ನಗರದ ಸುತ್ತಮುತ್ತಲಿನ ಅರಣ್ಯ ಪ್ರದೇಶಗಳನ್ನು ಉದ್ಯಾನವಾಗಿ ಪರಿವತಿಸಲಾಗುವುದು - ಸಿಎಂ ಡಿ.ಕೆ. ಶಿವಕುಮಾರ್

Vidhanasoudha
Vidhanasoudha
Published on

ಪ್ರಮುಖ ಮುಖ್ಯಾಂಶಗಳು

  • * ವಿಧಾನಸೌಧ ಮುಂಭಾಗದ ನಾಡಪ್ರಭು ಕೆಂಪೇಗೌಡರ ಪ್ರತಿಮೆಗೆ ಮಾಲಾರ್ಪಣೆ
ಬೆಂಗಳೂರು : ಬೆಂಗಳೂರು ಸುತ್ತಮುತ್ತಲಿನ ಎಲ್ಲ ಅರಣ್ಯ ಪ್ರದೇಶವನ್ನು ಉದ್ಯಾನವಾಗಿ ಪರಿವರ್ತಿಸಲಾಗುವುದು ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದರು.
ವಿಧಾನಸೌಧ ಮುಂಭಾಗದ ನಾಡಪ್ರಭು ಕೆಂಪೇಗೌಡರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಮಾತನಾಡಿದ ಅವರು, ನಗರದಲ್ಲಿ ಹಸಿರು ಉಳಿಸಿಕೊಳ್ಳುತ್ತೇವೆ. ಕಬ್ಬನ್ ಪಾರ್ಕ್ ರೀತಿ ಹಸಿರು ಬೆಳೆಸುವ ತೀರ್ಮಾನ ಮಾಡಿ ಈಗಾಗಲೇ ಆದೇಶಿಸಲಾಗಿದೆ ಎಂದರು.
ಬೆಂಗಳೂರನ್ನು ಇಡೀ ವಿಶ್ವ ನೋಡುತ್ತಿದೆ. ಈ ನಗರ ಇಲ್ಲದೆ ಇದ್ದಿದ್ದರೆ ಕರ್ನಾಟಕ ಎಲ್ಲಿ ಹೋಗುತ್ತಿತ್ತೋ. ಕೆಂಪೇಗೌಡರ ಆದರ್ಶನ, ವಿಶ್ವಮಾನವ ತತ್ವದ ಬೆಂಗಳೂರು ಬೆಳೆಸಿದ್ದಾರೆ. ನಾವು ನೀವು ಎಲ್ಲರೂ ಸೇರಿ ಒಟ್ಟಾಗಿ ನಗರವನ್ನು ಉಳಿಸಿ ಕಾಪಾಡಿಕೊಂಡು ಹೋಗಬೇಕು. ಬೆಂಗಳೂರಿನಲ್ಲಿ ಹೆಚ್ಚು ಹಸಿರು ಬೆಳೆಸುವ ಮುಲಕ ಗಾರ್ಡನ್ ಸಿಟಿ ಖ್ಯಾತಿಯನ್ನು ಮರುಕಳಿಸಬೇಕು. ಈ ನಿಟ್ಟಿನಲ್ಲಿ ಈಗಾಗಲೇ 15 ಲಕ್ಷ ಸಸಿಗಳನ್ನು ನೆಟ್ಟು ಬೆಳೆಸುವ ಕಾರ್ಯ ಕೈಗೊಳ್ಳಲಾಗಿದೆ ಎಂದು ಹೇಳಿದರು.
ಸಚಿವ ಕೆ.ಎಚ್. ಮುನಿಯಪ್ಪ, ಶಾಸಕ ರಿಜ್ವಾನ್ ಅರ್ಷದ್, ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net