ಈ ವಿಷಯವನ್ನು ತಮ್ಮ ಫೇಸ್ ಬುಕ್ ಖಾತೆಯಲ್ಲಿ ಹಂಚಿಕೊಂಡಿರುವ ಮಾಜಿ ಶಾಸಕಿ ಡಾ. ಅಂಜಲಿ ನಿಂಬಾಳ್ಕರ್, ಇಂದು ಇಂಡಿಗೋ ವಿಮಾನದಲ್ಲಿ ಗೋವಾದಿಂದ ದೆಹಲಿಗೆ ಪ್ರಯಾಣಿಸುತ್ತಿದ್ದಾಗ ವಿಮಾನದಲ್ಲಿ ಸಾವಿನ ಸಮೀಪ ವೈದ್ಯಕೀಯ ತುರ್ತು ಪರಿಸ್ಥಿತಿ ಎದುರಾಗಿತ್ತು ಎಂದು ಹೇಳಿಕೊಂಡಿದ್ದಾರೆ. ವಿಮಾನ ಹೊರಟ ತಕ್ಷಣ, ನಾನು ನಿದ್ದೆ ಮಾಡುತ್ತಿದ್ದೆ, ಹಿಂದಿನಿಂದ ಯಾರೋ ಸಹಾಯಕ್ಕಾಗಿ ಎಂದು ಕಿರುಚಿದರು, ಆಕೆ ಪ್ರಜ್ಞೆ ತಪ್ಪಿದಳು. ಏನು ಮಾಡಬೇಕೆಂದು ತಿಳಿಯುವ ಮೊದಲೇ ನಾನು ನನ್ನ ಸೀಟಿನಿಂದ ಎದ್ದು ಅವಳ ನೆರವಿಗೆ ಧಾವಿಸಿದೆ, 34 ವರ್ಷದ ಹುಡುಗಿಯೊಬ್ಬಳು ಅದಾಗಲೇ ಪ್ರಜ್ಞೆ ತಪ್ಪಿ ಬಿದ್ದಿದ್ದಳು, ನಾಡಿಮಿಡಿತ ದುರ್ಬಲವಾಗಿತ್ತು ಎಂದು ಬರೆದುಕೊಂಡಿದ್ದಾರೆ.