ಜನರಿಗೆ ಮೂಲಸೌಲಭ್ಯ ಕಲ್ಪಿಸಲು, ಅವರ ಬೇಡಿಕೆ ಏನು ಎಂಬುದರ ತಿಳಿದುಕೊಳ್ಳಲು ಗ್ರಾಮೀಣ ಭಾಗದಲ್ಲಿ ಗ್ರಾಮ ಸಭೆ, ನಗರ, ಪಟ್ಟಣದಲ್ಲಿ ವಾರ್ಡ್ ಸಭೆ ನಡೆಸಲು ಕಾರ್ಯಕ್ರಮ ಜಾರಿಗೆ ತರಲಾಗಿದೆ. ಅದೆಲ್ಲವೂ ಸಂವಿಧಾತ್ಮಕವಾಗಿ ನಡೆಯಬೇಕಿತ್ತು. ಬಹುತೇಕ ಅಧಿಕಾರಿಗಳ ಗಮನಕ್ಕೆ ಇಲ್ಲದೇ ಇರುವುದನ್ನು ಕಾಣಲಾಗಿದೆ. ತಪ್ಪು ಮಾಡಿರುವ ಅರಿವು ಇದೆ, ಇದನ್ನು ಮುಂದೆ ಸರಿಪಡಿಸಿಕೊಂಡು ಸಾರ್ವಜನಿಕರ ಸಹಭಾಗಿತ್ವದಲ್ಲಿ ಸಭೆಗಳನ್ನು ನಡೆಸಲು ಮುಂದಾಗಬೇಕು ಎಂದು ಡಿ.ಆರ್.ಪಾಟೀಲ ಸೂಚಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ನಗರ ಕೋಶ ಯೋಜನಾ ನಿರ್ದೇಶಕಿ ಅಂಬಿಕಾ, ನಗರಸಭೆ, ಪುರಸಭೆ ಅಧ್ಯಕ್ಷರ, ಉಪಾಧ್ಯಕ್ಷರ ಅಧಿಕಾರಾವಧಿ ಮುಗಿದಿದೆ ಎಂದು ತಿಳಿಸಿದರು. ಇದಕ್ಕೆ ಅಸಮಾಧಾನಗೊಂಡ ಡಿ.ಆರ್.ಪಾಟೀಲ, ಅವರ ಅಧಿಕಾರಾವಧಿ ಮುಗಿದಿದ್ದು, ಇಚೆಗೆ, ಅಲ್ಲಿಯ ತನಕ ಏನು ಮಾಡಿದ್ದೀರಾ. ಆಯಾ ವಾರ್ಡ್ನ ಮಾಜಿ ಸದಸ್ಯರನ್ನೇ ಒಳಗೊಂಡು ಸಮಿತಿ ರಚಿಸಿ ಸಭೆ ನಡೆಸಬೇಕು ಎಂದು ತಾಕೀತು ಮಾಡಿದರು.