ಹುಣಸಗಿಯಲ್ಲಿ ಜು.೨೧ರಂದು ಹಮ್ಮಿಕೊಂಡ ಉಚಿತ ನೇತ್ರ ಶಸö ಚಿಕಿತ್ಸೆ ಹಾಗೂ ರಕ್ತದಾನ ಶಿಬಿರದ ಭೀತ್ತಿಪತ್ರವನ್ನು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಿ.ಎನ್.ದಂಡಿನ್ ಬಿಡುಗಡೆ ಮಾಡಿದರು. ಪಪಂ ಸದಸ್ಯ ಸಿದ್ರಾಮಪ್ಪ ಸಾಹು ಮುದಗಲ್, ರಾಚಪ್ಪ ಸಾಹು ಪಟ್ಟಣಶೆಟ್ಟಿ ಇತರರಿದ್ದರು.
ಉಚಿತ ಕಣ್ಣಿನ ತಪಾಸಣೆ ಮತ್ತು ಶಸ್ತ್ರಚಿಕಿತ್ಸಾ ಶಿಬಿರ: ಬರುವ 21 ರಂದು ಉಚಿತ ಸೇವೆ ಲಭ್ಯ.
ಸಾರ್ವಜನಿಕರ ಗಮನಕ್ಕೆ: ಜುಲೈ 21 ರಂದು ಉಚಿತ ನೇತ್ರ ತಪಾಸಣಾ ಶಿಬಿರ ಆಯೋಜನೆ.
ಹುಣಸಗಿ :ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ನಾಗಣ್ಣ ಸಾಹು ದಂಡಿನ್ ಅವರ ನೇತೃತ್ವದಲ್ಲಿ ಜು.೨೧ರಂದು ನೀಲಕಂಠೇಶ್ವರ ದೇವಸ್ಥಾನ ಆವರಣದಲ್ಲಿ ಉಚಿತ ನೇತ್ರ ತಪಾಸಣೆ, ಶಸö ಚಿಕಿತ್ಸೆ ಹಾಗೂ ರಕ್ತದಾನ ಶಿಬಿರ ಹಮ್ಮಿಕೊಳ್ಳಲಾಗಿದೆ ಎಂದು ಹುಣಸಗಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಿ.ಎನ್.ದಂಡಿನ್ ಹೇಳಿದರು.
ಪಟ್ಟಣದಲ್ಲಿ ಶುಕ್ರವಾರ ಕರ‍್ಯಕ್ರಮದ ಭಿತ್ತಿಪತ್ರವನ್ನು ಬಿಡುಗಡೆ ಮಾಡಿ ಮಾತನಾಡಿದ ಅವರು, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ನನ್ನ ಜನ್ಮದಿನ ನಿಮಿತ್ತ ಅಭಿಮಾನಿಗಳು ಈ ಕಾರ್ಯಕ್ರಮ ಆಯೋಜನೆ ಮಾಡಿದ್ದಾರೆ ಎಂದರು.
ಬೆಂಗಳೂರಿನ ಶಂಕರ ಕಣ್ಣಿನ ಆಸ್ಪತ್ರೆಯಿಂದ ನೇತ್ರ ತಪಾಸಣೆ ನಡೆಯಲಿದೆ. ಅಲ್ಲದೆ ಶಸö ಚಿಕಿತ್ಸೆಗೆ ಒಳಪಡುವವರಿಗೆ ಬೆಂಗಳೂರಿಗೆ ಕರೆದುಕೊಂಡು ಹೋಗಿ ಊಟ, ವಸತಿ ಉಚಿತ ನೀಡಲಾಗುವುದು. ಶಿಬಿರದಲ್ಲಿ ಪಾಲ್ಗೊಳ್ಳಲು ಆಧಾರ್ ಕಾರ್ಡ್, -ೆÇÃಟೊ ಕಡ್ಡಾಯವಾಗಿ ತರುವಂತೆ ತಿಳಿಸಿದರು.
ಈ ಕಾರ್ಯಕ್ರಮದಲ್ಲಿ ಸುರಪುರ ಶಾಸಕ ರಾಜಾ ವೇಣುಗೋಪಾಲ ನಾಯಕ ಸೇರಿ ಅನೇಕರು ಭಾಗವಹಿಸಲಿದ್ದಾರೆ. ಪಪಂ ಸದಸ್ಯ ಸಿದ್ರಾಮಪ್ಪ ಸಾಹು ಮುದಗಲ್ ಮಾತನಾಡಿ, ಹುಣಸಗಿಯಲ್ಲಿ ದಂಡಿನ್ ಕುಟುಂಬ ಅನೇಕ ವರ್ಷಗಳಿಂದ ಸಮಾಜಮುಖಿ ಕೆಲಸಗಳಲ್ಲಿ ತೊಡಗಿಸಿಕೊಂಡು ಬಡವರಿಗೆ ನೆರಳಾಗಿದ್ದಾರೆ. ತಮ್ಮ ಜನ್ಮದಿನವನ್ನು ನೆಪವಾಗಿಟ್ಟುಕೊಂಡು ೩ನೇ ವರ್ಷವೂ ಕೂಡ ಉಚಿತ ನೇತ್ರ ತಪಾಸಣೆ, ಶಸöಚಿಕಿತ್ಸೆ, ರಕ್ತದಾನ ಶಿಬಿರದಂತಹ ಜನಪರ ಕಾರ್ಯಕ್ರಮ ಆಯೋಜಿಸಿದ್ದ ಒಳ್ಳೆಯ ಬೆಳವಣಿಗೆಯಾಗಿದೆ. ಬಡವರು ಈ ಶಿಬಿರದ ಲಾಭ ಪಡೆದುಕೊಳ್ಳಬೇಕು ಎಂದು ಹೇಳಿದರು.
ಈ ವೇಳೆ ರಾಚಪ್ಪ ಸಾಹು ಪಟ್ಟಣಶೆಟ್ಟಿ, ಗುಂಡು ಅಂಗಡಿ, ರಮೇಶ ವಾಲಿ, ಚನ್ನಕುಮಾರ ದಿಂಡವಾರ್, ವಿಠ್ಠಲ್ ಪವಾರ, ಅಂಬ್ರೀಶ್ ನೂಲಿನ್, ತಾರಾನಾಥ ಚವ್ಹಾಣ್, ಅಜಯ್ ರಂಗAಪೇಠ ಇತರರಿದ್ದರು.