಹಲವರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net