ಕೆಎಲ್ಇ ಸಂಸ್ಥೆಯ ತೋಂಟದಾರ್ಯ ಮಹಾವಿದ್ಯಾಲಯದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಸಾಧಕ ಮಹಿಳೆಯರಿಗೆ ಸನ್ಮಾನ ಸಮಾರಂಭದಲ್ಲಿ ಭಾಗವಹಿಸಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಪ್ರತಿಯೊಬ್ಬರೂ ಯಾವುದಾದರೊಂದು ಕಾಯಕದಲ್ಲಿ ತೊಡಗಿಸಿಕೊಳ್ಳವುದು ಜೀವನಮಟ್ಟ ಸುಧಾರಣೆಗೆ ರಹದಾರಿ ಇದ್ದಂತೆ. ಯಾವುದೇ ಕೆಲಸವಾಗಲಿ ಪ್ರಾಮಾಣಿಕತೆ, ನಿಷ್ಟೆ, ಕಾಳಜಿ, ಶಿಸ್ತು, ತಾಳ್ಮೆಯಿಂದ ಮಾಡಬೇಕು. ಇದರಿಂದ ನಿರುದ್ಯೋಗ ಸಮಸ್ಯೆ ಬಗೆಹರಿಯುತ್ತದೆ. ಓದುವುದು ಸರ್ಕಾರಿ ನೌಕರಿಗಾಗಿ ಎಂಬ ಧೋರಣೆಯಿಂದ ಹೊರಬಂದು ಭವಿಷ್ಯದ ಬದುಕು ರೂಪಿಸಿಕೊಳ್ಳುವುದಕ್ಕೆ ಎಂಬ ತಿಳುವಳಿಕೆಯನ್ನು ಹೊಂದಬೇಕು. ಶಕ್ತಿ ಇದ್ದಾಗ, ವಯಸ್ಸಿದ್ದಾಗ ಜೀವನ ರೂಪಿಸಿಕೊಳ್ಳಬೇಕು ಎಂದರು.