ರೈತ-ಕೃಷಿ ಕಾರ್ಮಿಕರ ಬೇಡಿಕೆ ಈಡೇರಿಸಿ

ಯಾದಗಿರಿ ನಗರದ ಡಿಸಿ ಕಚೇರಿ ಎದುರು ಮಂಗಳವಾರ ವಿವಿಧ ಬೇಡಿಕೆಗೆ ಆಗ್ರಹಿಸಿ ಅಖಿಲ ಭಾರತ ರೈತ ಕೃಷಿ ಕಾರ್ಮಿಕರ ಸಂಟನೆ  ಜಿಲ್ಲಾ ಟಕದ ಪದಾಧಿಕಾರಿಗಳು ಪ್ರತಿಭಟನೆ ನಡೆಸಿದರು. ಜಿಲ್ಲಾಧ್ಯಕ್ಷ ಶರಣಗೌಡ ಗೂಗಲ್​, ಸುಭಾಷ್​ಚಂದ್ರ ಬಾವನೂರ, ಅಂಬರೀಷ್​ ಧಣಿ, ಮರೆಪ್ಪ ಶಕರ್​ಬಡಿ, ಮರೆಪ್ಪ ಕೊಟ್ಟೇಕಲ್​, ಸುರೇಶ ತೆಳಿಗೇರಿ, ಮುದ್ದಪ್ಪ ಸುಲುಗಿತಿ, ಹಣಮಂತ ಗುಡಿಸಲ್​ ಇತರರಿದ್ದರು.

Published on
ಯಾದಗಿರಿ: ಜಿಲ್ಲೆಯ ರೈತರಿಗೆ ಬೀಜ, ಗೊಬ್ಬರದ ಕೊರತೆ ನೀಗಿಸುವುದು ಸೇರಿ ವಿವಿಧ ಬೇಡಿಕೆ ಈಡೇರಿಸಬೇಕೆಂದು ಆಗ್ರಹಿಸಿ ಮಂಗಳವಾರ ಅಖಿಲ ಭಾರತ ರೈತ ಕೃಷಿ ಕಾರ್ಮಿಕರ ಸಂಘಟನೆ ಜಿಲ್ಲಾ ಘಟಕದ ಪದಾಧಿಕಾರಿಗಳು ಡಿಸಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಜಿಲ್ಲಾಧ್ಯಕ್ಷ ಶರಣಗೌಡ ಗೂಗಲ್​ ಮಾತನಾಡಿ, ಜಿಲ್ಲೆಯ ಎಲ್ಲ ರೈತ ಸಂಪರ್ಕ ಕೇಂದ್ರಗಳಿಗೆ ತಕ್ಷಣವೆ ಅಗತ್ಯವಿರುವಷ್ಟು ಬಿತ್ತನೆ ಬೀಜ ಮತ್ತು ಡಿಎಪಿ ಪೂರೈಕೆ ಮಾಡಬೇಕು. ಕೃಷಿ ಕೇಂದ್ರಗಳಲ್ಲಿ ಹೆಚ್ಚುವರಿ ಕೌಂಟರ್​ ತೆರೆಯುವ ಮೂಲಕ ರೈತರು ಗಂಟೆಗಟ್ಟಲೆ ಕಾಯುವುದನ್ನು ತಪ್ಪಿಸಬೇಕು. ಕೃತಕ ಅಭಾವ ಸೃಷ್ಟಿಸಿ ಲಿಂಕ್​ ಬಿಸಿನೆಸ್​ ದಂಧೆ ನಡೆಸುತ್ತಿರುವ ಖಾಸಗಿ ಅಂಗಡಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೆಕು ಎಂಬುದು ಸೇರಿ ವಿವಿಧ ಬೇಡಿಕೆ ಈಡೇರಿಸಬೇಕೆಂದು ಆಗ್ರಹಿಸಿದರು.
ಈ ವೇಳೆ ಎಐಕೆಕೆಎಂಎಸ್​ ತಾಲೂಕು ಕಾರ್ಯದರ್ಶಿ ಸುಭಾಷ್​ಚಂದ್ರ ಬಾವನೂರ, ಅಂಬರೀಷ್​ ಧಣಿ, ಮರೆಪ್ಪ ಶಕರ್​ಬಡಿ, ಮರೆಪ್ಪ ಕೊಟ್ಟೇಕಲ್​, ಸುರೇಶ ತೆಳಿಗೇರಿ, ಮುದ್ದಪ್ಪ ಸುಲುಗಿತಿ, ಹಣಮಂತ ಗುಡಿಸಲ್​, ದೇವಿದ್ರಪ್ಪ ಪತಪುರ್​, ಬಸವರಾಜ್​ ಬೋಯರ್​, ಭೀಮಪ್ಪ ಬಂಗಾರಿ, ಸಾಬಯ್ಯ ಹೇಳುವರ್​, ಮಾರುತಿ ದಾಸರ್​, ದೇವಪ್ಪ ಪೂಜಾರಿ, ಹನುಮವ್ವ ಹೊರುಂಚಿ, ಸಲ್ಲಿಮ್ಮ ಮುಲ್ಲಾ, ಮೈಬುಬಿ ಹುಲ್ಕಲ್​, ಶಾಂತಮ್ಮ ಬಂಡಿಮನಿ, ಸುಮಂಗಲ ದಾಸರ, ಸುವರ್ಣ ಕಟಕಟಿ, ರೇಣುಕಾ ಪೂಜಾರಿ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net