ಇತ್ತ ಅಜ್ಜಿ ಚೆನ್ನಮ್ಮ ಸಾವನ್ನಪ್ಪುತ್ತಿದ್ದಂತೆ, ಅತ್ತ ಅತ್ಯಾಚಾರ ಪ್ರಕರಣದಲ್ಲಿ ಜೈಲು ಸೇರಿರುವ ಮೊಮ್ಮಗ ಪ್ರಜ್ವಲ್ ರೇವಣ್ಣ ಪರೋಲ್ ಮೂಲಕ ಆಚೆ ಬರುತ್ತಾರಾ? ಅಜ್ಜಿಯ ಅಂತಿಮ ದರ್ಶನವನ್ನು ಪಡೆಯುತ್ತಾರಾ? ಎಂಬ ಚರ್ಚೆ ಜೋರಾಗಿದೆ. ಆದರೆ ಇಂದು (ಶನಿವಾರ) ನಾಳೆ (ಭಾನುವಾರ) ನ್ಯಾಯಾಲಯಕ್ಕೆ ರಜೆ ಇರುವ ಕಾರಣ ಪ್ರಜ್ವಲ್ ಆಚೆ ಬರುವುದು ಡೌಟ್ ಎಂದು ಹೇಳಲಾಗುತ್ತಿದೆ. ಅದರೆ ಇದೊಂದು ವಿಶೇಷ ಸನ್ನಿವೇಶವೆಂದು ಭಾವಿಸಿ ಪರೋಲ್ ನೀಡಲು ಕಾನೂನಿನಲ್ಲಿ ಅವಕಾಶವಿದೆ ಎಂದು ಕಾನೂನು ತಜ್ಞರು ಅಭಿಪ್ರಾಯ ವ್ಯಕ್ತ ಪಡಿಸಿದ್ದಾರೆ. ಲಭ್ಯ ಮಾಹಿತಿ ಪ್ರಕಾರ, ಅಜ್ಜಿ ಚೆನ್ನಮ್ಮರ ಅನಾರೋಗ್ಯದ ಕಾರಣ ನ್ಯಾಯಾಲಯಕ್ಕೆ 15 ದಿನಗಳ ಪರೋಲ್ ಕೋರಿ ಪ್ರಜ್ವಲ್ ರೇವಣ್ಣ ಅವರ ವಕೀಲರು ಅರ್ಜಿ ಸಿದ್ಧ ಪಡಿಸಿದ್ದರು ಎಂದು ಹೇಳಲಾಗುತ್ತಿದೆ.