ವೈಜ್ಞಾನಿಕ ಚಿಂತನೆ ಇಲ್ಲದ ಯೋಜನೆಯಿಂದ ಭವಿಷ್ಯ ಪತನ; ಶ್ರೀಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ಆತಂಕ

ನದಿತಿರುವು ಯೋಜನೆ ವಿರುದ್ಧ ಏರ್ಪಡಿಸಿದ್ದ ಜನಜಾಗೃತಿ ಚಿಂತನ ಮಂಥನ ಸಭೆಯನ್ನು ಶ್ರೀಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ಉದ್ಘಾಟಿಸಿದರು. ವಿಶ್ವೇಶ್ವರ ಹೆಗಡೆ ಕಾಗೇರಿ, ಅನಂತ ಹೆಗಡೆ ಅಶೀಸರ ಮತ್ತಿತರರಿದ್ದರು.
ನದಿತಿರುವು ಯೋಜನೆ ವಿರುದ್ಧ ಏರ್ಪಡಿಸಿದ್ದ ಜನಜಾಗೃತಿ ಚಿಂತನ ಮಂಥನ ಸಭೆಯನ್ನು ಶ್ರೀಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ಉದ್ಘಾಟಿಸಿದರು. ವಿಶ್ವೇಶ್ವರ ಹೆಗಡೆ ಕಾಗೇರಿ, ಅನಂತ ಹೆಗಡೆ ಅಶೀಸರ ಮತ್ತಿತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ವೈಜ್ಞಾನಿಕ ಚಿಂತನೆ ಇಲ್ಲದ ಯೋಜನೆಯಿಂದ ಭವಿಷ್ಯ ನಾಶ
  • ಸೋಂದಾ ಶ್ರೀಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ಆತಂಕ
  • ನದಿತಿರುವು ಯೋಜನೆ ಕುರಿತು ಜನಜಾಗೃತಿ ಚಿಂತನ ಮಂಥನ
  • ಬೇಡ್ತಿ-ಅಘನಾಶಿನಿ ಕೊಳ್ಳ ಸಂರಕ್ಷಣಾ ಸಮಿತಿ ಆಯೋಜನೆ

ಬೆಂಗಳೂರು:ಯಾವುದೇ ಅಭಿವೃದ್ಧಿಕಾರ್ಯಗಳನ್ನು ಕೈಗೆತ್ತಿಕೊಳ್ಳಬೇಕಾದಸರ್ಕಾರಗಳು ದೀರ್ಘಕಾಲದಸಾಧಕ-ಬಾಧಕಗಳನ್ನುಅಧ್ಯಯನ ನಡೆಸಬೇಕು.ವೈಜ್ಞಾನಿಕಚಿಂತನೆ ಇಲ್ಲದೆ ಕೈಗೆತ್ತಿಕೊಳ್ಳುವಅಭಿವೃದ್ಧಿ ಯೋಜನೆಯಿಂದ ಭವಿಷ್ಯಪತನವಾಗಲಿದೆ ಎಂದು ಶಿರಸಿಯ ಸೋಂದಾಸ್ವರ್ಣವಲ್ಲಿ ಮಠದ ಶ್ರೀ ಗಂಗಾಧರೇಂದ್ರಸ್ವರಸ್ವತೀ ಸ್ವಾಮೀಜಿ ಹೇಳಿದ್ದಾರೆ.

ಭಾರತೀಯವಿದ್ಯಾಭವನದಲ್ಲಿ ಬೇಡ್ತಿ -ಅಘನಾಶಿನಿ ಕೊಳ್ಳಸಂರಕ್ಷಣಾ ಸಮಿತಿ ಆಯೋಜಿಸಿದ್ದಪಶ್ಚಿಮಘಟ್ಟದಲ್ಲಿ ನದಿ ತಿರುವುಯೋಜನೆಗಳ ಹಾನಿ ಕುರಿತು ಶನಿವಾರ ಏರ್ಪಡಿಸಿದ್ದಜನಜಾಗೃತಿ ಚಿಂತನ ಮಂಥನ ಸಭೆಯಸಾನ್ನಿಧ್ಯ ವಹಿಸಿ ಆಶೀರ್ವಚನನೀಡಿದರು.

