ಅಪಘಾತದಲ್ಲಿ ನಾಲ್ವರಿಗೆ ಗಾಯ

Four injured in accident
Four injured in accident
Published on
ಚಿಂತಾಮಣಿ: ತಾಲೂಕಿನ ಚಿಂತಾಮಣಿ&ಬಟ್ಟಹಳ್ಳಿ ಮುಖ್ಯರಸ್ತೆಯ ಮಿಂಡಿಗಲ್​ ಗೇಟ್​ ಬಳಿ ಬುಧವಾರ ಸಂಜೆ ಎರಡು ಬೈಕ್​ಗಳ ನಡುವೆ ಮುಖಾಮುಖಿ ಡಿಕ್ಕಿಯಾಗಿ ನಾಲ್ವರು ಗಾಯಗೊಂಡು. ಬೈಕ್​ಗಳು ಸಂಪೂರ್ಣ ಜಖಂಗೊಂಡಿವೆ.
ಗಾಯಾಳು ಚಿಂತಾಮಣಿ ನಗರದ ಎಸ್​.ಪಿ ೆೈನಾನ್ಸ್​ನಲ್ಲಿ ಕಾರ್ಯನಿರ್ವಹಿಸುವ ಜಯಪ್ರಕಾಶ್​, ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆ, ಕೊಮ್ಮಲಕೊಂಡ ತಾಂಡ, ರಾಮಕುಪ್ಪಂ ಮಂಡಲಂ ವಾಸಿ ವಿಜೇಶ್​, ಚಿಂತಾಮಣಿ ತಾಲೂಕಿನ ಇರಗಂಪಲ್ಲಿ ಗ್ರಾಮದ ಕುಮಾರ್​ ಮತ್ತು ನರಸಿಂಹಮೂರ್ತಿ ಗಾಯಗೊಂಡವರು.
ಗಾಯಾಳು ಜಯಪ್ರಕಾಶ್​ ಮತ್ತು ಸ್ನೇಹಿತ ವಿಜೇಶ್​ ೈನಾನ್ಸ್​ ಕಲೆಕ್ಷನ್​ಗಾಗಿ ಇರಗಂಪಲ್ಲಿಗೆ ಹೋಗಿ ಸಂಜೆ ವಾಪಸ್ಸು ಬರುತ್ತಿದ್ದಾಗ ಎದುರುಗಡೆಯಿಂದ ಬಂದ ಕುಮಾರ್​ ಮತ್ತು ನರಸಿಂಹಮೂರ್ತಿ ಇದ್ದ ಬೈಕ್​ ಡಿಕ್ಕಿಯಾಗಿ ಎರಡು ವಾಹನಗಳು ಜಖಂಗೊಂಡಿವೆ. ಗಾಯಾಳುಗಳನ್ನು ಚಿಂತಾಮಣಿ ಸಾರ್ವಜನಿಕ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಬೈಕ್​ ಸವಾರ ಜಯಪ್ರಕಾಶ್​ ನೀಡಿದ ದೂರಿನ ಮೇಲೆ ಕೆಂಚಾರ್ಲಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net