ಜೂಜಾಡುತ್ತಿದ್ದ ನಾಲ್ವರ ಬಂಧನ

Four arrested for gambling
Four arrested for gambling
Published on
ಚಿಂತಾಮಣಿ: ತಾಲೂಕಿನ ರಾಸಪಲ್ಲಿ ಅರಣ್ಯದಲ್ಲಿ ಜೂಜು ಅಡ್ಡೆ ಮೇಲೆ ಗುರುವಾರ ದಾಳಿ ನಡೆಸಿದ ಪೊಲೀಸರು, ನಾಲ್ವರನ್ನು ಬಂಧಿಸಿ, 1,860 ರೂ. ನಗದು, ಇಸ್ಪೀಟ್​ ಎಲೆ ವಶಪಡಿಸಿಕೊಂಡಿದ್ದಾರೆ.
ರಾಸಪಲ್ಲಿ ನಿವಾಸಿಗಳಾದ ಪ್ರಭಾಕರ(48), ಮುನಿಕೃಷ್ಣ (42), ಅಂಜಪ್ಪ(45), ಯಾಮಣ್ಣ (48) ಬಂಧಿತರು. ಅರಣ್ಯದಲ್ಲಿ ಜೂಜಾಟ ಆಡುತ್ತಿದ್ದಾರೆಂಬ ಖಚಿತ ಮಾಹಿತಿ ಆಧರಿಸಿ ಕೆಂಚಾರ್ಲಹಳ್ಳಿ ಪಿಎಸ್​ಐ ಶ್ಯಾಮಲಾ, ಪೊಬೇಷನರಿ ಪಿಎಸ್​ಐ ಶರಣಗೌಡ ಎಸ್​.ಮೂಲಿಮಣಿ, ಸಿಬ್ಬಂದಿ ಲೋಕೇಶ್​, ವಿಜಯ್​ ಕುಮಾರ್​ ಮತ್ತು ಶಶಿಕುಮಾರ್​ ತಂಡದೊಂದಿಗೆ ಸ್ಥಳಕ್ಕೆ ಧಾವಿಸಿ ಜೂಜುಕೋರರನ್ನು ಬಂಧಿಸಿದ್ದಾರೆ. ಕೆಂಚಾರ್ಲಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net