ಉತ್ತರಕನ್ನಡ ಜಿಲ್ಲೆಯಲ್ಲೇ ಅನೇಕಸ್ಥಳಗಳಲ್ಲಿ ಕುಡಿಯುವ ನೀರು,ಕೃಷಿ ನೀರಿನಅಭಾವವಿದೆ.ಹೀಗಿರುವಾಗ ಬರದನಾಡನ್ನು ನೀರಾವರಿ ಮಾಡಲು ಹೋಗಿಇತ್ತ ಪಶ್ಚಿಮ ಘಟ್ಟವನ್ನೂ ಬರಡುಮಾಡುವುದು ತಪ್ಪು.ಎತ್ತಿನಹೊಳೆಯೋಜನೆಯ ಪರಿಸ್ಥಿತಿ ಏನಾಗಿದೆ? ಎತ್ತಿನಹೊಳೆ ಇಂದು ಎತ್ತಲಾರದಷ್ಟು ಹೂಳುತುಂಬಿದೆ. ಒಂದುಪ್ರದೇಶದ ನೀರನ್ನು ಮತ್ತೊಂದುಕಡೆ ಬಳಸುವುದರಿಂದ ಅಲ್ಲಿನ ಮಣ್ಣಿನಗುಣಮಟ್ಟ ಕುಸಿಯುವ ಅಪಾಯವಿದೆ.ಇಂತಹ ಸೂಕ್ಷ್ಮಸಮಸ್ಯೆಗೆ ವೈಜ್ಞಾನಿಕ ಚಿಂತನೆಯಿಂದಮಾತ್ರ ಪರಿಹಾರ ಸಾಧ್ಯ ಎಂದುಸ್ವಾಮೀಜಿ ಸಲಹೆ ನೀಡಿದ್ದಾರೆ.

ಸಭೆಯಲ್ಲಿಮಾತನಾಡಿದ ಸಂಸದ ವಿಶ್ವೇಶ್ವರಹೆಗಡೆ ಕಾಗೇರಿ,ರಾಜ್ಯದಅಭಿವೃದ್ಧಿಗಾಗಿ ಉತ್ತರ ಕನ್ನಡಜಿಲ್ಲೆ ಈಗಾಗಲೇ ಸಾಕಷ್ಟು ತ್ಯಾಗಮಾಡಿದೆ.ಪಶ್ಚಿಮಘಟ್ಟಕ್ಕೆಹಾನಿಯಾದರೆ ಇಡೀ ರಾಜ್ಯ,ದೇಶಕ್ಕೂ ಅದರಿಂದಹಾನಿಯಾಗಲಿದೆ.ಇದರ ಸೂಕ್ಷ್ಮತೆಯನ್ನುಅರ್ಥ ಮಾಡಿಕೊಂಡು ಯೋಜನೆ ರೂಪಿಸಬೇಕು.ಈ ಸಂಬಂಧ ಬೃಹತ್ಹೋರಾಟದ ಅಗತ್ಯವಿದೆ ಎಂದರು.

ಕಾರ್ಯಕ್ರಮದಲ್ಲಿಅದಮ್ಯ ಚೇತನ ಸಂಸ್ಥೆಯ ಅಧ್ಯಕ್ಷೆತೇಜಸ್ವಿನಿ ಅನಂತಕುಮಾರ್,ವನ್ಯಜೀವಿ ಶಾಸಜ್ಞಡಾ.ಉಲ್ಲಾಸ್ಕಾರಂತ್, ಹಿರಿಯನ್ಯಾಯವಾದಿ ಅಶೋಕ ಹಾರನಹಳ್ಳಿ,ಭೂವಿಜ್ಞಾನಿಡಾ.ಶ್ರೀನಿವಾಸರೆಡ್ಡಿ, ಪರಿಸರವಾದಿಸುರೇಶ ಹೆಬ್ಳೀಕರ್,ನಿವೃತ್ತ ಐಎ್ಎಸ್ಅಧಿಕಾರಿಗಳಾದ ಎ.ಕೆ.ವರ್ಮಾ,ಯು.ವಿ.ಸಿಂಗ್ವಿಚಾರ ಮಂಡಿಸಿದರು.

ಮಾಲಿನ್ಯನಿಯಂತ್ರಣ ಮಂಡಳಿ ಮಾಜಿ ಅಧ್ಯಕ್ಷ ಡಾ.ವಾಮನಆಚಾರ್ಯ, ನಟರಾಮಕೃಷ್ಣ ನೀರ್ನಳ್ಳಿ,ಹೋರಾಟ ಸಮಿತಿಯರಾಮಕೃಷ್ಣ ಶೇರುಗಾರ,ಜಿ.ವಿ.ಹೆಗಡೆ,ಎಸ್.ಎಂ.ಹೆಗಡೆ,ಎಲ್.ಎನ್.ಹೆಗಡೆಮತ್ತಿತರರು ಉಪಸ್ಥಿತರಿದ್ದರು.

