ಜಮಖಂಡಿ: ಕೇಂದ್ರ ಸರ್ಕಾರದಿಂದ ಸಬ್ಸಿಡಿ ಯೋಜನೆಯಡಿ ಟ್ರ್ಯಾಕ್ಟರ್, ಟ್ರೇಲರ್, ರೋಟವೇಟರ್, ನೇಗಿಲು ಸೇರಿ ವಿವಿಧ ಕೃಷಿ ಉಪಕರಣಗಳನ್ನು ಕೊಡಿಸುವುದಾಗಿ ಮಹಾಲಿಂಗಪುರದ ಕಂಡೇರಮಡ್ಡಿ ನಿವಾಸಿ ರಾಜು ಬಸವಂತ ಗಸ್ತಿ ಬಾಗಲಕೋಟೆ ಹಾಗೂ ಬೆಳಗಾವಿ ಸೇರಿ ವಿವಿಧ ಕಡೆಗಳಲ್ಲಿ ಹಣ ಸಂಗ್ರಹಿಸಿ ವಂಚನೆ ಮಾಡಿದ್ದು, ಈ ಬಗ್ಗೆ ಜಮಖಂಡಿ ಶಹರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ಮಾಡುತ್ತಿದ್ದಾರೆ.