ಮಳೆಗಾಗಿ ಸಿಂಧನಕೇರಾದಲ್ಲಿ ಕಪ್ಪೆ ಮದುವೆ

ಹುಮನಾಬಾದ್​ ತಾಲೂಕಿನ ಸಿಂಧನಕೇರಾ ಗ್ರಾಮದಲ್ಲಿ ಉತ್ತಮ ಮಳೆಗಾಗಿ ಮಹಿಳೆಯರು ಬುಧವಾರ  ಕಪ್ಪೆ ಮದುವೆ ನೆರವೇರಿಸಿ ಪ್ರಾರ್ಥನೆ ಸಲ್ಲಿಸಿದರು. ಮಾಜಿ ಸಚಿವ ರಾಜಶೇಖರ ಪಾಟೀಲ್​. ಗ್ರಾಮದ ಪ್ರಮುಖರು, ಮಹಿಳೆಯರು ಇದ್ದರು.
ಹುಮನಾಬಾದ್​ ತಾಲೂಕಿನ ಸಿಂಧನಕೇರಾ ಗ್ರಾಮದಲ್ಲಿ ಉತ್ತಮ ಮಳೆಗಾಗಿ ಮಹಿಳೆಯರು ಬುಧವಾರ ಕಪ್ಪೆ ಮದುವೆ ನೆರವೇರಿಸಿ ಪ್ರಾರ್ಥನೆ ಸಲ್ಲಿಸಿದರು. ಮಾಜಿ ಸಚಿವ ರಾಜಶೇಖರ ಪಾಟೀಲ್​. ಗ್ರಾಮದ ಪ್ರಮುಖರು, ಮಹಿಳೆಯರು ಇದ್ದರು.
Published on
ಹುಮನಾಬಾದ್​: ಮಳೆ ಕೊರತೆಯಿಂದ ಆತಂಕಗೊಂಡಿರುವ ರೈತರ ಹಿತಕ್ಕಾಗಿ ತಾಲೂಕಿನ ಸಿಂಧನಕೇರಾ ಗ್ರಾಮದಲ್ಲಿ ಬುಧವಾರ ಮಹಿಳೆಯರು ಸಂಪ್ರದಾಯಬದ್ಧವಾಗಿ ಕಪ್ಪೆ ಮದುವೆ ನೆರವೇರಿಸಿ ಉತ್ತಮ ಮಳೆಯಾಗಲೆಂದು ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಮಾಜಿ ಸಚಿವ ರಾಜಶೇಖರ ಪಾಟೀಲ್​ ಮಾತನಾಡಿ, ಸಮಯಕ್ಕೆ ಸರಿಯಾಗಿ ಉತ್ತಮ ಮಳೆಯಾಗಿ ರೈತರ ಬದುಕು ಹಸನಾಗಲಿ, ಬೆಳೆಗಳು ಸಮೃದ್ಧಿಯಾಗಿ ಬೆಳೆಯಲಿ ಹಾಗೂ ರಾಜ್ಯ ಸುಭಿಕ್ಷವಾಗಿರಲಿ ಎಂದು ದೇವರಲ್ಲಿ ಪ್ರಾರ್ಥಿಸಿದರು. ಗ್ರಾಮೀಣ ಭಾಗದಲ್ಲಿ ಪ್ರಕೃತಿ ಅನುಕೂಲವಾಗಲೆಂದು ಇಂತಹ ಸಾಂಪ್ರದಾಯಿಕ ಆಚರಣೆಗಳು ಜನರ ನಂಬಿಕೆ ಹಾಗೂ ಸಂಸತಿಯ ಪ್ರತಿಕವಾಗಿವೆ. ಮಹಿಳೆಯರು ಪೂಜೆ-ಪುನಸ್ಕಾರ ನೆರವೇರಿಸಿ ಕಪ್ಪೆ ಮದುವೆ ನಡೆಸಿ ಉತ್ತಮ ಮಳೆಯಾಗಿ ರೈತರಿಗೆ ಸಮೃದ್ಧ ಬೆಳೆ ದೊರೆಯಲೆಂದು ಸಾಮೂಹಿಕವಾಗಿ ಪ್ರಾರ್ಥನೆ ಸಲ್ಲಿಸಿದರು. ಮಳೆಯಾಗುವಂತೆ ಬೇಡಿಕೊಂಡರು. ಗ್ರಾಮದ ಮುಖಂಡರು, ಮಹಿಳೆಯರು, ರೈತರು ಹಾಗೂ ಗ್ರಾಮಸ್ಥರು ಪಾಲ್ಗೊಂಡಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net