ಜ.11ಕ್ಕೆಶಿರಸಿಯಲ್ಲಿ ಬೃಹತ್ ಜನಾಂದೋಲನ

ಬೇಡ್ತಿ-ಅಘನಾಶಿನಿನದಿ ತಿರುವು ಯೋಜನೆಯ ವಿರುದ್ಧಮುಂಬರುವ ಜ.11ರಂದುಶಿರಸಿಯಲ್ಲಿ ಬೃಹತ್ ಪ್ರತಿಭಟನೆಆಯೋಜಿಸಿರುವುದಾಗಿ ಶ್ರೀಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿೋಷಿಸಿದರು.ಯಾವುದೇ ವೈಜ್ಞಾನಿಕಸಂಶೋಧನೆ,ಬೇಡಿಕೆಗಳಿದ್ದರೂ,ಜನಬಲದಿಂದ ಮಾತ್ರಅದಕ್ಕೆ ಮಾನ್ಯತೆ ದೊರೆಯುತ್ತದೆ.ಆದ್ದರಿಂದ ಜನಹೆಚ್ಚಿನ ಸಂಖ್ಯೆಯಲ್ಲಿ ಪ್ರತಿಭಟನಾಸಭೆಗೆ ಆಗಮಿಸುವಂತೆ ಶ್ರೀಗಳುಕರೆ ನೀಡಿದರು.ನಮ್ಮ ಬೇಡಿಕೆಈಡೇರಿಕೆಗಾಗಿ ವೈಜ್ಞಾನಿಕಸಂಶೋಧನೆ, ಕಾನೂನುಹೋರಾಟ, ಜನಾಂದೋಲನಮತ್ತು ಉನ್ನತ ಮಟ್ಟದಲ್ಲಿ ಲಾಬಿಎಲ್ಲವನ್ನೂ ಮಾಡಲಿದ್ದೇವೆ ಎಂದುಸ್ವಾಮೀಜಿ ವಿವರಿಸಿದರು.

ಶಾಲ್ಮಲ ನದಿ ಕಣಿವೆ ಪ್ರದೇಶವನ್ನು ಅರಣ್ಯ ಜೀವ ವೈವಿಧ್ಯ ಪ್ರದೇಶ ಎಂದು ೋಷಿಸಿದ ಸರ್ಕಾರವೇ ಈಗ ಅದಕ್ಕೆ ವಿರುದ್ಧವಾಗಿ ನದಿ ತಿರುವು ಯೋಜನೆಗೆ ಮುಂದಾಗಿದೆ. ಈಗಿರುವ ನೀರಾವರಿ ಯೋಜನೆಗಳಲ್ಲಿ ಭ್ರಷ್ಟಾಚಾರ ನಡೆಯುತ್ತಿದ್ದು, ಹೊಸ ಯೋಜನೆಯ ಅಗತ್ಯವೇನು ?

— ಅನಂತ ಹೆಗಡೆ ಅಶೀಸರ, ಬೇಡ್ತಿ-ಅಘನಾಶಿನಿ ಕೊಳ್ಳ ಸಂರಕ್ಷಣಾ ಸಮಿತಿ ಅಧ್ಯಕ್ಷ

ಯಾವುದೇ ಯೋಜನೆಗಳನ್ನು ರೂಪಿಸುವಾಗ; ಸಮಾಜ, ವಿಜ್ಞಾನ, ಸಂಸ್ಕೃತಿ ಮತ್ತು ಪರಿಸರವನ್ನು ಪರಿಗಣಿಸಿ ಜಾರಿಗೆ ತರಬೇಕು. ಉತ್ತರ ಕನ್ನಡ ಜಿಲ್ಲೆ ದೇಶದಲ್ಲೇ ನೈಸರ್ಗಿಕವಾಗಿ ಸಂಪತ್ಭರಿತ ಪ್ರದೇಶ. ಪರಿಸರದ ರಕ್ಷಣೆ ಪ್ರತಿಯೊಬ್ಬನ ಕರ್ತವ್ಯ. ಸರ್ಕಾರ ಪರಿಸರ ಸಂರಕ್ಷಣಗೆ ವಿಶೇಷ ಆದ್ಯತೆ ನೀಡಬೇಕು.

— ಡಾ.ಟಿ.ವಿ.ರಾಮಚಂದ್ರ, ಪರಿಸರ ವಿಜ್ಞಾನಿ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net