ಚಿಂತಾಮಣಿ:ಕ್ಯಾನ್ಸರ್ ರೋಗ ಗುಣಪಡಿಸುವೆ. ಮಕ್ಕಳಾಗುವ ಔಷಧ ಕೊಡುವೆ ಎಂದು ನಂಬಿಸಿ 60 ಸಾವಿರ ರೂ. ಪಡೆದು ವಂಚಿಸಿರುವುದು ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.
ಪಂಡಿತ್ ಗಂಗಾಧರ್ ಹೆಸರಿನ ವ್ಯಕ್ತಿಯೊಬ್ಬ ೆಬ್ರವರಿಯಲ್ಲಿ ಕೈವಾರ ಗ್ರಾಮದ ಮುರಳಿ ಎಂಬುವರ ಮನೆಗೆ ಬಂದು ತಂದೆಗಿರುವ ರೋಗ ಗುಣಪಡಿಸುವೆ ಹಾಗೂ ಮಕ್ಕಳಾಗಲು ಔಷಧ ನೀಡುವೆ ಎಂದು ಪುಸಲಾಯಿಸಿ ವಂಚನೆ ಮಾಡಿದ್ದಾನೆ ಎಂದು ಚಿಂತಾಮಣಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಂತ್ರಾಲಯದಿಂದ ಬಂದಿರುವುದಾಗಿ ಪರಿಚಯಿಸಿಕೊಂಡ ವಂಚಕ, ಕರ್ನೂಲ್ ಜಿಲ್ಲೆ ಯಮ್ಮಿಗನೂರು ತಾಲೂಕಿನ ಮಂತ್ರಾಲಯದ ಮಾದವಾರ ರೋಡ್ನ ರಾವೇಂದ್ರ ಕಾಲನಿಯಲ್ಲಿ ಪರಂಪರ ಆಯುರ್ವೇದಿಕ್ ಸಂಸ್ಥೆ ಮತ್ತು ಕಲಬುರಗಿಯ ಮುಸ್ಲಿಂ ಚೌಕ್ ರೈಲ್ವೆ ನಿಲ್ದಾಣ ರಸ್ತೆಯ ಸೂಪರ್ ಮಾರ್ಕೆಟ್ನಲ್ಲಿ ಪರಂಪರೆ ಉನ್ಮಾನಿ ಆರ್ಯುವೇದ ಎಂಬ ಸಂಸ್ಥೆ ನಡೆಸುತ್ತಿವೆ ಎಂದು ನಂಬಿಸಿದ್ದಾನೆ.
ಚಿಕಿತ್ಸೆಗಾಗಿ 80 ಸಾವಿರ ರೂ. ನೀಡುವುದಾಗಿ ಒಪ್ಪಿ, ಮೊದಲ ಕಂತಾಗಿ 60 ಸಾವಿರ ರೂ. ನೀಡಿದ್ದು, ಆತ, ಔಷಧ ತರುವುದಾಗಿ ಹೇಳಿ ಹೋದವ ನಾಪತ್ತೆಯಾಗಿದ್ದಾನೆ. ಆತನ ಮೊಬೈಲ್ ಸ್ವಿಚ್ಡ್ ಆ್ ಆಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದು, ವಂಚಕನ ವಿರುದ್ಧ ಕ್ರಮಕ್ಕೆ ಮನವಿ ಮಾಡಿದ್ದಾರೆ.