ಸರ್ಕಾರಿ ನೌಕರರ ಸಂಘದಿಂದ ನೇತ್ರ ಉಚಿತ ಶಸ್ತ್ರಚಿಕಿತ್ಸಾ ಶಿಬಿರ

ತಿ.ನರಸೀಪುರ ಪಟ್ಟಣದ ಗುರುಭವನದಲ್ಲಿ ಸೋಮವಾರ ಉಚಿತ ಕಣ್ಣಿನ ತಪಾಸಣೆ ಹಾಗೂ ಚಿಕಿತ್ಸಾ ಶಿಬಿವರವನ್ನು ಆಯೋಜಿಸಲಾಗಿತ್ತು. ಡಾ.ಮಂಜುನಾಥ್, ಎಂ.ವಿ.ಶಿವಶಂಕರಮೂರ್ತಿ, ಸೋಸಲೆ ನಾಗೇಶ್, ಸುಬ್ರಹ್ಮಣ್ಯ, ಎ.ಗಜೇಂದ್ರ, ರೇವಣ್ಣ, ನಾಗರಾಜು, ನಾರಾಯಣಮೂರ್ತಿ ಇತರರಿದ್ದರು.
ತಿ.ನರಸೀಪುರ ಪಟ್ಟಣದ ಗುರುಭವನದಲ್ಲಿ ಸೋಮವಾರ ಉಚಿತ ಕಣ್ಣಿನ ತಪಾಸಣೆ ಹಾಗೂ ಚಿಕಿತ್ಸಾ ಶಿಬಿವರವನ್ನು ಆಯೋಜಿಸಲಾಗಿತ್ತು. ಡಾ.ಮಂಜುನಾಥ್, ಎಂ.ವಿ.ಶಿವಶಂಕರಮೂರ್ತಿ, ಸೋಸಲೆ ನಾಗೇಶ್, ಸುಬ್ರಹ್ಮಣ್ಯ, ಎ.ಗಜೇಂದ್ರ, ರೇವಣ್ಣ, ನಾಗರಾಜು, ನಾರಾಯಣಮೂರ್ತಿ ಇತರರಿದ್ದರು.
Published on
ತಿ.ನರಸೀಪುರ: ಸರ್ಕಾರಿ ನೌಕರರ ಸಂಘದ ವತಿಯಿಂದ ಸಾರ್ವಜನಿಕರಿಗೆ ಆರೋಗ್ಯ ಸೇವೆಯನ್ನು ನೀಡುವ ಉದ್ದೇಶದಿಂದ ನೇತ್ರ ಉಚಿತ ಶಸ್ತ್ರಚಿಕಿತ್ಸಾ ಶಿಬಿರವನ್ನು ಆಯೋಜಿಸಲಾಗಿದೆ ಎಂದು ಅಧ್ಯಕ್ಷ ಎಂ.ವಿ. ಶಿವಶಂಕರಮೂರ್ತಿ ಹೇಳಿದರು.
ಪಟ್ಟಣದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಆವರಣದಲ್ಲಿರುವ ಗುರುಭವನದಲ್ಲಿ ಸೋಮವಾರ ಸರ್ಕಾರಿ ನೌಕರರ ಸಂಘ, ಬೆಂಗಳೂರು ಶಂಕರ ಕಣ್ಣಿನ ಆಸ್ಪತ್ರೆ, ಮೈಸೂರು ಜಿಲ್ಲಾ ಅಂಧತ್ವ ನಿಯಂತ್ರಣ ವಿಭಾಗದ ಸಹಭಾಗಿತ್ವದಲ್ಲಿ ಆಯೋಜಿಸಿದ್ದ ನೇತ್ರ ಉಚಿತ ಶಸ್ತ್ರಚಿಕಿತ್ಸಾ ಶಿಬಿರದಲ್ಲಿ ಮಾತನಾಡಿದ ಅವರು, ಸರ್ಕಾರೇತರ ಸಂಸ್ಥೆಯಾಗಿ ಕ್ರಿಯಾಶೀಲತೆಯಿಂದ ಕಾರ್ಯನಿರ್ವಹಿಸುತ್ತಿರುವ ಸರ್ಕಾರಿ ನೌಕರರ ಸಂಘದಿಂದ ಈ ಆರೋಗ್ಯ ಶಿಬಿರ ಸಣ್ಣದೊಂದು ಅಳಿಲು ಸೇವೆಯಾಗಿದೆ ಎಂದರು.
