ಆರೋಪಿಗಳಿಂದ 1 ಕೆಜಿ 220 ಗ್ರಾಂ ಗಾಂಜಾ, 500 ರೂ. ನಗದು, 3 ಮೊಬೈಲ್, ದ್ವಿಚಕ್ರ ವಾಹನ ವಶಪಡಿಸಿಕೊಳ್ಳಲಾಗಿದೆ. ವಾಹನವನ್ನು ತಪಾಸಣೆ ಮಾಡಿದಾಗ ಅದರಲ್ಲಿ ಸಣ್ಣ ತಲವಾರ್ ಹಾಗೂ 2 ಮಚ್ಚುಗಳು ಪತ್ತೆಯಾಗಿವೆ. ಈ ಬಗ್ಗೆ ವಿಚಾರಿಸಿದಾಗ ಗಾಂಜಾ ಮಾರಾಟಕ್ಕೆ ಅಡ್ಡಿಪಡಿಸಿದರೆ ಅವರ ಮೇಲೆ ದಾಳಿ ಮಾಡಲು ಇಟ್ಟುಕೊಂಡಿರುವುದಾಗಿ ತಿಳಿಸಿದ್ದಾರೆ. ನಿಷೇಧಿತ ಗಾಂಜಾವನ್ನು ಓಡಿಶಾದಿಂದ ತರಿಸಿರುವುದಾಗಿ ಆರೋಪಿಗಳು ತಿಳಿಸಿದ್ದಾರೆ. ಈ ಕುರಿತು ವಿದ್ಯಾಗಿರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.