ತಾಲೂಕಿನ ಬಡಗವಾರಹಳ್ಳಿಯ ಮುನೇಶ್ವರ ಸ್ವಾಮಿ ದೇವಾಲಯದಲ್ಲಿ ತಿಂಗಳ ಹುಣ್ಣಿಮೆ ಕಾರ್ಯಕ್ರಮ ಆಚರಿಸಲಾಯಿತು.
ತತ್ವಪದಕಾರ ಚಿಂತಾಮಣಿಯ ಎಲ್.ಎನ್.ಶಂಕರ್ ರೆಡ್ಡಿ ಮಾತನಾಡಿ, ಹುಣ್ಣಿಮೆಯಂದು ಪ್ರಕಾಶಿಸುವ ಚಂದ್ರನ ಕಿರಣಗಳು ಶರೀರದ ಮೇಲೆ ಬೀಳುವುದರಿಂದ ವಿಶೇಷ ಕಂಪನ ಉಂಟಾಗಿ ಮನಸ್ಸು ನಿರ್ಮಲಗೊಳ್ಳುತ್ತದೆ.
ಇದರಿಂದ ಹೊಸ ಚಿಂತನೆ ಹಾಗೂ ಜೀವನಕ್ಕೆ ನಾಂದಿಯಾಗುತ್ತದೆ. ಆದ್ದರಿಂದ ಹುಣ್ಣಿಮೆಯ ದಿನ ದೇವರ ಸ್ಮರಣೆ, ಧ್ಯಾನ ಹಾಗೂ ತತ್ವಚಿಂತನೆ ಮಾಡುವುದು ಸೂಕ್ತವಾಗಿದೆ ಎಂದರು.
ಧರ್ಮದರ್ಶಿ ಕಾಗತಿ ವೆಂಕಟರತ್ನಂ ಮಾತನಾಡಿ, ಇಂತಹ ಕಾರ್ಯಕ್ರಮಗಳಲ್ಲಿ ವಿದ್ವಾಂಸರು ಹಾಗೂ ವೇದಾಂತಿಗಳು ಭಾಗವಹಿಸಿ ತಿಳಿಸುವ ತತ್ವಪದಗಳು ಮತ್ತು ಜ್ಞಾನದ ವಿಚಾರಗಳು ನಮ್ಮ ಜೀವನಕ್ಕೆ ದಾರಿದೀಪವಾಗುತ್ತವೆ ಎಂದರು.
ಯಂಡಪಲ್ಲಿ ರಾಜಮ್ಮ, ಯರ್ರಮರೆಡ್ಡಿಹಳ್ಳಿ ನಾರೆಮ್ಮ, ಬಡಗವಾರಹಳ್ಳಿ ಚೌಡಮ್ಮ, ಅನುಪಲ್ಲಿ ನಾರಾಯಣಸ್ವಾಮಿ, ಕೃಷ್ಣರಾಜಪುರ ಕೋನಪ್ಪ, ಬಡಗವಾರಹಳ್ಳಿ ಲಕ್ಷ$್ಮಮ್ಮ, ನರಸಮ್ಮ, ನಾರಾಯಣಮ್ಮ ಹಲವರು ರಾತ್ರಿ ಇಡೀ ತತ್ವಪದಗಳನ್ನು ಹಾಡಿದರು. ಅವರಿಗೆ ದಿನ್ನಮಿಂದಹಳ್ಳಿ ಸೀನಪ್ಪ ಹಾಮೋರ್ನಿಯಂ ನುಡಿಸಿ ಸಾಥ್ ನುಡಿದರು.