ಈಗಿನ ತಲೆಮಾರಿನ ಮಕ್ಕಳಿಗೆ ಬೀಸುವ ಕಲ್ಲು, ಕವಣೆ, ಕೂರಿಗೆ, ಒಳಕಲ್ಲು, ಗಾಣ ಎಲ್ಲವೂ ಅಪರಿಚಿತವೇ. ಪ್ರದರ್ಶನಕ್ಕೆ ಬಂದ ಪಾಲಕರು ಮಕ್ಕಳಿಗೆ ಅವುಗಳ ಹೆಸರು ಹಾಗೂ ಬಳಕೆ ಬಗ್ಗೆ ಮಾಹಿತಿ ನೀಡುವ ಕೆಲಸ ಮಾಡಿದರು. ಜತೆಗೆ ಫೋಟೋ ಕ್ಲಿಕ್ಕಿಸಿಕೊಂಡು ಸಂಭ್ರಮಿಸಿದರು. ಈ ಸಂದರ್ಭದಲ್ಲಿ ಜಂಟಿ ಕೃಷಿ ನಿರ್ದೇಶಕ ಬಿ.ಟಿ.ಮಂಜುನಾಥ, ಉಪ ಕೃಷಿ ನಿರ್ದೇಶಕ ಡಾ.ನಹೀಂಪಾಷ, ಸಹಾಯಕ ನಿರ್ದೇಶಕರಾದ ಮನೋಜ್ ಗೌಡ, ಎಸ್.ಪಿ.ಪಾಟೀಲ್, ವಿ.ಸಿ.ಉಮೇಶ್ ಇತರರಿದ್ದರು.