ಕ್ರೌರ್ಯ ಯುದ್ಧಗಳಂತಹ ಇಂದಿನ ಜಾಗತೀಕ ಪ್ರಕ್ಷುಬ್ಧ ಸ್ಥಿತಿಯಲ್ಲಿ ರಂಗಭೂಮಿ ಇನ್ನಷ್ಟು ಕ್ರಿಯಾಶೀಲ ಆಗಬೇಕು: ಪ್ರೊ. ಮುರಲೀಧರ ಸಂಕನೂರು
ವಿಜಯವಾಣಿ ಸುದ್ದಿಜಾಲ ಗದಗ
ಹಿಂಸೆ, ಕ್ರೌರ್ಯ ಮತ್ತು ಯುದ್ಧಗಳಿಂದ ತುಂಬಿರುವ ಇಂದಿನ ಜಾಗತಿಕ ಪ್ರಕ್ಷುಬ್ಧ ಪರಸ್ಥಿತಿಯ ಸಂದರ್ಭದಲ್ಲಿ ಸಂವೇದನಾಶೀಲತೆ, ಮತ್ತು ಸುಸಂಸತ, ಸಾಂಸತಿಕ ಮನೋಭಾವವನ್ನು ಬೆಳೆಸುವ ನಿಟ್ಟಿನಲ್ಲಿ ರಂಗಭೂಮಿ ಇನ್ನಷ್ಟು ಕ್ರೀಯಾಶೀಲ ಆಗಬೇಕಾಗಿದೆ ಎಂದು ಹಿರಿಯ ರಂಗಕಲಾವಿದ ಪ್ರೊ. ಮುರಲೀಧರ ಸಂಕನೂರ ಹೇಳಿದರು.
ನಗರದ ಹೊಸಪೇಟ ಚೌಕ ಓಣಿಯಲ್ಲಿರುವ ಕಾಳಿಕಾದೇವಿ ದೇವಸ್ಥಾನದಲ್ಲಿ ಕರ್ನಾಟಕ ನಾಟಕ ಅಕಾಡೆಮಿ ಹಾಗೂ ಚಿನ್ಮಯ ಸಾಂಸತಿಕ ಅಕಾಡೆಮಿ ಸಹಯೋಗದಲ್ಲಿ ಶುಕ್ರವಾರ ಆಯೋಜಿಸಿದ್ದ ವಿಶ್ವರಂಗಭೂಮಿ ದಿನಾಚರಣೆ ಕಾರ್ಯಕ್ರಮದಲ್ಲಿ ಸಶಕ್ತ ಸಮಾಜ ಕಟ್ಟುವಲ್ಲಿ ರಂಗಭೂಮಿ ಪಾತ್ರ ವಿಷಯ ಕುರಿತು ಉಪನ್ಯಾಸ ನೀಡಿ ಮಾತನಾಡಿದರು.
ಜಾತಿ, ಮತ, ಲಿಂಗ ತಾರತಮ್ಯ, ನ್ಯಾಯ ಹಾಗೂ ಸಾಮಜೀಕ ಸ್ವಾಸಗಳ ಕುರಿತು ಜನರಲ್ಲಿ ಅರಿವು ಮೂಡಿಸಬಲ್ಲ ಪ್ರಭಾವಿ ಮಾಧ್ಯಮಗಳಲ್ಲಿ ರಂಗಭೂಮಿ ಪ್ರಮುಖ ಸ್ಥಾನ ಹೊಂದಿದೆ. ಇಂತಹ ರಂಗ ಕಲೆಗೆ ಸರ್ಕಾರ, ಸಮಾಜ ಹೆಚ್ಚು ಪ್ರೋತ್ಸಾಹ ನೀಡಬೇಕು ಎಂದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಜಿಲ್ಲಾ ವಿಶ್ವಕರ್ಮ ನೌಕರರ ಕ್ಷೇಮಾಭಿವೃದ್ಧಿ ಸಂದ ಅಧ್ಯಕ್ಷ ರಾಜಗೋಪಾಲ ಕಡ್ಲಿಕೊಪ್ಪ ಮಾತನಾಡಿ, ನಾಡಿನ ರಂಗಭೂಮಿ ಕ್ಷೇತ್ರಕ್ಕೆ ಗದಗ ಜಿಲ್ಲೆಯ ಕೊಡುಗೆ ಅಪಾರವಾಗಿದೆ. ಇಂದಿನ ಪೀಳಿಗೆಯಲ್ಲಿ ರಂಗಾಸಕ್ತಿ ಣಿಸುತ್ತಿರುವುದು ವಿಷಾಧದ ಸಂಗತಿ, ಚಿನ್ಮಯ ಸಾಂಸತಿಕ ಅಕಾಡೆಮಿ ಮಕ್ಕಳಲ್ಲಿ ರಂಗಾಸಕ್ತಿ ಮೂಡಿಸುವ ಕಾರ್ಯ ಮಾಡುತ್ತಿರುವುದು ಶ್ಲಾಘನೀಯ ಕಾರ್ಯ ಎಂದರು.
ಕರ್ನಾಟಕ ನಾಟಕ ಅಕಾಡೆಮಿ ಹಾಗೂ ಚಿನ್ಮಯ ಸಾಂಸತಿಕ ಅಕಾಡೆಮಿಯವರು ನನ್ನ ರಂಗಸೇವೆ ಗುರುತಿಸಿ ಗೌರವಿಸಿರುವುದು ಇನ್ನಷ್ಟು ಸೇವೆಗೆ ಹೊಸ ಚೈತನ್ಯ ತಂದಿದೆ ಎಂದು ಚಿನ್ಮಯ ಕಲಾಶ್ರೀ ಪ್ರಶಸ್ತಿ ಸ್ವೀಕರಿಸಿದ ಹಿರಿಯ ರಂಗಕಲಾವಿ ಬಸವರಾಜ ಅಡವಳ್ಳಿ ಹೇಳಿದರು.
ಪ್ರಕಾಶ ಬಡಿಗೇರ, ಶ್ರೀಧರ ಕೊಣ್ಣೂರ, ಫಣೀಂದ್ರಾಚಾರ್ಯ ದ್ಯಾಮೇನಹಳ್ಳಿ, ವಿಶ್ವನಾಥ ಕಮ್ಮಾರ, ವಿಶ್ವನಾಥ ಬೇಂದ್ರೆ, ಮೌನೇಶ ಬಡಿಗೇರ, ಮಂಜುನಾಥ ಅಕ್ಕಸಾಲಿ, ಸತೀಶ ಹೊರಪೇಟಿ ಇತರರು ಇದ್ದರು.