ಹಂಪಿ ಉತ್ಸವದಲ್ಲಿ ಅರಣ್ಯ ಅನಾವರಣ

ಉತ್ಸವದಲ್ಲಿ-ಅರಣ್ಯ-ಇಲಾಖೆಯಿಂದ-ಸೃಷ್ಟಿಸಿರುವ-ಕೃತಕ-ಕಾಡಿನ-ಚಿತ್ರಣ
ಉತ್ಸವದಲ್ಲಿ-ಅರಣ್ಯ-ಇಲಾಖೆಯಿಂದ-ಸೃಷ್ಟಿಸಿರುವ-ಕೃತಕ-ಕಾಡಿನ-ಚಿತ್ರಣ
Published on

ಪ್ರಮುಖ ಮುಖ್ಯಾಂಶಗಳು

  • ಕೃತಕ ಕಾಡು ನಿರ್ಮಾಣ
  • ಅಟಲ್ ಬಿಹಾರಿ ವಾಜಪೇರಿ ಪ್ರಾಣಿ ಸಂಗ್ರಹಾಲಯದ ಪರಿಚಯಾತ್ಮಕ ಮಾಹಿತಿ
  • ಜೀವ ವೈವಿಧ್ಯ ಪರಿಚಯ
ಹಂಪಿ: ವಿವಿಧ ವಸ್ತು ಪ್ರದರ್ಶನಗಳಲ್ಲಿ ಅರಣ್ಯ ಇಲಾಖೆ ಈ ಬಾರಿ ವಿಭಿನ್ನವಾಗಿ ಪ್ರದರ್ಶನ ಏರ್ಪಡಿಸಿದೆ. ಕೃತಕವಾಗಿಯೇ ಅರಣ್ಯ ಮರು ಸೃಷ್ಟಿಸುವ ಮೂಲಕ ಉತ್ಸವಕ್ಕೆ ಬಂದವರಿಗೆ ಕಾಡಿನ ಜೀವ ವೈವಿಧ್ಯ ಪರಿಚಯಿಸುವ ಕೆಲಸ ಮಾಡಿತು. ಗುಡ್ಡಗಾಡು, ಬಗೆ ಬಗೆ ಮರಗಳು, ಪೊಟರೆ, ಹುಲಿ, ಚಿರತೆ, ಕರಡಿ, ನರಿ, ತೋಳ ಹಾಗೂ ಇನ್ನಿತರ ಕಾಡು ಪ್ರಾಣಿಗಳ ಪ್ರತಿಕೃತಿ ನಿರ್ಮಿಸಿದೆ. 
ಕಾಡಿನ ಚಿತ್ರಣ ಭಾಸವಾಗುವಂತೆ ಅಲ್ಲಲ್ಲಿ ಬಲ್ಬ್ ಅಳವಡಿಸಿ ನೈಜ ಅರಣ್ಯ ಎಂಬಂತೆ ಚಿತ್ರಿಸಿದೆ. ಅರಣ್ಯ ಇಲಾಖೆ ಸಿಬ್ಬಂದಿ ಮೂರು ದಿನಗಳ ಕಾಲ ಶ್ರಮವಹಿಸಿ ಇದನ್ನು ನಿರ್ಮಿಸಿದ್ದಾರೆ. ಜತೆಗೆ ಅಟಲ್ ಬಿಹಾರಿ ವಾಜಪೇಯಿ ಪ್ರಾಣಿ ಸಂಗ್ರಹಾಲಯದ ಪರಿಚಯಾತ್ಮಕ ಮಾಹಿತಿಯನ್ನೂ ಒಳಗೊಂಡಿದೆ. ಝೂನಲ್ಲಿನ ಪ್ರಾಣಿಗಳು, 
ಮಾಹಿತಿ ಜತೆಗೆ ಕಾಡು ಪ್ರಾಣಿಗಳ ರಕ್ಷಣೆ ಮಾಡುವಂತೆ ಜಾಗೃತಿ ಕೈಗೊಳ್ಳಲಾಯಿತು. ಕರಡಿಧಾಮ ಮತ್ತು ಇನ್ನಿತರ ಪ್ರವಾಸಿ ತಾಣಗಳನ್ನು ಪರಿಚಯಿಸಿದ್ದು ಪ್ರವಾಸಿಗರಿಗೆ ಅದರ ಮಾಹಿತಿ ಒದಗಿಸಲಾಯಿತು. ಜಿಲ್ಲಾ ಉಸ್ತುವಾರಿ ಸಚಿವ ಬಿ.ಝೆಡ್. ಜಮೀರ್ ಖಾನ್ ಪ್ರದರ್ಶನಕ್ಕೆ ಚಾಲನೆ ನೀಡಿದರು. ಅರಣ್ಯ ಇಲಾಖೆ ಅಧಿಕಾರಿ, ಸಿಬ್ಬಂದಿ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net