

ಪ್ರಮುಖ ಮುಖ್ಯಾಂಶಗಳು
ಕೊನೆ ಹಳ್ಳಿಗೆ ನೀರು ಕೊಡಿ
| ಕೋಟಬಾಗಿ ಜಾಕವೇಲ್ ಬಳಿ ರೈತರ ಅಳಲು | 24ನೇ ದಿನಕ್ಕೆ ಕಾಲಿಟ್ಟ ಪ್ರತಿಭಟನೆ
ವಿಜಯವಾಣಿ ಚಿಕ್ಕೋಡಿ:
ಕಳೆದ ಎರಡು ವರ್ಷದ ಹಿಂದೆ ಚಿಕ್ಕೋಡಿ ತಾಲ್ಲೂಕಿನ 17 ಹಳ್ಳಿಗಳ ರೈತರಿಗೆ ಅನುಕೂಲವಾಗಲೆಂದು ಕೋಟಬಾಗಿ ಏತ ನೀರಾವರಿ ಯೋಜನೆ ಆರಂಭಿಸಲಾಗಿದೆ. ಈ ಮೂಲಕ 17 ಕಿ.ಮಿ ಉದ್ದದ ಕಾಲುವೆಗೆ ನೀರು ಹರಿಸಲು ಯೋಜನೆ ರೂಪಿಸಲಾಗಿದೆ. ಆದರೆ ನೀರಾವರಿ ಇಲಾಖೆ ಅಕಾರಿಗಳ ನಿರ್ವಹಣೆ ಕೊರತೆಯಿಂದ ಇಲ್ಲಿಯವರೆಗೂ ಕಾಲುವೆ ನಿರ್ಮಿಸಿರುವ ಕೊನೆಯ ಹಳ್ಳಿಗಳಿಗೆ ನೀರು ತಲುಪದೆ ಇಲ್ಲಿನ ರೈತರು ನೀರಿಗಾಗಿ ಹೋರಾಟದ ಹಾದಿ ಹಿಡಿದಿದ್ದಾರೆ.
ಹುಕ್ಕೇರಿ ತಾಲ್ಲೂಕಿನಲ್ಲಿ ಹರಿಯುವ ಹಿರಣ್ಯಕೇಶಿ ನದಿಯಿಂದ ಕೋಟಬಾಗಿ ಜಾಕವೇಲ್ ಮೂಲಕ ಚಿಕ್ಕೋಡಿ ತಾಲ್ಲೂಕಿನ ನಾಗರಮುನ್ನೋಳಿ, ಕೆಂಚನಟ್ಟಿ, ಶಿರಹಟ್ಟಿ,ಸಾರಾಪೂರ,ಹಂಚಿನಾಳ,,ಬೆಳಕೂಡ ಸೇರಿ ಒಟ್ಟು ೨೧ ಹಳ್ಳಿಗಳಿಗೆ ಕಾಲುವೆ ನೀರು ಹರಿಸುವ ಯೋಜನೆ ಇದಾಗಿದೆ. ಆದರೆ ಕಳೆದ ೨೦ ವರ್ಷದಿಂದ ಕೊನೆ ಹಳ್ಳಿಗಳಾದ ಬಂಬಲವಾಡ,ಡೊಣವಾಡ,ಕರಗಾವ ಮತ್ತು ಬೆಳಕೂಡ ಗ್ರಾಮಗಳಿಗೆ ನೀರು ಹರಿದಿಲ್ಲ.
ಹೈರಾಣಾದ ರೈತರು:
ಹಿರಣ್ಯಕೇಶಿ ನದಿ ಹರಿಯುತ್ತಿದೆ.ಇದೇ ನದಿಯಿಂದ ಕೋಟಬಾಗಿ ಏತ ನೀರಾವರಿ ಜಾಕವೇಲ್ ನೀರು ಎತ್ತುವ ೯ ಪಂಪ್‌ಸೆಟ್ ಮೇಲಕ್ಕೆ ೪ ಯಂತ್ರಗಳು ಕೆಟ್ಟು ನಿಂತಿರುವ ಕಾರಣದಿಂದ ಕಳೆದ ಹಲವು ವರ್ಷ ಹೂಳು ತೆಗೆಯುವ ಕೆಲಸವಾಗಿಲ್ಲ.ಹಾಗೂ ಕೆಲವು ಕಡೆ ಅನಧಿಕೃತ ನೀರಿನ ಪೈಪ್‌ಲೈನ್ ಬಳಸಿ ನೀರು ಬಳಸುತ್ತಿರುವ ಪರಿಣಾಮ ನೀರು ಕಾಲುವೆಗೆ ಸಮರ್ಪಕವಾಗಿ ಹರಿಯದೆ ೧೦-೧೨ ಗ್ರಾಮಗಳ ಜನರು ಹೈರಾಣಾಗಿದ್ದಾರೆ.
ಉಪವಾಸ ಕುಳಿತರು ಕ್ಯಾರೆ ಎನ್ನದ ಅಡಕೆಗಳು:
ಮುಂಗಾರು ಮಳೆ ಕೊರತೆ ನಡುವೆ ಜನರು ಕಾಲುವೆ ನೀರು ನಂಬಿ ಬಿತ್ತನೆ ಮಾಡಿದ್ದಾರೆ. ಕಾಲುವೆಗೆ ನೀರು ಹರಿದರೆ 5 ಸಾವಿರ ಹೆಕ್ಟೇರ್ ಪ್ರದೇಶಕ್ಕೆ ಅನುಕೂಲವಾಗುತ್ತದೆ. ಆದರೆ ಕಾಲುವೆಗೆ ನೀರು ಕೊನೆ ಹಳ್ಳಿಗೆ ತಲುಪಿದ ಪರಿಣಾಮ ರೈತರು ಕಂಗಾಲಾಗಿ ನೀರು ಹರಿಸುವಂತೆ ಒತ್ತಾಯಿಸಿ ಕಳೆದ 26 ಆ.15 ರಿಂದ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದಾರೆ.
ಕೋಟ್
ಕೋಟಬಾಗಿ ಏತ ನೀರಾವರಿ ಯೋಜನೆ ಒಳಪಡುವ ಕಾಲುವೆಯನ್ನು ಹೂಳು ತೆಗೆಯಬೇಕು, ಕೂಡಲೇ ಪಂಪ್‌ಸೆಟ್ ದುರಸ್ತಿ ಕಾರ್ಯ ಮಾಡಬೇಕು,ಮತ್ತು ಕೊನೆಗೆ ಹಳ್ಳಿಯವರೆಗೆ ನೀರು ಹರಿಸುವ ಲಿಖಿತ ಭರವಸೆ ಜಿಲ್ಲಾಕಾರಿ ನೀಡುವವರೆಗೆ ನಮ್ಮ ಹೋರಾಟ ಮುಂದುವರಿಯಲಿದೆ ಎಂದು ಹೋರಾಟಗಾರ ರಾಚಯ್ಯ ತಿಳಿಸಿದ್ದಾರೆ.