ಶಂಕರ ಕಣ್ಣಿನ ಆಸ್ಪತ್ರೆಯ ತಜ್ಞ ವೈದ್ಯ ಡಾ.ಮಂಜುನಾಥ್ ಮಾತನಾಡಿ, ಕಣ್ಣುಗಳು ಅಮೂಲ್ಯವಾಗಿರುವುದರಿಂದ ಕಣ್ಣಿನ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿಯನ್ನು ವಹಿಸಬೇಕು. ಕಣ್ಣಿನ ದೃಷ್ಟಿಯಲ್ಲಿ ದೋಷವಿದ್ದಲ್ಲಿ ಪ್ರಾಥಮಿಕ ಹಂತದಲ್ಲಿ ಚಿಕಿತ್ಸೆಯನ್ನು ಪಡೆಯಬೇಕು. ಸಾಮಾಜಿಕ ಸೇವ ಕಾರ್ಯಗಳ ಭಾಗವಾಗಿ ಸಂಘ ಸಂಸ್ಥೆಗಳು ಆಯೋಜಿಸುವ ಆರೋಗ್ಯ ತಪಾಸಣೆ ಹಾಗೂ ಚಿಕಿತ್ಸಾ ಶಿಬಿರಗಳನ್ನು ಸದುಪಯೋಗಪಡಿಸಿಕೊಳ್ಳಬೇಕೆಂದು ಸಲಹೆ ನೀಡಿದರು.
ಶಿಬಿರದಲ್ಲಿ 800ಕ್ಕೂ ಹೆಚ್ಚು ಸಾರ್ವಜನಿಕರು ಕಣ್ಣಿನ ತಪಾಸಣೆ ಮಾಡಿಸಿಕೊಂಡರು. ಅವರಲ್ಲಿ 189 ಮಂದಿಯನ್ನು ಸ್ಥಳೀಯವಾಗಿ ಚಿಕಿತ್ಸೆ ನೀಡಿದರೆ, ವಿವಿಧ ಕಣ್ಣಿನ ಸಮಸ್ಯೆಯಿರುವ 121 ಮಂದಿಯನ್ನು ಶಸ್ತ್ರಚಿಕಿತ್ಸೆಗೆ ಆಯ್ಕೆ ಮಾಡಿಕೊಳ್ಳಲಾಯಿತು. ವೈದ್ಯಕೀಯ ಸಿಬ್ಬಂದಿ ನೂರ್, ಸೆಹ್ರಿ ಆಪ್ಟಮ್ಸ್, ವೈಷ್ಣವಿ, ದಿವ್ಯ ವಿಕ್ಟ್, ಎನ್.ಶ್ರೀಕಂಠ ಸ್ವಾಮಿ, ಎಸ್. ಸುನಿಲ್‌ಕುಮಾರ್, ಭರತ್ ಕುಮಾರ್ ಹಾಗೂ ಇನ್ನಿತರರು ಕಣ್ಣಿನ ತಪಾಸಣೆ ನಡೆಸಿದರು.
ಸರ್ಕಾರಿ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಸೋಸಲೆ ನಾಗೇಶ್, ಗೌರವಾಧ್ಯಕ್ಷ ಸುಬ್ರಹ್ಮಣ್ಯ, ಖಜಾಂಚಿ ನಾಗರಾಜು, ರಾಜ್ಯ ಪರಿಸರ ಸದಸ್ಯ ನಾರಾಯಣಮೂರ್ತಿ, ಪಶು ಸಂಗೋಪನೆ ಇಲಾಖೆ ಶಿವಸ್ವಾಮಿ, ಬಿಸಿಎಂ ಇಲಾಖೆ ಈಶ್ವರ್, ಆರೋಗ್ಯ ಇಲಾಖೆ ನಾಗು, ಶಂಕರ್, ಸರ್ವೆ ಇಲಾಖೆ ಚಂದ್ರಶೇಖರ್ ಲೋಕೋಪಯೋಗಿ ಇಲಾಖೆ ಮಂಜುನಾಥ್, ಶಿಕ್ಷಕರ ಸಂಘದ ಅಧ್ಯಕ್ಷ ಎ.ಗಜೇಂದ್ರ ಕಾರ್ಯದರ್ಶಿ ರೇವಣ್ಣ, ಖಜಾಂಚಿ ಸಿದ್ದಮಲ್ಲಪ್ಪ ಉಪಾಧ್ಯಕ್ಷ ಸಿ. ಮಹದೇವಸ್ವಾಮಿ ಪಶುಸಂಗೋಪನ ಇಲಾಖೆ ಪಾಪಣ್ಣ, ಕಿಕ್ಕೇರಿ ಶೆಟ್ಟಿ, ರಘು, ಸ್ಕೌಟ್ಸ್ ಮಾಸ್ಟರ್ ನಾಗರಾಜು ಉತ್ತಂಬಳ್ಳಿ ನಾಗರಾಜು, ಕುಮಾರ್, ನೇತ್ರಾಧಿಕಾರಿ ಉಮೇಶ್, ಮಹೇಶ್ ಮೂರ್ತಿ ಹಾಗೂ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net