

ಪ್ರಮುಖ ಮುಖ್ಯಾಂಶಗಳು
ಬೆಂಗಳೂರು: ಭಾರತದಲ್ಲಿವಿಸ್ತರಿಸುತ್ತಿರುವ ಮುಕ್ತವ್ಯಾಪಾರ ಒಪ್ಪಂದಗಳ (ಎಫ್‌ಟಿಎ)ಪ್ರಯೋಜನಗಳನ್ನುಉಡುಪು ರಫ್ತುದಾರರು ಸಮರ್ಥವಾಗಿಅರ್ಥಮಾಡಿಕೊಂಡು ಪರಿಣಾಮಕಾರಿಯಾಗಿಬಳಸಿಕೊಳ್ಳಲು ನೆರವಾಗುವ ಉದ್ದೇಶದಿಂದಅಪ್ಯಾರೆಲ್ ಎಕ್ಸ್‌ಪೋರ್ಟ್ಪ್ರೊಮೋಶನ್ ಕೌನ್ಸಿಲ್ (ಎಇಪಿಸಿ)ದೇಶವ್ಯಾಪಿಬೆಳವಣಿಗೆಯ ಅವಕಾಶಗಳನ್ನುಅನಾವರಣಗೊಳಿಸಿ ಉಡುಪು ರಫ್ತುದಾರರಿಗಾಗಿಎಫ್‌ಟಿಎಗಳ ಪರಿಣಾಮಕಾರಿ ಬಳಕೆಎಂಬ ವಿಚಾರ ಸಂಕಿರಣ ಸರಣಿಯನ್ನುಆಯೋಜಿಸಿದ್ದು,ಮೊದಲ ವಿಚಾರಸಂಕಿರಣಕ್ಕೆ ಬೆಂಗಳೂರಿನಲ್ಲಿಚಾಲನೆ ನೀಡಲಾಯಿತು.
ಭಾರತದಲ್ಲಿವಿಸ್ತರಿಸುತ್ತಿರುವ ಎಫ್‌ಟಿಎಜಾಲದಿಂದ ಲಭ್ಯವಾಗುವ ಅವಕಾಶಗಳನ್ನುಪರಿಣಾಮಕಾರಿಯಾಗಿ ಬಳಸಿಕೊಂಡುಜಾಗತಿಕ ಮಾರುಕಟ್ಟೆಯಲ್ಲಿ ಭಾರತೀಯಉಡುಪು ಉದ್ಯಮದ ಸ್ಪರ್ಧಾತ್ಮಕತೆಯನ್ನುಹೆಚ್ಚಿಸುವುದು ವಿಚಾರ ಸಂಕಿರಣದಪ್ರಮುಖ ಉದ್ದೇಶವಾಗಿದೆ.
ಎಇಪಿಸಿಅಧ್ಯಕ್ಷರಾದ ಡಾ.ಎ.ಸಕ್ತಿವೆಲ್ಅವರ ಪರಿಕಲ್ಪನೆಯಾದ ಈ ದೇಶವ್ಯಾಪಿವಿಚಾರ ಸಂಕಿರಣ ಸರಣಿಯು,ಭಾರತದಲ್ಲಿಬೆಳೆಯುತ್ತಿರುವ ವ್ಯಾಪಾರಒಪ್ಪಂದಗಳಿಂದ ಸೃಷ್ಟಿಯಾಗುತ್ತಿರುವಅವಕಾಶಗಳನ್ನು ದೇಶದ ಎಲ್ಲಾ ಉಡುಪುರಫ್ತುದಾರರು ಸಮರ್ಪಕವಾಗಿಬಳಸಿಕೊಳ್ಳುವಂತೆ ಮಾಡುವಬದ್ಧತೆಯನ್ನು ಹೊಂದಿದೆ.
ಮೊದಲವಿಚಾರ ಸಂಕಿರಣದಲ್ಲಿ ಕರ್ನಾಟಕಹಾಗೂ ನೆರೆರಾಜ್ಯಗಳ ಉಡುಪುರಫ್ತುದಾರರು,ಉದ್ಯಮದ ಪ್ರತಿನಿಧಿಗಳುಮತ್ತು ವೃತ್ತಿಪರರು ಭಾಗವಹಿಸಿದ್ದು,ರಫ್ತು ವೃದ್ಧಿಹಾಗೂ ಮಾರುಕಟ್ಟೆ ವೈವಿಧ್ಯೀಕರಣದಲ್ಲಿಎಫ್‌ಟಿಎಗಳ ಪ್ರಾಯೋಗಿಕ ಉಪಯೋಗದಬಗ್ಗೆ ಉದ್ಯಮದಲ್ಲಿ ಇರುವಆಸಕ್ತಿಯನ್ನು ಪ್ರತಿಬಿಂಬಿಸಿತು.
ವಿಚಾರಸಂಕಿರಣದಲ್ಲಿ ಮಾತನಾಡಿದ ಐಟಿಎಸ್ಜಂಟಿ ಡಿಜಿಎ್ಟಿ ದೋನಾ ಘೋಷ್,ಭಾರತೀಯ ರಫ್ತುದಾರರಿಗೆಮಾರುಕಟ್ಟೆ ಪ್ರವೇಶವನ್ನುವಿಸ್ತರಿಸುವಲ್ಲಿ ಎಫ್‌ಟಿಎಗಳಮಹತ್ವವನ್ನು ವಿವರಿಸಿ,ಲಭ್ಯವಿರುವಸೌಲಭ್ಯಗಳನ್ನು ಉದ್ಯಮವು ಸಕ್ರಿಯವಾಗಿಬಳಸಿಕೊಳ್ಳುವಂತೆ ಕರೆ ನೀಡಿದರು.
ಕಾರ್ಯಕ್ರಮದಲ್ಲಿಸಿಂಬಯೋಸಿಸ್ ಇನ್‌ಸ್ಟಿಟ್ಯೂಟ್ಆಫ್ ಮ್ಯಾನೇಜ್‌ಮೆಂಟ್ ಸ್ಟಡೀಸ್‌ನಅರ್ಥಶಾಸ್ತ್ರ ಸಹ ಪ್ರಾಧ್ಯಾಪಕಡಾ. ಸಂಜಯ್ಕುಮಾರ್ ಮಂಗ್ಲಾ, ಐಟಿಪಿಒ ವ್ಯಾಪಾರವಿಭಾಗದ ಉಪಾಧ್ಯಕ್ಷೆ ಡಾ.ತಮನ್ನಾಚತುರ್ವೇದಿ,ಎಇಪಿಸಿಯ ದಕ್ಷಿಣವಲಯದ ಮಹಾಪ್ರಬಂಧಕ ಸಿ.ಈಶ್ವರಸುಂದರ್ಮತ್ತಿತರ ಗಣ್ಯರು ಪಾಲ್ಗೊಂಡುವಿಷಯ ಮಂಡಿಸಿದರು.