ಹಣ ಡಬಲ್​ ಮಾಡುವುದಾಗಿ ಕೋಟ್ಯಂತರ ರೂ.ವಂಚನೆ ?

Fraud of crores of rupees by promising to double the money?
Fraud of crores of rupees by promising to double the money?
Published on

ಹೊಸಕೋಟೆ:

ಯಳಚಳ್ಳಿಯ ವ್ಯಕ್ತಿಯೊಬ್ಬ ಬುಡಕಟ್ಟು ಅಭಿವೃದ್ಧಿ ಪ್ರಾಜೆಕ್ಟ್​ ಹೆಸರಿನಲ್ಲಿ ಹೂಡಿಕೆ ಹಣವನ್ನು ಕೆಲವೇ ತಿಂಗಳಲ್ಲಿ ಡಬಲ್​ ಮಾಡುವುದಾಗಿ ನಂಬಿಸಿ ಹಣ ಪಡೆದು ಮೋಸ ಮಾಡಿದ್ದಾನೆ ಎಂದು ಆರೋಪಿಸಿ 15ಕ್ಕೂ ಹೆಚ್ಚು ಮಂದಿ ಹೊಸಕೋಟೆ ಠಾಣೆ ಮೆಟ್ಟಿಲೇರಿದ್ದಾರೆ.

ಬುಡಕಟ್ಟು ಅಭಿವೃದ್ಧಿ ಇಲಾಖೆಯಿಂದ ಪ್ರಾಜೆಕ್ಟ್​ ದೊರೆತಿದ್ದು, ಬಡವರಿಗೆ ನಿವೇಶನ ಹಾಗೂ ಮನೆಗಳನ್ನು ಕೊಡಿಸುವುದಾಗಿ ನಂಬಿಸಿದ್ದ ಆಸಾಮಿ, ನಮ್ಮ ಸದಸ್ಯರಿಗೆ 50ರಿಂದ 100 ಕೋಟಿ ರೂ.ವರೆಗೆ ನೀಡುತ್ತೇನೆ. ಒಂದು ತಿಂಗಳು ಜತೆಗಿದ್ದು, ನನ್ನನ್ನು ಬೆಂಬಲಿಸಿ ಎಂದು ಹೇಳಿ ನಮ್ಮಿಂದ ಹಣ ಪಡೆದು ಇದೀಗ ವಂಚಿಸಿದ್ದಾನೆ ಎಂದು ಹಣ ಕಳೆದುಕೊಂಡ ಶಂಕರ್​, ಪರಮೇಶ್​, ರಮೇಶ್​, ರಘುನಂದನ್​, ಪ್ರಮಿಳಾ ಹಾಗೂ ಇತರರು ಪೊಲೀಸರ ಬಳಿ ಅಲವತ್ತುಗೊಂಡಿದ್ದಾರೆ.
ಪೊಲೀಸರಿಗೆ ಮನವಿ: ಹಣ ವಾಪಸ್​ ಕೇಳಿದರೆ ನಾನೊಬ್ಬ ದಲಿತ ವ್ಯಕ್ತಿಯಾಗಿದ್ದು, ನನ್ನ ಮೇಲೆ ದೌರ್ಜನ್ಯ ಎಸಗಲಾಗಿದೆ ಎಂದು ಕೇಸ್​ ದಾಖಲಿಸುವುದಾಗಿ ಬೆದರಿಕೆ ಹಾಕಿದ್ದಾನೆ. ಇನ್ನು ಕೆಲವರಿಗೆ ನಿಮ್ಮ ಹೆಸರಿನಲ್ಲಿ ಡೆತ್​ನೋಟ್​ ಬರೆದು ಆತ್ಮಹತ್ಯೆ ಮಾಡಿಕೊಳ್ಳುತೇನೆ. ಆಗ ನೀವುಗಳೇ ಜೈಲಿಗೆ ಹೋಗಬೇಕು ಎಂದು ಹೆದರಿಸುತ್ತಾನೆ.
ಈ ಬಗ್ಗೆ ಅಧಿಕಾರಿಗಳು ಸಂಪೂರ್ಣ ತನಿಖೆ ನಡೆಸಿ ನ್ಯಾಯ ಒದಗಿಸಬೇಕು ಎಂದು ಪೊಲೀಸ್​ ನಿರೀಕ್ಷಕ ಬಿ.ಟಿ.ಗೋವಿಂದ್​ಗೆ ಸಂತ್ರಸ್ತರು ಮನವಿ ಸಲ್ಲಿಸಿದ್ದಾರೆ. ಪ್ರಕರಣದ ಬಗ್ಗೆ ಡಿವೈಎಸ್​ಪಿ ಅವರೊಂದಿಗೆ ಚರ್ಚಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸ್​ ನಿರೀಕ್ಷಕ ಬಿ.ಟಿ.ಗೋವಿಂದ್​ ಭರವಸೆ ನೀಡಿದ್ದಾರೆ ಎನ್ನಲಾಗಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net